Advertisement

ಕನಸು ಕಾಣುವ ಹಕ್ಕಿಗಳಿಗೆ ರೆಕ್ಕೆ ಕಟ್ಟಿ..!

03:34 PM Mar 17, 2021 | Team Udayavani |

ನಾ ಹೇಳ ಹೊರಟಿರುವೆ ಒಂದು ಪುಟ್ಟ ಕಥೆ. ಯಾರೋ ಮಹಾತ್ಮರದ್ದೋ, ಹುತಾತ್ಮರದ್ದೋ ಅಲ್ಲ. ಪ್ರತಿಯೊಬ್ಬನ ಬದುಕಿನೊಳಿರುವ ಕನಸುಗಳ ಕಥೆ, ಮನಸುಗಳ ಕಥೆ. ಕನಸು ನನಸಾಗದೆ ಉಳಿದ ಆ ವ್ಯಕ್ತಿಯ ವ್ಯಥೆ.

Advertisement

ಅವನ ತಂದೆ ಹಳ್ಳಿ ಮೇಸ್ಟ್ರೆ ಮೊದಲ ಗುರು, ಗೆಳೆಯ, ರೋಲ್‌ ಮಾಡೆಲ್‌ ಎಲ್ಲವೂ ಆಗಿದ್ದರು. ಎಸೆಸೆಲ್ಸಿ ಫ‌ಲಿತಾಂಶ ದಿನ ಎಲ್ಲೋ ಹೊರಗಡೆ ಹೋಗೋಕೆ ಸಿದ್ಧಗೊಂಡಿದ್ದ ಮಗನನ್ನು “ಇವತ್ತು ರಿಸಲ್ಟ್ ಅಲ್ವೇನೋ! ಅಂತ ನೆನಪಿಸಿದಾಗಲೇ ಆತನಿಗೆ ಅರಿವಾಗಿದ್ದು.

ತಂದೆಯ ಮಾತಿನಂತೆ ರಿಸಲ್ಟ್‌ ನೋಡಿಕೊಂಡು ಬಂದು ಶೇ. 85 ಅಂಕ ಸಿಕ್ಕಿದ ವಿಚಾರ ವನ್ನು ತಂದೆಗೆ ತಿಳಿಸಿದ. ತಂದೆಯ ಸಂತಸಕ್ಕೆ ಪಾರವೇ ಇರಲಿಲ್ಲ. ಈ ಸಂಭ್ರಮವನ್ನು ಎಲ್ಲರಲ್ಲೂ ಕರೆ ಮಾಡಿ ಹಂಚಿಕೊಂಡು ತನ್ನ ಮಗನ ಸಾಧನೆಯನ್ನು ಕೊಂಡಾಡುತ್ತಿದ್ದರು. ಅಷ್ಟೇ ಅಲ್ಲದೆ ಮುಂದಿನ ಕಲಿಕೆಗಾಗಿ ಆ ಕಾಲೇಜು ಬೆಸ್ಟ್‌. ಈ ಕಾಲೇಜು ಬೆಸ್ಟ್‌ ಅಂತ ಸಲಹೆನೂ ಕೊಟ್ಟಿದ್ದರು. ಅತ್ತ ಮಗ ಮುಗ್ಳುನ ಗುತ್ತಾ ತಂದೆಯ ಸಂತಸವನ್ನು ಆಸ್ವಾದಿಸುತ್ತಿದ್ದ. ಮೆಲ್ಲನೆ ತಂದೆಯ ಬಳಿ ಬಂದು ಅಪ್ಪನಂಗೆ ಬರಹಗಾರ ಆಗುವ ಆಸೆ, Artsಗೆ ಸೇರಿಸಿ ಕಲೆಯಲ್ಲಿ ಮುಂದುವರೀತೀನಿ ಅಂತ ಮೆದು ದನಿಯಲ್ಲಿ ಹೇಳಿದ.

ನಾನು ನಿಂಗೆ ಒಳ್ಳೆಯ ಕಾಲೇಜು ಹುಡುಕಿದ್ದೇನೆ. ಚಿಂತೆ ಬೇಡ ಅಂದ್ದಿದ್ರು ಅಪ್ಪ.

ಪಟ್ಟಣದ ಖಾಸಗಿ ಕಾಲೇಜಿಗೆ ವಿಜ್ಞಾನ ವಿಭಾಗಕ್ಕೆ ಸೇರಿಸಿ ಮಗ ಒಳ್ಳೆಯ ಕಾಲೇಜಿನಲ್ಲಿ ಸೀಟ್‌ ಸಿಕ್ಕಿದೆ. ಚೆನ್ನಾಗಿ ಓದಿ ದೊಡ್ಡ ವ್ಯಕ್ತಿ ಆಗಬೇಕು. ಹಾಸ್ಟೆಲ್‌ಗ‌ೂ ಸೇರಿಸಿದ್ದೀನಿ ಅಲ್ಲಿ ಇಲ್ಲಿ ಹೋಗಿ ಸಮಯ ವ್ಯರ್ಥ ಮಾಡದೇ ಓದು ಅಂತ ಬುದ್ದಿ ಮಾತು ಹೇಳಿ, ಮಗನನ್ನ ಕರೆದುಕೊಂಡು ಪ್ರಾಂಶುಪಾಲರ ಕೊಠಡಿಗೆ ಬಂದರು.

