Advertisement

ಆಧುನಿಕತೆ ಭರಾಟೆಯಲ್ಲಿ ಕುಸುರಿ ಕಲೆಗಳು ಕಣ್ಮರೆ

05:17 PM Sep 18, 2018 | Team Udayavani |

ಸಂಡೂರು: ಆಧುನಿಕ ಭರಾಟೆಯಲ್ಲಿ ವಿಶ್ವಕರ್ಮ ಸಮಾಜದ ಕುಸುರಿ ಕೆಲಸ ಕಣ್ಮರೆಯಾಗುತ್ತಿದೆ. ಆದರೆ ಅದನ್ನು ಉಳಿಸುವ ನಿಟ್ಟಿನಲ್ಲಿ ಸಮುದಾಯದವರಿಗೆ ಉತ್ತಮ ತರಬೇತಿಯೂ ಅವಶ್ಯವಾಗಿದೆ ಎಂದು ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೆ.ಕುಮಾರಸ್ವಾಮಿ ಹೇಳಿದರು.

Advertisement

ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮುದಾಯದವರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕರಕುಶಲ, ಕೆತ್ತನೆ, ಇತರೆ ಸೂಕ್ಷ್ಮ ಕೆಲಸಗಳನ್ನು ನಾವು ಉಳಿಸಿ ಬೆಳೆಸಬೇಕಾಗಿದೆ ಎಂದು ಕಿವಿಮಾತು ಹೇಳಿದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಈ.ತುಕಾರಾಂ, ಜಯಂತಿಯ ಆಚರಣೆಯ ಮುಖ್ಯ ಉದ್ದೇಶ. ಅವರ ಸನ್ಮಾರ್ಗದಲ್ಲಿ ನಾವೆಲ್ಲರೂ ನಡೆಯುವುದಾಗಿದೆ. ವರ್ಷಕ್ಕೊಮ್ಮೆ ಅವರ ಸ್ಮರಣೆಯ ಮೂಲಕ ನಮ್ಮ ಬದುಕು ಹಸನಗೊಳಿಸಿಕೊಳ್ಳೋಣ ಎಂದು ಕರೆ ನೀಡಿದರು. 

ತಾಲೂಕಿನ ಅಭಿವೃದ್ಧಿಗೆ ಪಣ ತೊಟ್ಟಿದ್ದು, ತಾಲೂಕಿನಾದ್ಯಂತ 10 ಇ-ಗ್ರಂಥಾಲಯ ಸ್ಥಾಪಿಸುವ ಮೂಲಕ ತಾಲೂಕಿನ ಎಲ್ಲಾ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿ ಉನ್ನತ ಸ್ಥಾನಕ್ಕೆ ಹೋಗಬೇಕು ಎನ್ನುವ ಕನಸ್ಸು ಹೊಂದಿದ್ದೇನೆ ಎಂದು ತಿಳಿಸಿದರು. 

ವಿರಕ್ತಮಠದ ಪ್ರಭುಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ಡಾ| ತಿಪ್ಪೇರುದ್ರ ಉಪನ್ಯಾಸ ನೀಡಿದರು.
ಪುರಸಭೆ ಅಧ್ಯಕ್ಷ ಗಡಂಬ್ಲಿ ಚನ್ನಪ್ಪ, ಭುಜಂಗನಗರದ ದ್ಯಾಮಣ್ಣ ಆಚಾರ್‌, ಚಂದ್ರಪ್ಪ, ಭಾಸ್ಕರ್‌, ಬಂಡ್ರಿ, ಗ್ರೇಡ್‌-2
ತಹಶೀಲ್ದಾರ್‌ ಶಿವಕುಮಾರ್‌, ಕ್ಷೇತ್ರ ದೈಹಿಕ ಶಿಕ್ಷಣಾಧಿಕಾರಿ ಎಸ್‌.ಡಿ. ಸಂತಿ, ದಿವಾಕರ ಅಚಾರ್‌ ಇನ್ನಿತರರಿದ್ದರು.
ಮುತ್ತಣ್ಣ ಬಡಿಗಾರ್‌ ನಿರೂಪಿಸಿದರು. ಕಾರ್ಯಕ್ರಮ ಪೂರ್ವದಲ್ಲಿ ಶ್ರೀಕಾಳಿಕಾ ಕಮ್ಮಟೇಶ್ವರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next