Advertisement
ಹಾಗಾಗಿಯೇ ಟೆಲಿಕಾಂ ಸೇವಾದಾತರ ಆದಾಯ ಸಹಸ್ರ ಕೋಟಿಗಳಲ್ಲಿ ಇದೆ. ಆದರೂ ಈ ಕ್ಷೇತ್ರದಲ್ಲಿ ದೂರವಾಣಿ ಗ್ರಾಹಕರಿಗೆ ನಡೆಯುತ್ತಿರುವ ವಂಚನೆ ದೊಡ್ಡ ಪ್ರಮಾಣದ್ದೇ. ಭಾರತೀಯರು ಮಾತು ಪ್ರಿಯರು. ಟಾಕ್‌ಟೈಮ್ ನಮ್ಮಲ್ಲಿ ಕರಗಿದಷ್ಟು ಬೇರೆ ದೇಶದಲ್ಲಿ ಕರಗಲಿಕ್ಕಿಲ್ಲ. ಆದರೆ ಇದೇ ವೇಳೆ ನಾವು ಟೆಲಿಕಾಂ ಕಂಪನಿಗಳು ಕಾನೂನು ಉಲ್ಲಂ ಸಿ ಮಾಡುವ ಗ್ರಾಹಕ ವಂಚನೆ ವಿರುದ್ಧ ಮಾತನಾಡಬೇಕಿತ್ತು. ದುರದೃಷ್ಟವಶಾತ್ ನಮಗೆ ಕಾನೂನುಗಳೇ ಗೊತ್ತಿಲ್ಲ.ಟ್ರಾಯ್ ನಿಜಕ್ಕೂ ಗ್ರಾಹಕ ಹತ್ತು ಹಲವಾರು ನಿರ್ದೇಶನಗಳನ್ನು ಹೊರಡಿಸಿದೆ. ಇವುಗಳನ್ನು ಟೆಲಿಕಾಂ ಕಂಪನಿಗಳು ಪಾಲಿಸುವುದು ಕಡ್ಡಾಯ. ಜನ ಆಗ್ರಹಿಸುತ್ತಿಲ್ಲ ಎಂಬ ಕಾರಣಕ್ಕೆ ಮೋಸ ನಡೆಯುತ್ತಲೇ ಇದೆ. ಮೊಬೈಲ್ ಇರುವ ನೀವೂ ಮಾತನಾಡಿ. ಆದರೆ ಅನ್ಯಾಯದ ವಿರುದ್ಧವೂ ಮಾತನಾಡಿ ಎಂಬ ಸಲಹೆಯೊಂದಿಗೆ ಕೆಲವು ಕಾನೂನುಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಮೊಬೈಲ್ ಗ್ರಾಹಕರು ಈ ಸಂಕಷ್ಟವನ್ನು ಎದುರಿಸಬಹುದು. ಯಾವುದೋ ಅಪರಿಚಿತ ನಂಬರ್‌ನಿಂದ ಮಿಸ್ಡ್ ಕಾಲ್ ಬರುತ್ತದೆ. ಮಾನವ ಸಹಜ ಕುತೂಹಲ, ಆ ನಂಬರ್‌ಗೆ ತಿರುಗಿ ನೀವೇ ಕರೆ ಮಾಡುತ್ತೀರಿ. ಆ ಕಡೆಯಿಂದ ಕರೆ ಸ್ವೀಕಾರವಾದ ಶಬ್ದ ಬಿಟ್ಟರೆ ಮತ್ತೇನೂ ಕೇಳದು. ಹಲೋ… ಹಲೋ… ಎಂದು ಕರೆ ಕತ್ತರಿಸುತ್ತೀರಿ. ಆದರೆ ಕೇವಲ ಒಂದು ನಿಮಿಷದೊಳಗಿನ ಈ ಕರೆಗೆ ನಿಮಗೆ ಬರೋಬ್ಬರಿ 80 ರೂ. ಟಾಕ್‌ಟೈಮ್‌ನಲ್ಲಿ ಖರ್ಚು ತೋರಿಸಲಾಗುತ್ತದೆ. ಕಿತಾಪತಿ ಮಾಡಿ ಹೊಡೆಸಿಕೊಂಡವರಂತೆ ನಾವು ಸುಮ್ಮನಾಗುತ್ತೇವೆ.
ಯಾರ ಬಳಿ ಈ ನಷ್ಟದ ಮಾತನ್ನೂ ಹೇಳುವುದಿಲ್ಲ. ಟ್ರಾಯ್ ಕಾನೂನಿನ ಪ್ರಕಾರ ಪ್ರತಿ ಚಂದಾದಾರನೂ ಯಾವುದೇ ಒಂದು ಪ್ಲಾನ್‌ಅನ್ನು ಆಯ್ಕೆ ಮಾಡಿಕೊಂಡಾಗ ಅದರ ಕರೆ ವೆಚ್ಚದ ವಿವರಗಳನ್ನು ಸೇವಾ ಕಂಪನಿ ಒದಗಿಸಬೇಕು. ಈ ಆಪರಿಚಿತ ಕರೆಗೆ ಯಾವ ದರ ಅನ್ವಯವಾಯಿತು ಎಂಬುದನ್ನು ಚಂದಾದಾರನಿಗೆ ತಿಳಿಸಲೇಬೇಕಾಗುತ್ತದೆ. ಅದು ಒಂದು ಅಂತಾರಾಷ್ಟ್ರೀಯ ಕರೆ ಎಂದಾದರೂ ಯಾವುದೇ ದೇಶಕ್ಕೆ, ನಿಮಿಷಕ್ಕೆ 80 ರೂ.ಗಳ ದುಬಾರಿ ದರ ಯಾವುದೇ ಪ್ಲಾನ್‌ನಲ್ಲಿಲ್ಲ. ಹಾಗಾಗಿ ಈ ರೀತಿ ಶುಲ್ಕ ಪಡೆಯುವುದು ಕಾನೂನು ಬಾಹಿರ.
