Advertisement
ರೊಟ್ಟಿ ತಯಾರಿಕೆಮತ್ತು ಮಾರಾಟ ಇಲ್ಲಿ ಒಂದು ಉದ್ಯಮವಾಗಿ ಬೆಳೆದಿದೆ.ಆ ಮೂಲಕ ನೂರಾರು ಕುಟುಂಬಗಳ ಹೊಟ್ಟೆಯನ್ನೂತಣ್ಣಗೆ ಇಟ್ಟಿದೆ!. ಕಲಬುರಗಿ ನಗರದಲ್ಲಿ ಕಾಣುವ ಅಗಣಿತರೊಟ್ಟಿ ಕೇಂದ್ರಗಳೇ ಇದಕ್ಕೆ ತಾಜಾ ಸಾಕ್ಷಿ.ಹೆಜ್ಜೆ ಹೆಜ್ಜೆಗೂ ಕಲ್ಬುರ್ಗಿಯ ಮಾಣಿಕೇಶ್ವರಿ ಕಾಲೋನಿ, ಬ್ರಹ್ಮಪುರ,ಶಹಾ ಬಜಾರ್, ಹೀಗೆ ನಗರದ ಎಲ್ಲೆಡೆರೊಟ್ಟಿ ತಯಾರಿಸುವ ಕೇಂದ್ರಗಳಿವೆ. ಪ್ರತಿರೊಟ್ಟಿ ಕೇಂದ್ರಗಳಲ್ಲೂ ಖಡಕ್ ಮತ್ತುಮೆತ್ತನೆ ರೊಟ್ಟಿ ಸಿಗುತ್ತದೆ.
Related Articles
Advertisement
ದಿನವೊಂದಕ್ಕೆ ಎಲ್ಲಾ ಖರ್ಚುವೆಚ್ಚ ತೆಗೆದು ಒಂದು ಸಾಧಾರಣಾ ರೊಟ್ಟಿಕೇಂದ್ರದಿಂದ ಸರಾಸರಿ 300-350 ರೂ. ನಿವ್ವಳ ಲಾಭಗಳಿಸುತ್ತಾರೆ. ಒಟ್ಟಿನಲ್ಲಿ ನೂರಾರು ಮಹಿಳೆಯರಿಗೆ ರೊಟ್ಟಿಕೇಂದ್ರಗಳು ಬದುಕಿಗೆ ಆಸರೆ ಆಗಿದೆ.ವಿದೇಶಗಳಿಗೂ ಹೋಗುತ್ತದೆ…ರೊಟ್ಟಿ ವ್ಯಾಪಾರ ಕೇವಲ ಕಲಬುರಗಿ ನಗರಕ್ಕಷ್ಟೇಸೀಮಿತ ಆಗಿಲ್ಲ. ಬೆಂಗಳೂರು, ಹೈದ್ರಾಬಾದ್, ಬಾಂಬೆಸೇರಿದಂತೆ ರಾಜ್ಯದ ವಿವಿಧ ಮೂಲೆ, ನೆರೆ ರಾಜ್ಯ, ಅಷ್ಟೇಕೆವಿದೇಶಗಳಿಗೂ ಕಳುಹಿಸುತ್ತಾರೆ.
ವಿಶೇಷವಾಗಿ ಖಡಕ್ ರೊಟ್ಟಿಗೆ ಸಿಕ್ಕಾಪಟ್ಟೆಮಾರುಕಟ್ಟೆ ಇದೆ. ಅದರಲ್ಲೂ ಕಟ್ಟಿಗೆಒಲೆಯಲ್ಲಿ ಮಾಡಿದ ರೊಟ್ಟಿಗೆ ಫುಲ್‌ಡಿಮ್ಯಾಂಡ್.ಬಹು ಉದ್ಯೋಗ ಮೊದಲಿಗೆ ರೊಟ್ಟಿ ವ್ಯಾಪಾರವೊಂದನ್ನೇನೆಚ್ಚಿಕೊಂಡು ಅನೇಕ ಕುಟುಂಬಗಳಿದ್ದವು.ಆದರೆ, ಇಂದು ದರ ಸಮರದಿಂದಕೆಲವೊಮ್ಮೆ ಹಾಕಿದ ಬಂಡವಾಳಹಿಂದಿರುಗಿ ಬರುವುದೂ ಕಷ್ಟವಾಗಿದೆ.ಹೀಗಾಗಿ ರೊಟ್ಟಿ ಕೇಂದ್ರದ ಮಾಲಿಕರು ಈಉದ್ಯೋಗದ ಜತೆ ಜತೆಗೆ ಉಪ ಕಸುಬುಆರಂಭಿಸಿದ್ದಾರೆ. ಹಲವರು ಬೇಗನೆರೊಟ್ಟಿಗಳನ್ನು ಮಾರುವ ಉದ್ದೇಶದಿಂದ,ಕಡಿಮೆ ಬೆಲೆಗೇ ಕೊಟ್ಟುಬಿಡುತ್ತಾರೆ.ಇದರಿಂದ ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮಆಗುತ್ತಿದೆ.
ಇಂತಹ ದರ ಸಮರ ಆರೋಗ್ಯಕರ ಅಲ್ಲ. ರೊಟ್ಟಿಕೇಂದ್ರಗಳ ಒಕ್ಕೂಟ ಸ್ಥಾಪನೆ ಆಗಿ, ಏಕರೂಪ ದರ ನಿಗದಿಆಗಬೇಕು. ಇದರಿಂದ ರೊಟ್ಟಿ ಕೇಂದ್ರ ಅವಂಬಿತರಬದುಕು ಹಸನಾಗುತ್ತದೆ..’ ಎನ್ನುತ್ತಾರೆ ಶರಣಜ್ಯೋತಿರೊಟ್ಟಿ ಕೇಂದ್ರದ ಮಾಲೀಕರಾದ ಸಿದ್ದು ಪಡಶೆಟ್ಟಿ
ಸ್ವರೂಪಾನಂದ ಕೊಟ್ಟೂರು