Advertisement
ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್, ಆಯುಷ್ಯಮುಘ್ರ್ಯಂ ಪ್ರತಿಮಂಚಶುಭ್ರ ಯಜ್ಞೋಪವೀತಂ ಬಲಮಸ್ತು ತೇಜಃ ಎಂಬ ಮಂತ್ರದೊದಿಗೆ ವಟುವಿಗೆ ಉಪವೀತ ಸಂಸ್ಕಾರ(ದಿಜತ್ವ ಪ್ರಧಾನ) ಮಾಡಲಾಗುತ್ತದೆ.
Related Articles
Advertisement
ಯಜ್ಞೋಪವೀತ ಧಾರಣೆ
ಜನಿವಾರ ಅಥವಾ ಯಜ್ಞೋಪವೀತ ಧಾರಣೆ ಯಾವಾಗಿನೀಂದ ಆರಂಭವಾಯಿತೆಬುದು ಯಾವುದೇ ಆಧಾರಗಳಲ್ಲಿ ಲಭ್ಯವಿಲ್ಲ. ಪ್ರಾಯಶಃ ಪುರಾಣ ಕಾಲದ ಅನಂತರದಲ್ಲಿ ಯಜ್ಞೋಪವೀತ ಧಾರಣೆ ಆರಂಭವಾಗಿರಬಹುದು.
ಏಕೆಂದರೆ ಹಿಂದೂ ಪುರಾಣಗಳಲ್ಲಿ ಜನಿವಾರದ ಪ್ರಸ್ತಾಪ ವಿರಳವಾದುದರಿಂದ ಹೀಗಾಗಿರಬಹುದು. ಯಜ್ಞೊàಪವೀತ ಎಂಬುದು ಸಂಸ್ಕೃತ ಶಬ್ದ. ಯಾವುದೇ ದೊಡ್ಡ ಯಜ್ಞವನ್ನು ಆರಂಭಿಸುವಾಗ ಯಜ್ಞೊàಪವೀತವನ್ನು ಹೊಸದಾಗಿ ಧರಿಸಿಕೊಳ್ಳುವ ವಾಡಿಕೆ ಈಗಲೂ ಚಾಲ್ತಿಯಲ್ಲಿದೆ. ಯಜ್ಞೊàಪವೀತ ಧಾರಣೆಯು ಒಂದು ದೀಕ್ಷೆಯನ್ನು ಹಿಡಿದ ಸಂಕೇತವಾಗಿದೆ.
ಜನಿವಾರ ಧಾರಣೆ ಸಂಖ್ಯೆ
ಬ್ರಹ್ಮಚಾರಿಗಳು ಒಂದು ಜನಿವಾರವನ್ನು ಹಾಕಬೇಕು.
ಗೃಹಸ್ಥರು/ವಿವಾಹಿತರು ಕನಿಷ್ಟ ಎರಡು ಜನಿವಾರ ಧರಿಸಬೇಕು (ಒಂದು ತನ್ನದು ಇನ್ನೊಂದು ಪತ್ನಿಯ ಪರವಾಗಿ. ಕೆಲವರು ಮೂರು ಧರಿಸುತ್ತಾರೆ.
ಯಾವುದೇ ಧಾರ್ಮಿಕ ಕ್ರಿಯೆ ಮಾಡುವಾಗ ಹಿರಿಯರಿಗೆ ವಂದನೆ ಮಾಡುವಾಗ ಹೆಗಲ ಮೇಲೆ ಉತ್ತರೀಯ ಶಾಲು ಇರಬೇಕೆಂದು ಒಂದು ರೂಢಿಯಲ್ಲಿರುವ ನಿಯಮ. ಆದ್ದರಿಂದ ಉತ್ತರೀಯವಿಲ್ಲದಿದ್ದರೂ ಅದಕ್ಕೆ ಲೋಪಬರದಂತೆ ಉತ್ತರೀಯದ ಬದಲಾಗಿ ಹೆಚ್ಚಿನ ಜನಿವಾರವನ್ನು ಧರಿಸುತ್ತಾರೆ.
ಕೆಲವು ಗೃಹಸ್ಥರು ನಾಲ್ಕು ಜನಿವಾರ ಧರಿಸುವುದೂ ಉಂಟು. ಜನಿವಾರ ತುಂಡಾದರೆ ಆದಷ್ಟು ಬೇಗ ಹೊಸತು ಬರುವ ಅಪರಾಹ್ನದೊಳಗೆ ಜನಿವಾರ ಹಾಕಿಕೊಳ್ಳಬೇಕು. ಆದ್ದರಿಂದ ನಾಲ್ಕು ಜನಿವಾರ ಧರಿಸಿದರೆ ಒಂದು ಜನಿವಾರ ತುಂಡಾದರೂ ಲೋಪವಾಗುವುದಿಲ್ಲ. ಬೇಗ ಪುನಃ ಹೊಸ ಜನಿವಾರ ಹಾಕಿಕೊಳ್ಳುವ ಅವಸರ ಅಗತ್ಯವೂ ಇರುವುದಿಲ್ಲ. ಆದ್ದರಿಂದ ಕೆಲವರು ಮುಂಜಾಗ್ರತಾ ಕ್ರಮಕ್ಕಾಗಿ ನಾಲ್ಕು ಜನಿವಾರ ಹಾಕಿಕೊಳ್ಳುವುದು.
-ಕಾರ್ತಿಕ್ ಕುಮಾರ್
ಏತಡ್ಕ