Advertisement

ಅಲ್ಲಿ ಮುಂದುವರಿದು, ಅವನೋ Artsಗೆ ಸೇರುತ್ತೇನೆ. ಬರಹಗಾರ ಆಗುತ್ತೇನೆ ಅನ್ನುತ್ತಿದ್ದ. ಸಾಹಿತ್ಯ ಅನ್ನ ಕೊಡುತ್ತಾ ಸರ್‌. ಬುದ್ದಿ ಹೇಳಿ ಸ್ವಲ್ಪ. ಚೆನ್ನಾಗಿ ಓದಿ ಡಾಕ್ಟರ್‌, ಎಂಜಿನಿಯರ್‌ ಆಗೋದು ನನ್ನ ಆಸೆ. ನನ್ನ ತಂದೆ ಬಡ ರೈತ ಸರ್‌. ನಾನೂನು ಚೆನ್ನಾಗಿ ಓದುತ್ತಿದ್ದೆ. ನನ್ನ ಕ್ಲಾಸ್‌ನಲ್ಲಿ ಡಾಕ್ಟರ್‌ ಒಬ್ಬರ ಮಗ ಇದ್ದ. ಅವನು ನನ್ನಷ್ಟೇನೂ ಓದಿರಲಿಲ್ಲ. ಅವನಿಗೆ ಪರೀಕ್ಷೆಯಲ್ಲಿ 70 ಅಂಕ ಬಂದ್ರೆ ನನಗೆ 80 ಬರ್ತಿತ್ತು. ಆದ್ರೂ ಈಗ ಅವ ಓದಿ ದೊಡ್ಡ ಡಾಕ್ಟರ್‌ ಆದ. ಅವರಲ್ಲಿ ಹಣ ಇತ್ತು. ನಾನು ನನ್ನ ಕನಸನ್ನೆಲ್ಲ ಬದಿಗಿಡಬೇಕಾಗಿ ಬಂತು. ಯಾಕಂದರೆ ನನ್ನ ತಂದೆ ಬಡ ರೈತ. ಹೀಗೆ ಎಲ್ಲ ಭಾವನೆಗಳನ್ನ ಪ್ರಾಂಶುಪಾಲರಲ್ಲಿ ತೆರೆದಿಟ್ಟರು ತಂದೆ. ತಂದೆಯ ಆಸೆಯಂತೆ ಮಗನೂ ಮುಂದುವರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಎಳೆಯ ಮನಸು ಕನಸು ಕಟ್ಟಿಕೊಂಡಿದ್ದು ತಪ್ಪಾ. ಆಸಕ್ತಿಯ ಕ್ಷೇತ್ರ ಆರಿಸಿಕೊಳ್ಳಲು ಬಯಸಿದ್ದು ತಪ್ಪಾ? ಅಥವಾ ತನ್ನೆಲ್ಲ ಕಷ್ಟ ನೋವುಗಳನ್ನ ಮಗನಿಗೆ ತೋರದೆ ಬೆಳೆಸಿ ಮಗ ಮುಂದೆ ಕಷ್ಟಕ್ಕೆ ಸಿಲುಕಬಾರದು ಎಂದು ಬಯಸಿದ ತಂದೆಯದ್ದು ತಪ್ಪಾ? ತನ್ನೆಲ್ಲ ಕನಸುಗಳನ್ನ ಅಸೆಗಳನ್ನ ಮೂಟೆಕಟ್ಟಿ ಜೀವನವಿಡೀ ಕುಟುಂಬ, ಮಕ್ಕಳಿಗಾಗಿ ಮೀಸಲಿಡುವವನು ತಂದೆ.

ಎಲ್ಲದಕ್ಕೂ ಮಕ್ಕಳ ಇಷ್ಟಕ್ಕೆ ನಡೆದ ಹೆತ್ತವರಿಗೆ, ಭವಿಷ್ಯ ರೂಪಿಸುವ ಸ್ವಾತಂತ್ರ್ಯ ಸ್ವತಃ ಮಕ್ಕಳ ಕೈಗಿರಿಸುವುದೆ ಸೂಕ್ತ. ಕನಸು, ಗುರಿ ತಪ್ಪಲ್ಲ ಆದರೆ “ನಿಮ್ಮ ಭವಿಷ್ಯ ನಿಮ್ಮ ಕೈಯ್ಯಲ್ಲಿ’ ಎಂಬ ಮಾತಿನಂತೆ ಮಕ್ಕಳ ನಿರ್ಧಾರಕ್ಕೂ ಮನ್ನಣೆ ಕೊಡಬೇಕಲ್ಲವೇ? ತಮ್ಮ ಕನಸುಗಳನ್ನು ಮಕ್ಕಳಲ್ಲಿ ಹೇರುವುದು ಎಷ್ಟು ಸರಿ?

 ರಾಮ್‌ ಮೋಹನ್‌, ಎಸ್‌ಡಿಎಂ ಕಾಲೇಜು, ಉಜಿರೆ 

Advertisement

Udayavani is now on Telegram. Click here to join our channel and stay updated with the latest news.

Next