ದಾಂಡೇಲಿ: ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆ ಹಾಗೂ ನಗರದ ಇನ್ನರ್ ವೀಲ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಹುಬ್ಬಳ್ಳಿಯ ಮಹಾವೀರ್ ಲಿಂಬ್ ಸೆಂಟರ್ ಸಹಕಾರದಡಿ ನಗರದ ಮರಾಠಾ ಸಮಾಜ ಭವನದಲ್ಲಿ ಉಚಿತ ಕೃತಕ ಕಾಲು ಜೋಡಣಾ ಶಿಬಿರ ನಡೆಯಿತು.
ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮಧು ಅಂಕೋಲೇಕರ, ಮಹಾವೀರ ಲಿಂಬ್ ಸೆಂಟರಿನ ಪ್ರಮುಖರಾದ ಎಂ.ಎಚ್. ನಾಯ್ಕರ, ವಿಶೇಷ ಚೇತನರ ಸಂಸ್ಥೆಯ ನಾಗಯ್ನಾ ಶಿಬಿರವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮಧು ಅಂಕೋಲೇಕರ, ಮಹಾವೀರ ಲಿಂಬ್ ಸೆಂಟರಿನ ಪ್ರಮುಖರಾದ ಎಂ.ಎಚ್. ನಾಯ್ಕರ ಮಾತನಾಡಿ, ಶಿಬಿರಕ್ಕೆ ಬಂದಿರುವ ಫಲಾನುಭವಿಗಳನ್ನು ಪರಿಶೀಲಿಸಿ ಕೃತಕ ಕಾಲಿನ ಅವಶ್ಯಕತೆ ಇದ್ದವರಿಗೆ ಹೊಂದಿಕೊಳ್ಳುವ ರೀತಿಯಂತೆ ಅಳತೆ ತೆಗೆದು ಅವರಿಗೆ ಒಗ್ಗುವ ಹಾಗೂ ಒಪ್ಪುವ ರೀತಿಯಲ್ಲಿ ಕೃತಕ ಕಾಲುಗಳನ್ನು ತಯಾರಿಸಲಾಗುವುದು. ನ. 16ರಂದು ಕೃತಕ ಕಾಲು ಜೋಡಣಾ ಕಾರ್ಯ ನಡೆಯಲಿದೆ ಎಂದರು.
ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾ ಧಿಕಾರಿ ರಾಜೇಶ ತಿವಾರಿ, ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಸ್ನೇಹಲ್ ಕಂಬದಕೋಣೆ, ಇನ್ನರ್ ವೀಲ್ ಕ್ಲಬ್ ಪ್ರಮುಖರಾದ ದೀಪಾ ನಾಯಕ, ಭಾವನಾ ಅಂಕೋಲೇಕರ, ರೇಷ್ಮಾ ಬಾವಾಜಿ, ಪ್ರೇಮಾ ಬಾವಾಜಿ, ರಾಜೇಶ್ವರಿ ನಾಯಕ, ವಿಜಯ ಕರ್ಕಿ, ಡಾ| ಜಹೇರಾ ಧಪೇದಾರ, ಸುನೀತಾ ಮೆರ್ವಾಡೆ, ಜ್ಯೋತಿ ಕಲ್ಲಣ್ಣವರ, ತರುಣಾ ಕಂಬದಕೋಣೆ, ವಿಜಯಲಕ್ಷ್ಮಿ ನಾಯ್ಕವಾಡಿ ಇನ್ನಿತರರು ಇದ್ದರು. ಶಿಬಿರದಲ್ಲಿ ದಾಂಡೇಲಿ, ಜೋಯಿಡಾ ಮತ್ತು ಹಳಿಯಾಳ ತಾಲೂಕಿನ 30 ಅರ್ಹ ಫಲಾನಭವಿಗಳು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.