Advertisement
ಅವರಿದ್ದರೆ ಕೋವಿಡ್ ಪರಿಸ್ಥಿತಿಯನ್ನು ಸಮರ್ಥವಾಗಿನಿಭಾಯಿಸು ತ್ತಿದ್ದರು ಎಂದುಅನೇಕರು ಹೇಳುತ್ತಿದ್ದಾರೆ.ಕಾವೇರಿ ಅವರು ಕೋವಿಡ್ ಮೊದಲ ಅಲೆಆರಂಭವಾದಾಗಿನಿಂದ ಜಿಲ್ಲೆಯಲ್ಲಿದ್ದರೆ, ಈಪರಿಸ್ಥಿತಿಯನ್ನು ಬಹಳ ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದರು.
Related Articles
Advertisement
ಘಟನೆ ನಡೆದ ಬಳಿಕ ವಿಷ ಸೇವಿಸಿ ಅಸ್ವಸ್ಥಗೊಂಡವರನ್ನು ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆ ಹಾಗೂಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿಸಿತ್ತು. ಈಎರಡೂ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಇರಲಿಲ್ಲ.ಇದನ್ನು ಮನಗಂಡ ಕಾವೇರಿ ಅವರು ಎಲ್ಲ ಗಾಯಾಳುಗಳನ್ನೂ ಮೈಸೂರಿನ ಕೆ.ಆರ್. ಆಸ್ಪತ್ರೆ ಮಾತ್ರವಲ್ಲದೇ,ವೆಂಟಿಲೇಟರ್ ಸೌಲಭ್ಯಯುಳ್ಳ ವಿವಿಧ ಖಾಸಗಿಆಸ್ಪತ್ರೆಗಳಿಗೆ ದಾಖಲು ಮಾಡಿಸಿದರು.
ಅಲ್ಲದೇಪರಿಸ್ಥಿತಿ ತಹಬದಿಗೆ ಬರುವವರೆಗೂ ತಾವೇ ಖುದ್ದುಆಸ್ಪತ್ರೆಗಳಿಗೆ ತೆರಳಿ ರೋಗಿಗಳ ದೇಖರೇಕಿ ನೋಡಿಕೊಂಡರು. ಇದರಿಂದಾಗಿ ಇನ್ನೂ ಹೆಚ್ಚುವ ಆತಂಕವಿದ್ದಸಾವಿನ ಪ್ರಕರಣಗಳು 17ಕ್ಕೆ ಸೀಮಿತಗೊಂಡವು.ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಟುಂಬಗಳಕಷ್ಟ ಕಂಡು ತಮ್ಮ ಕಷ್ಟ ಎಂಬಂತೆ ಕಾವೇರಿಮರುಗಿದರು. ಬಾಲಕಿಯೊಬ್ಬಳ ಗೋಳಾಟ ನೋಡಲಾಗದೇ ತಾವೂ ಅತ್ತುಬಿಟ್ಟರು.
ಇಷ್ಟೆಲ್ಲ ಕೆಲಸ ಮಾಡಿದರೂ ಅವರು ಒಂದುದಿನವೂ ಇದಕ್ಕೆ ಪ್ರಚಾರ ಬಯಸಲಿಲ್ಲ. ತಾವು ಆಸ್ಪತ್ರೆಯಲ್ಲಿ ಖುದ್ದಾಗಿ ನಿಂತು ಉಸ್ತುವಾರಿ ನೋಡಿಕೊಂಡಫೋಟೋ ಹಾಕಿಸಿಕೊಳ್ಳಲಿಲ್ಲ.ಕಾವೇರಿ ಪ್ರವಾಹ ನಿರ್ವಹಣೆ: ಬಳಿಕ 2019ರಮಳೆಗಾಲದಲ್ಲಿ ಕಾವೇರಿ ಹಾಗೂ ಕಬಿನಿ ನದಿಗಳುತುಂಬಿ ಪ್ರವಾಹ ಪರಿಸ್ಥಿತಿ ಉಂಟಾದಾಗ ಕೊಳ್ಳೇಗಾಲತಾಲೂಕಿನ ಕಾವೇರಿ ನದಿ ಪಾತ್ರದ ಗ್ರಾಮಗಳ ಜನರಸುರಕ್ಷತೆಗೆ ತಾವೇ ಖುದ್ದು ಹಾಜರಾದರು.
ನದಿಯಲ್ಲಿಪ್ರವಾಹ ಕಾಣಿಸಿಕೊಳ್ಳುವ ಮುನ್ನ ಕೆಲ ಗ್ರಾಮಗಳನ್ನುಕೊಳ್ಳೇಗಾಲದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದರು. ಪ್ರವಾಹದ ಸಂದರ್ಭದಲ್ಲಿ ದೋಣಿಯಲ್ಲಿಕುಳಿತು ಪರಿಸ್ಥಿತಿ ಅವಲೋಕಿಸಿದರು. ಅವರಮುಂಜಾಗ್ರತೆಯಿಂದಾಗಿ ಅಂದಿನ ಪ್ರವಾಹಪರಿಸ್ಥಿತಿಯಿಂದ ನದಿಪಾತ್ರದ ಜನರಿಗೆ ಹೆಚ್ಚಿನತೊಂದರೆ ಉಂಟಾಗಲಿಲ್ಲ.ಪ್ರಸ್ತುತ ಬಿ. ಬಿ. ಕಾವೇರಿ ಅವರು ಚಾಮರಾಜನಗರಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಗಿದ್ದಾರೆ.ಇತ್ತೀಚಿಗೆ ಚಾಮರಾಜನಗರ ಜಿಲ್ಲಾ ಪಂಚಾಯಿತಿಆಡಳಿತಾಧಿಕಾರಿಯಾಗಿ ನೇಮಕವಾಗಿದ್ದಾರೆ.
ಕೆ.ಎಸ್.ಬನಶಂಕರ ಆರಾಧ್ಯ