Advertisement
ತನ್ನೆಲ್ಲಾ ನೋವನ್ನು ಒಡಲೊಳಗೆ ಬಚ್ಚಿಡುವ ಅಪ್ಪ ಸಿಡುಕ ಅಂತ ಅನ್ಸೋದು ಸಹಜ. ನಮ್ಮೆಲ್ಲ ಬೇಕು ಬೇಡಗಳನ್ನು ಅರ್ಥ ಮಾಡ್ಕೊಳ್ಳೋ ಅಪ್ಪನ ಬೇಕು ಬೇಡಗಳನ್ನು ಅರ್ಥಮಾಡ್ಕೊಳ್ಳೋದ್ರಲ್ಲಿ ನಾವು ಯಾಕೆ ವಿಫಲರಾಗ್ತೀವಿ?
ಮನೆಯಿಂದ ಹೊರಗಿದ್ದು ಕೆಲಸ ಮಾಡೋ ಅಪ್ಪನಿಗೆ ಸಮಾಜದ ಆಗುಹೋಗುಗಳು ನಮಗಿಂತ ಚೆನ್ನಾಗಿ ಅರಿವಿರುತ್ತದೆ. ¤ ಕುಟುಂಬವನ್ನು ಜೋಪಾನ ಮಾಡಿ ಕಾಪಾಡುವ ಹೊಣೆ ಅಪ್ಪನಿದ್ದಾಗಿದ್ದು ಇದನ್ನೆಲ್ಲಾ ತಿಳ್ಕೊಳ್ಳಲೇ ಬೇಕು. ಇದರ ಅರಿವಿರೋದ್ರಿಂದನೇ ಅಪ್ಪ ನಮ್ಮಲ್ಲಿ ಶಿಸ್ತು ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳೋದಿಕ್ಕೆ ಹೇಳ್ತಾರೆ, ಕೆಲವು ಬಾರಿ ಕಟ್ಟುಪಾಡುಗಳನ್ನು ಹಾಕ್ತಾರೆ. ಅವುಗಳನ್ನು ನಾವು ಅನುಸರಿಸದೇ ಇದ್ದ ಸಂದರ್ಭದಲ್ಲಿ ಗದರಬಹುದು ಆದ್ರೆ ಅವನ ಉದ್ದೇಶ ಒಂದೇ ಅವನ ಮಕ್ಕಳಿಗೆ ಜೀವನ ಪಾಠವನ್ನು ಕಲ್ಸೊàದು. ಅಪ್ಪನನ್ನು ಬೈದುಕೊಂಡೆ ನಾವು ಇವುಗಳನ್ನೆಲ್ಲಾ ಕಲ್ತಿರ್ತೀವಿ ಆದ್ರೆ ಅಪ್ಪ ಮಾಡಿದ್ದು ಸರಿ ಅಂತ ಅರ್ಥ ಆಗೋವಾಗ ಬಹಳ ತಡವಾಗುತ್ತದೆ. ಅಪ್ಪಾ ನೀನು ನಮಗೆಲ್ಲವನ್ನು ಮಾಡಿಕೊಡುವುದರ ಜತೆಗೆ ಸ್ವಾಲಂಬಿಯಾಗಿರುವುದನ್ನು ಕಲಿಸಿದ್ದೀಯ, ಅಪ್ಪ ಕೋಪ ಮಾಡಿಕೊಂಡಾಗ ಯಾಕೆ ಹೀಗಾಡ್ತಾರೆ ಅಂತ ಅನ್ಸಿದ್ರು ಅವರು ಆ ರೀತಿ ನಡೆದುಕೊಳ್ಳೊದ್ರ ಫಲನೇ ನಮ್ಮಲ್ಲಿ ಶಿಸ್ತು ಮನೆ ಮಾಡಿರೋದು. ನಾವು ಇವತ್ತು ಎಷ್ಟೇ ಬೇಳೆದು ದೊಡ್ಡವರಾಗಿರಲಿ ನಮ್ಮ ನೋವಲ್ಲಿ ಮೊದಲು ನೆನಪಾಗೋದು ನೀನೆ, ನಮ್ಮ ಪ್ರತಿ ಕಷ್ಟದಲ್ಲು ಜತೆ ನಿಂತವನೂ ನೀನೆ. ತಪ್ಪೋ ಸರಿನೋ ಆದ್ರೆ ಯಾವ ಕ್ಷಣದಲ್ಲಿಯೂ ನಮ್ಮ ಕೈ ಬಿಟ್ಟಿಲ್ಲ ನೀನು. ಸಣ್ಣ ತಪ್ಪಿಗೂ ಗದರುವ ನೀನು ನಮ್ಮ ಸಣ್ಣ ಸಣ್ಣ ಸಾಧನೆಯಲ್ಲಿಯೂ ಸಾರ್ಥಕತೆ ಕಂಡಿದ್ದೀಯ ಅದ್ಕೆ ನೀನಂದ್ರೆ ನಮ್ಗೆ ಗೌರವ ಪ್ರೀತಿ ಎಲ್ಲ. ಮನೆಯಲ್ಲಿ ಎಷ್ಟೇ ಬೈದ್ರೂ ಶಾಲಾ ಕಾಲೇಜುಗಳಲ್ಲಿ ಪೇರೆಂಟ್ಸ್ ಮೀಟಿಂಗ್‌ಗೆ ಬರೋ ನೀನು ನಮ್ಮನ್ನ ಒಂದು ದಿನ ಬಿಟ್ಟು ಕೊಟ್ಟಿದ್ದಿಲ್ಲ. ಅವಾಗೆಲ್ಲ ನಿನ್ನ ಬಗ್ಗೆ ಅಪಾರವಾದ ಹೆಮ್ಮೆ ನಮಗಾಗ್ತಿತ್ತು.