Related Articles
Advertisement
ಈ ಹಿನ್ನೆಲೆಯಲ್ಲಿ ಟ್ರಾಯ್ ಫೋನ್ ಬುಕ್‌ನಲ್ಲಿ ನಂಬರ್‌ಗಳನ್ನು ಸಂರಕ್ಷಿಸುವಾಗ ಪ್ರತಿ ಹತ್ತು ಅಂಕಿಗಳ ಮೊಬೈಲ್ ನಂಬರ್‌ಗೆ ಮುನ್ನ +91 ಸೇರಿಸಿಯೇ “ಸೇವ್’ ಮಾಡಲು ಸೂಚಿಸುತ್ತದೆ. ಯಾವುದೇ ಅನಾಮಿಕ ಫೋನ್‌ಗೆ ಕರೆ ಮಾಡುವಾಗಲೂ ಈ ತಂತ್ರ ಬಳಸಲು ಸೂಚಿಸುತ್ತದೆ. ದೂರವಾಣಿ ಸಂಖ್ಯೆಯ ಮೊದಲು 00 ಬಳಸುವುದು ಅಥವಾ ಕೇವಲ + ಬಳಸುವುದು ಸರಿಯಲ್ಲ. ಆಗ ಕರೆ, ಎಸ್‌ಎಂಎಸ್ ಮಾಡಿದಾಗ ಅಂತಾರಾಷ್ಟ್ರೀಯ ಕರೆ ದರ ಬಿದ್ದರೂ ಅಚ್ಚರಿ ಇಲ್ಲ. +91 ಹಾಕಿ ಸಂರಕ್ಷಿಸುವುದರಿಂದ ಒಂದೊಮ್ಮೆ ನೀವು ರೋಮಿಂಗ್‌ನಲ್ಲಿದ್ದಾಗಲೂ ಯಾವುದೇ ನಂಬರ್‌ಗೆ ಫೋನ್ ಬುಕ್ ಬಳಸಿಯೇ ಕರೆ ಮಾಡಬಹುದು. ನೆನಪಿರಲಿ, ಪ್ರೀ ಪೇಯ್ಡ ಗ್ರಾಹಕ ಕೂಡ ತಾನು ಈ ಹಿಂದಿನ ಆರು ತಿಂಗಳಿನೊಳಗೆ ಕರೆ ಮಾಡಿದ ವಿವರ ಪಟ್ಟಿಯನ್ನು ಪಡೆಯಬಹುದು. ಸೇವಾ ಕಂಪನಿ ಗರಿಷ್ಟ 50 ರೂ. ಶುಲ್ಕ ವಿಧಿಸಬಹುದಷ್ಟೇ.
ಕಾಡುವ ಎಸ್‌ಎಂಎಸ್ ಕಾಟ ತಪ್ಪದಿದ್ದರೆ?ರಾಷ್ಟ್ರೀಯ ಅನಪೇಕ್ಷಿತ ಕರೆ ಸ್ಥಗಿತ ಯೋಜನೆ ಎನ್‌ಡಿಎನ್‌ಸಿ ಹೆಚ್ಚು ಪರಿಣಾಮಕಾರಿಯಾಗಿದೆ. 1909ಗೆ ಕರೆ ಅಥವಾ ಎಸ್‌ಎಂಎಸ್ ಮಾಡಿ ನಮಗೆ ಬೇಕಾದ ಮಾದರಿಯ ಕಮರ್ಷಿಯಲ್ ಕರೆಯನ್ನು ಮಾತ್ರ ಸ್ವೀಕರಿಸಬಹುದು. ಯಾವುದೂ ಬೇಡ ಅಂದುಕೊಂಡವರು ಶೂನ್ಯವನ್ನು ಆಯ್ಕೆ ಮಾಡಿದರಾಯಿತು. ಈ ವ್ಯವಸ್ಥೆ ಪ್ರಭಾವಯುತ ಎಂಬುದು ಕೇಂದ್ರ ಸರ್ಕಾರದ ಆಂಬೋಣ. ಆದರೆ ಹಲವು ಮೊಬೈಲ್ ಗ್ರಾಹಕರ ಅನುಭವ ಬೇರೆ, ಕಹಿ! ಹೀಗಾದರೆ ಏನು ಮಾಡಬೇಕು? ನೋಂದಣಿಯ ನಂತರೂ ಅನಪೇಕ್ಷಿತ ಕರೆ, ಎಸ್‌ಎಂಎಸ್ ಬಂದರೆ 1909ಗೆ ಕರೆ ಮಾಡಿ, ಅನಪೇಕ್ಷಿತ ಕರೆಯ ನಂಬರ್(140ನಿಂದ ಆರಂಭವಾಗುತ್ತದೆ) ಹಾಗೂ ದಿನ ಮತ್ತು ಸಮಯವನ್ನು ತಿಳಿಸಬೇಕು. ಕರೆ ಬಂದ ಮೂರು ದಿನದೊಳಗೆ ದೂರು ದಾಖಲಾಗಬೇಕು. ಎಸ್‌ಎಂಎಸ್ ಮೂಲಕವೂ ದೂರು ಸಲ್ಲಿಕೆ ಸಾಧ್ಯ. ಆಗ 1909ಗೆ COMP>< TEL NOXXXXXXXX >