Advertisement
ಸಂಧಿವಾತದ ಸಮಸ್ಯೆಗೆ ಇದು ಸಹ ಒಂದು ಲಾಭದಾಯಕ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಯನ್ನು 7 ದಿನ, 14 ದಿನ, 21 ದಿನಗಳ ಕಾಲ ಮಾಡಿದರೆ ಇನ್ನೂ ಹೆಚ್ಚು ಲಾಭದಾಯಕವಾಗಿದೆ. ಈ ಉಪಕರ್ಮಗಳಲ್ಲದೆ ಪಂಚಕರ್ಮ ಚಿಕಿತ್ಸೆಗಳಿಂದಲೂ ಇನ್ನೂ ಅಧಿಕ ಲಾಭ ಈ ಸಂಧಿಗತವಾತದಲ್ಲಿ ಪಡೆಯಬಹುದಾಗಿದೆ. ಪಂಚಕರ್ಮದ ಪ್ರಾಮುಖ್ಯ ಎಂದರೆ ಬೇರು ಸಮೇತ ಒಂದು ಚಿಕಿತ್ಸಾ ಸಾಧ್ಯ ರೋಗವನ್ನು ಕಿತ್ತೂಗೆಯುವುದು. ಈ ಪಂಚಕರ್ಮಗಳಲ್ಲಿ ಬಸ್ತಿ ಚಿಕಿತ್ಸೆ ಸಂಧಿವಾತ ರೋಗಕ್ಕೆ ಅತ್ಯಂತ ಶ್ರೇಷ್ಠವಾದದ್ದು.
ಇದು ಪಂಚಕರ್ಮಗಳಲ್ಲಿ ಶ್ರೇಷ್ಠವಾದ ಚಿಕಿತ್ಸೆ ಹಾಗೂ ಇದನ್ನು ಅರ್ಧಚಿಕಿತ್ಸಾ ಎಂದು ಕರೆಯಲಾಗುತ್ತದೆ. ಇದು ವಾತದೋಷಕ್ಕೆ ಅತ್ಯಂತ ಶ್ರೇಷ್ಠ ಚಿಕಿತ್ಸೆಯಾಗಿದೆ. ಅಲ್ಲದೆ ಅನೇಕ ಪ್ರಕಾರದ ