Advertisement

ನೆರಳು ಎಂದರೆ ನೆರಳಷ್ಟೆ!

03:59 PM Mar 20, 2021 | Team Udayavani |

ಮಾನವ ಕಣ್ಣಿಗೆ ಕಾಣೋ ದೊಡ್ಡ ವಸ್ತು, ವಿಷಯಗಳಿಂದ ಹಿಡಿದು ಕಣ್ಣಿಗೆ ಕಾಣದಷ್ಟು ಸೂಕ್ಷ್ಮಜೀವಿಯ ವರೆಗೂ ಎಲ್ಲ ರೀತಿಯಲ್ಲಿ ಸಂಶೋಧನೆ ಮಾಡಿದ್ದಾನೆ. ಹೊಸ ವಿಷಯ, ಹೊಸ ವಿಚಾರಗಳನ್ನು ತಿಳಿದುಕೊಳ್ಳುತ್ತಲೇ ಇದ್ದಾನೆ.

Advertisement

ಆದರೆ ನೆರಳು ಎಂದರೇನು? ಇಂದು ಯಾರಾದರೂ ಕೇಳಿದರೆ ನಮ್ಮೆಲ್ಲರ ಉತ್ತರ “ನೆರಳು ಎಂದರೆ ನೆರಳಷ್ಟೇ’. ಸಾಮಾನ್ಯವಾಗಿ ಪ್ರತಿಯೊಂದು ವಿಷಯದಲ್ಲೂ ಕುತೂಹಲ ಹೊಂದಿರುವ ನಾವು ನೆರಳಿನ ವಿಷಯ ಬಂದಾಗ ಆಸಕ್ತಿ ತೋರಿಸುವುದು ತುಂಬಾ ಕಡಿಮೆ.

ಸಾಮಾನ್ಯವಾಗಿ ನಾವು ಈ ನೆರಳಿನ ಮೇಲೆ ಆಸಕ್ತಿ ತೋರುವುದು ಫೋಟೋಗ್ರಾಫಿ ಉದ್ದೇಶದಿಂದ ಮಾತ್ರ. ಅದನ್ನು ಹೊರತುಪಡಿಸಿ ಉಳಿದೆಲ್ಲ ಸಮಯದಲ್ಲಿ ನೆರಳು ಹಿಂದೆ-ಮುಂದೆ, ಆಜು-ಬಾಜಿನಲ್ಲಿ ಇದ್ದರೂ ಕೂಡ ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ನೆರಳು ಕೂಡ ತನ್ನದೇ ಆದ ಆಕರ್ಷಣೆಯನ್ನು ಹೊಂದಿರುತ್ತದೆ ಅದನ್ನು ಗಮನಿಸಬೇಕಷ್ಟೆ.

ಶೂನ್ಯ ನೆರಳು ಹೇಗೆ ಸಂಭವಿಸುತ್ತದೆ?
ಎಲ್ಲರಿಗೂ ತಿಳಿದಿರುವ ಹಾಗೆ ಭೂಮಿ 23.5 ಡಿಗ್ರಿಯಲ್ಲಿ ದಕ್ಷಿಣ ಅಕ್ಷಾಂಶ ಮತ್ತು ಉತ್ತರ ರೇಖಾಂಶಗಳ ನಡುವೆ ಹಾದು ಹೋಗುವಾಗ ಭೂಮಿಯಲ್ಲಿ ನೆರಳು ಕಾಣುವುದಿಲ್ಲ.ಕರ್ಕಾಟಕ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ಪ್ರದೇಶಗಳಲ್ಲಿ ಪ್ರತಿವರ್ಷ ಎರಡು ಸಲ ಶೂನ್ಯ ನೆರಳಿನ ವಿದ್ಯಮಾನ ನಡೆಯುತ್ತದೆ. ಈ ಬಾರಿ ಉಡುಪಿಯಲ್ಲಿ 2020 ಎಪ್ರಿಲ್‌ 25ರಂದು ಮಧ್ಯಾಹ್ನ 12.29ಕ್ಕೆ ಕಾಣಿಸಿದ್ದು, ಮತ್ತೂಮ್ಮೆ ಆಗಸ್ಟ್‌ 17ಕ್ಕೆ ಮಧ್ಯಾಹ್ನ 12.35ಕ್ಕೆ ಕಾಣಸಿಗುತ್ತದೆ ಎಂದು ಹೇಳಲಾಗಿದೆ.