Related Articles
ನಾವು ಸಣ್ಣವರಿದ್ದಾಗ ಆ ಸ್ಕೂಟರ್ ಅಲ್ಲಿ ನಮ್ಮನ್ನೆಲ್ಲಾ ಕೂರಿಸ್ಕೊಂಡು ಹೋಗ್ತಿದ್ದಾಗ ದಾರಿ ಉದ್ದಕ್ಕೂ ನಿಂಗೆ ಎಲ್ಲಾರು ನಮಸ್ತೆ ಮಾಡ್ತಿದ್ರೆ ನಮೊಗೊಂತರ ಗೌರವ, ಜತೆಗೆ ನೀನು ಹೀರೋ ಆಗಿºಡ್ತಿದ್ದೆ ನಮ್ಮ ಕಣ್ಣಲ್ಲಿ. ನೀನು ಯಾವತ್ತಿಗೂ ಹೀರೋನೆ. ಎಷ್ಟೋ ವಿಷಯಗಳನ್ನು ನಮ್ಗೆ ಮನಬಂದಂತೆ ನೀನು ಮಾಡ್ಲಿಕ್ಕೆ ಬಿಡದಿದ್ದಾಗ ನಮ್ಗೆ ನಿನ್ನ ಬಗ್ಗೆ ಬೇಜಾರಾದ್ರೂ ಯಾವತ್ತು ನಮ್ಮನ್ನು ಅನುಮಾನಿಸದೆ ಇದ್ದೆ ಅಲ್ವ ನೀನು? ಅದಕ್ಕಾಗಿ ನಿನ್ನ ಬಗ್ಗೆ ತುಂಬಾ ಹೆಮ್ಮೆ. ಅಪ್ಪಾ ಅಂದ್ರೆ ನಿನ್ನ ಹಾಗೆ ಇರ್ಬೇಕು ಅಂತ ಅನ್ಸಿದ್ದು ಸುಳ್ಳಲ್ಲ.
Advertisement
ಇವತ್ತು ನಾಲ್ಕು ಜನರ ಮಧ್ಯೆ ತಲೆ ಎತ್ತಿ ಓಡಾಡುವ ತಾಕತ್ತನ್ನು ನಮ್ಗೆ ನೀಡಿದ ನೀನು ಗ್ರೇಟ್ . ಎಲ್ಲರ ನೋವಿಗೂ ನಲಿವಾಗೋ ನಮ್ಮಪ್ಪನ ನಗು ನಾವಾಗಬೇಕು. ಮತ್ಯಾಕೆ ಅಲ್ವಾ ಮಕ್ಕಳಿರೋದು. ಕೋಟಿ ಕೋಟಿ ಆಸ್ತಿ ಇದ್ದರೇನು ಬಂತು ಅಪ್ಪನ ಮುಖದಲ್ಲಿ ನಗು ತರಿಸುವ ತಾಕತ್ತು ಮಕ್ಕಳಿಗಿಲ್ಲವಾದರೆ. ಅಪ್ಪ ಮಾಡಿಟ್ಟ ಆಸ್ತಿ ಕರಗಿ ಹೋಗಬಹುದು ಆದ್ರೆ ಅವನು ಕಲಿಸಿದ ಪಾಠಗಳು ಜೀವನದುದ್ದಕ್ಕೂ ನಮ್ಮನ್ನು ಕಾಪಾಡುತ್ತವೆ. ಅಪ್ಪ ಒಂಥರಾ ಆಕಾಶನೆ. ಅವನ ಅಸ್ತಿತ್ವದ ಅನಿವಾರ್ಯಯ ಅರಿವು ನಮಗಾಗದಿದ್ದರೂ ಅವನ ಅನುಪಸ್ಥಿತಿ ಖಂಡಿತ ಅರಿವಾಗುತ್ತದೆ. ನಮ್ಮ ನೆಮ್ಮದಿಯ ಬಾಳಿನ ಸೂತ್ರದಾರನಿಗೆ ಧನ್ಯವಾದ. ನಮ್ಮ ಆಸ್ತಿ ನೀನು. ಅಪ್ಪ.
ಸಾಯಿ ಶ್ರೀಪದ್ಮ ಡಿ.ಎಸ್., ಸಂತ ಫಿಲೋಮಿನಾ ಕಾಲೇಜು, ಮೈಸೂರು