Advertisement

ಶಾಲಾ ಕಾಲೇಜಲ್ಲಿ ಕ‌ಡಿಮೆ ಆಗಿಲ್ಲ ಮಕ್ಕಳ ಹಾಜರಿ

06:43 PM Mar 25, 2021 | Team Udayavani |

ದೇವನಹಳ್ಳಿ: ಕೊರೊನಾ 2ನೇ ಅಲೆ ಭೀತಿ ಇದ್ದರೂ ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕೊರೊನಾ ಮಾರ್ಗಸೂಚಿ ಪಾಲಿಸುವ ಮೂಲಕ ಪಾಠ ಪ್ರವಚನಗಳನ್ನು ನಡೆಸಲಾಗುತ್ತಿದೆ. ಜಿಲ್ಲಾದ್ಯಂತ ಕೊರೊನಾ ಸೋಂಕಿತರ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

Advertisement

ಇದು ಕೆಲವು ಪೋಷಕರಲ್ಲಿ ಆತಂಕವನ್ನು ಉಂಟು ಮಾಡಿದೆ. ಮಕ್ಕಳನ್ನುಶಾಲಾ ಕಾಲೇಜಿಗೆ ಹೇಗೆ ಕಳುಹಿಸುವುದು ಎಂಬ  ಚಿಂತೆಯೂ ಇದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಗಳಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಇಲ್ಲದಿದ್ದರೆ, ತರಗತಿಗೆ ಸೇರಿಸುವುದಿಲ್ಲ.

ಹೆಚ್ಚುವರಿ ಮಾಸ್ಕ್ ಇಟ್ಟುಕೊÙಲು, ‌Û ಇಲಾಖೆ ಆದೇಶ ಮಾಡಿದಂತೆ ಪ್ರತಿ ಬಾರಿ ಸ್ಯಾನಿಟೈಸರ್‌ ಮಾಡಲಾಗುತ್ತಿದೆ. ಒಂದು ಕೊಠಡಿಯಲ್ಲಿ 30 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ಅಂತರದಲ್ಲಿಯೇ ಕೂರಿಸಲಾಗುತ್ತಿದೆ. 6 ರಿಂದ 10ನೇ ತರಗತಿಯವರೆಗೆ ಪಾಠ ಪ್ರವಚನಗಳು ನಡೆಯುತ್ತಿವೆ. ಶೇ.90 ಹಾಜರಾತಿ ಇದೆ. ಎಲ್ಲಿಯೂ ಸಮಸ್ಯೆ ಬಾರದಂತೆ ಎಚ್ಚರ ವಹಿಸಲಾಗಿದೆ. ಎಲ್ಲಾ ಶಾಲೆಗಳಿಗೆ ಸ್ಯಾನಿಟೈಸರ್‌ ಮಾಡಿ, ಸ್ವತ್ಛಗೊಳಿಸಲಾಗುತ್ತಿದೆ. ತರಗತಿ ಸುಗಮವಾಗಿ ನಡೆಯಲು ಅನುವು ಮಾಡಲಾಗಿದೆ.

ಮಕ್ಕಳಿಗೆ ಮಾಹಿತಿ: ಕಳೆದ ವರ್ಷ ಶಾಲೆ ಮುಚ್ಚಿದ್ದರಿಂದ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿಯೇ ಪಾಠ ಪ್ರವಚನ ಕೇಳುವಂತಾಗಿತ್ತು. ಕೊರೊನಾ 2ನೇ ಅಲೆ ಇದ್ದರೂ ಶಾಲಾ ಕಾಲೇಜುಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅನೇಕ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಏರಿಕೆ ಕಂಡು ಬರುತ್ತಿರುವುದರಿಂದ ಮಕ್ಕಳ ಪೋಷಕರಿಗೆ ಆತಂಕ ಮನೆ ಮಾಡುತ್ತಿದೆ. ಯಾರೂ ಆತಂಕಪಡದಂತೆ ಶಿಕ್ಷಕರು ಮಕ್ಕಳಿಗೆ ಮಾಹಿತಿ ನೀಡುತ್ತಿದ್ದಾರೆ.

ಯಾವುದೇ ವಿದ್ಯಾರ್ಥಿಗಳಲ್ಲಿ ಜ್ವರ, ಕೆಮ್ಮು, ನೆಗಡಿ, ದೇಹದಲ್ಲಿ ಉಷ್ಣಾಂಶ ಹೆಚ್ಚಳ, ತಲೆನೋವು ಕಂಡು ಬಂದರೆ ಅವರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸ ಲಾಗುತ್ತಿದೆ. ಇಂತಹ ಪ್ರಕರಣಗಳು ವಿದ್ಯಾರ್ಥಿಗಳಲ್ಲಿ ಬರಬಾರದೆಂಬ ಕಾರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಉತ್ಸಾಹದಿಂದ ತರಗತಿಗೆ ಬಂದು ಪಾಠ ಪ್ರವಚನಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಎಲ್‌ಕೆಜಿಯಿಂದ ಹಿಡಿದು 5ನೇ ತರಗತಿಯವರೆಗೆ ಇನ್ನೂ ಶಾಲೆ ಪ್ರಾರಂಭಗೊಂಡಿಲ್ಲ.

Advertisement

ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಲು ಪ್ರತಿ ಬಾರಿ ಪ್ರಾಂಶುಪಾಲರ ಸಭೆ ಕರೆದು, ಸೂಚನೆ ನೀಡಲಾಗಿದೆ. ಮಾಸ್ಕ್ ಇಲ್ಲದಿದ್ದರೆ, ಕಾಲೇಜುಗಳಿಗೆ ಸೇರಿಸಬೇಡಿ ಎಂದು ತಿಳಿಸಿದ್ದೇವೆ.

  • ರಾಮಕೃಷ್ಣಯ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆ, ಉಪನಿರ್ದೇಶಕ

ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next