Advertisement
ಶಾಲೆ ಬಿಟ್ಟು ಬಂದಕೂಡಲೇ ಟಿವಿ ಆನ್ ಮಾಡಿದರೆ ಆ ಟಿವಿಗೆ ನಾನೊಬ್ಬನೇ ಯಜಮಾನ ಎನ್ನುವ ಹಾಗೆ ಯಾರಿಗೂ ಟಿವಿ ರಿಮೋಟನ್ನು ಕೊಡದೆ, ನಗುವನ್ನೇ ಮುಖದ ಉಡುಗೆಯಾಗಿ ತೊಟ್ಟು ಕಿಲ ಕಿಲ ಎಂದು ಇಡೀ ಮನೆಯೇ ನಿಶಬ್ದವಾಗಿದ್ದರೂ ಜೋರಾಗಿ ಕಿರುಚುತ್ತ, ಕೂಗುತ್ತ, ಅಮ್ಮನ ಬಳಿ ಪೆಟ್ಟು ತಿಂದ ಆ ದಿನಗಳು ಮರೆಯಲು ಸಾಧ್ಯವಿಲ್ಲದ ಕ್ಷಣಗಳು.
Related Articles
Advertisement
ಕಾರ್ಟೂನ್‌ಗಳನ್ನು ಪ್ರತಿನಿತ್ಯ ನೋಡುವುದು ಹೇಗೆ ನಮ್ಮ ಹವ್ಯಾಸವಾಗಿತ್ತೋ ಹಾಗೆಯೇ ದೊಡ್ಡವರಾದಂತೆ ಕಥೆ, ಕಾದಂಬರಿಗನ್ನು ಪ್ರತಿನಿತ್ಯ ಓದುವ ಹವ್ಯಾಸ ನಮ್ಮದಾದರೆ ನಮಗೆ ತಿಳಿಯದ ಅದೆಷ್ಟೋ ವಿಷಯಗಳ ಅರಿವು ನಮ್ಮದಾಗುವುದು.
ಕಾದಂಬರಿಯಲ್ಲಿ ಅದೆಷ್ಟೋ ಕಥೆಗಳು ನೈಜವಾದ, ನಿಜ ಜೀವನಕ್ಕೆ ಸಂಬಂಧಿಸಿದ, ನಮ್ಮ ಜೀವನಕ್ಕೊಂದು ನೀತಿ ಪಾಠ ಹೇಳುವ ಕಥೆಗಳಿರುತ್ತವೆ. ಅವುಗಳನ್ನು ಓದಿದಾಗ ಅರ್ಥ ಮಾಡಿಕೊಂಡಾಗ ಮಾತ್ರ ನಮ್ಮಲ್ಲಿಯ ಜ್ಞಾನದ ವೃದ್ಧಿಯಾಗುವುದು ಖಂಡಿತ.
ಇಂದಿನ ಯುಗದಲ್ಲಿ ಮೊಬೈಲ್‌ಗಳು ಹೇಗೆ ನಮ್ಮ ನಿತ್ಯ ಜೀವನದ ಸಹಪಾಠಿಯಾಗಿವೆಯೋ ಹಾಗೆಯೇ ಪುಸ್ತಕವು ನಮ್ಮ ಬದುಕಿನ ಭಾಗವಾಗಬೇಕಿದೆ. ಕಥೆ, ಕವನ, ಕಾದಂಬರಿಗಳನ್ನು ಬರೆಯುವುದು, ಓದುವುದು ನಮ್ಮ ಹಿಂದಿನವರ ಕಾಲಕ್ಕೆ ನಿಂತು ಹೋಗಬಾರದು. ಅವರಂತೆ ಬರೆಯಲು ಸಾಧ್ಯವಾಗದಿದ್ದರೂ ನಮ್ಮ ಪ್ರಯತ್ನ ನಾವು ಮಾಡಬೇಕಲ್ಲವೇ?
ಪ್ರಯತ್ನ ಪಟ್ಟಾಗ ಮಾತ್ರ ಫಲ ನಮ್ಮದಾಗುತ್ತದೆ. ಹೆಚ್ಚು ಹೆಚ್ಚು ಓದಿದಾಗ ಮಾತ್ರ ಬರೆಯಲು ಸಾಧ್ಯವಾಗುತ್ತದೆ.
ನಮ್ಮ ಜೀವನದ ಕಥೆ ಕಾರ್ಟೂನ್‌ನಿಂದ ಶುರುವಾಗಿ ಕಾದಂಬರಿಗೆ ಬಂದು ನಿಂತಂದೆ. ಕಾರ್ಟೂನನ್ನು ನೋಡಿ, ಕಾದಂಬರಿಯನ್ನು ಓದಿ, ಕಥೆಯನ್ನು ಬರೆಯಲು ನಾವು ಪ್ರಾರಂಭಿಸುವುದಲ್ಲ. ಕಲಿಯಲು ನೂರು ದಾರಿಗಳಿವೆ ಹುಡುಕುವ ಪ್ರಯತ್ನ ನಮ್ಮದಾಗಬೇಕಷ್ಟೆ.
– ಭಾವನಾ ಪ್ರಭಾಕರ್. ಶಿರಸಿ