ನೆರಳು ಎಂದರೆ ಏನು? ಅದು ಹೇಗೆ ಮೂಡುತ್ತದೆ?
ನೆರಳಿನ ಇನ್ನೊಂದು ಅರ್ಥ ಛಾಯೆ. ಯಾವುದೇ ಒಂದು ವಸ್ತು ಸೂರ್ಯನ ಬೆಳಕನ್ನು (ವಿಶೇಷವಾಗಿ ನೇರ ಬಿಸಿಲನ್ನು) ತನ್ನೊಳಗಿನಿಂದ ಅಥವಾ ತನ್ನ ಮೇಲಿನಿಂದ ಹಾದು ಹೋಗುವುದನ್ನು ತಡೆದಾಗ ಮೂಡುವುದೇ ನೆರಳು. ಉದಾಹರಣೆಗೆ ಸೂರ್ಯ ಆಕಾಶದಲ್ಲಿ ಲಂಬ (ಉದ್ದ)ವಾಗಿ ಚಲಿಸುವಾಗ ನಮ್ಮ ನೆರಳು ನಮ್ಮ ಪಾದಕ್ಕೆ ಹೊಂದಿಕೊಂಡಂತೆ ಕಾಣಿಸುತ್ತದೆ, ಸೂರ್ಯಾಸ್ತದೊಂದಿಗೆ ನೆರಳು ಕೂಡ ಮರೆಯಾಗುತ್ತ ಹೋಗುತ್ತದೆ. ಇದು ಸೂರ್ಯನ ಕಿರಣ, ಚಲಿಸುವ ದಿಕ್ಕು ಹಾಗೂ ಸಮಯದ ಮೇಲೆ ನಿರ್ಧರಿತವಾಗಿರುತ್ತದೆ. ಸರ್ವೇ ಸಾಮಾನ್ಯವಾಗಿ ನಮಗೆ ನೆರಳಿನಲ್ಲಿ ಕಾಣಸಿಗುವ ಬಣ್ಣ ಕಪ್ಪು ಮಾತ್ರ. ಆದರೆ ಅದನ್ನು ಹೊರತುಪಡಿಸಿ ನೆರಳು ಇನ್ನಿತರ ಬಣ್ಣಗಳನ್ನು ಕೂಡ ಹೊಂದಿದೆ. ಉದಾಹರಣೆಗೆ ಬಿಳಿ ಮತ್ತು ಬೂದು.

Advertisement

ನೆರಳಿನಲ್ಲಿ ಕಾಣಬಹುದಾದ ಇನ್ನೊಂದು ವೈಶಿಷ್ಟ್ಯ ಎಂದರೆ ಅದು ಶೂನ್ಯ ನೆರಳು ಅಥವಾ ವರ್ಷದಲ್ಲಿ ಎರಡು ಬಾರಿ ನೆರಳು ಒಂದು ಸಮಯಕ್ಕೆ ಬಂದಾಗ ಭೂಮಿಯಲ್ಲಿ ನೆರಳು ಮಾಯವಾಗುವುದು ಎನ್ನಬಹುದು. ಇತ್ತೀಚೆಗೆ ಉಡುಪಿಯಲ್ಲೂ ಕೂಡ ಶೂನ್ಯ ನೆರಳಿನ ದಿನ ನಡೆದಿತ್ತು.

ಹೀಗೆ ನೆರಳಿನ ಬಗ್ಗೆಯೂ ತಿಳಿದುಕೊಳ್ಳಲು ಬಹಳಷ್ಟು ವಿಷಯಗಳಿವೆ. ನಮ್ಮಲ್ಲಿರಬೇಕು ಅಷ್ಟೇ.ತನ್ನ ನೆರಳಿನ ಜತೆ ಆಟವಾಡುವ ಪ್ರಾಣಿಗಳಿಗೂ ಅದೇನೆಂದು ತಿಳಿದುಕೊಳ್ಳಲು ಯಾಕೆ ಕುತೂಹಲ? ಈ ಪ್ರಶ್ನೆಗೆ ಉತ್ತರ ನಾವೇ ಹುಡುಕಿಕೊಳ್ಳಬೇಕು. ಕಲಿಕೆ ಎಂಬುದು ಕೇವಲ ಪುಸ್ತಕದಲ್ಲಿ ಅಲ್ಲದೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲೂ ಇರುತ್ತದೆ. ಆಸಕ್ತಿ ಇರುವ ಎಲ್ಲ ವಿಷಯಗಳನ್ನು ತಿಳಿದುಕೊಳ್ಳೋಣ ಎನ್ನುವ ಸಣ್ಣ ಕುತೂಹಲ.

ಮಹಾಲಕ್ಷ್ಮೀ ದೇವಾಡಿಗ, ಎಂ.ಜಿ.ಎಂ ಕಾಲೇಜು ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next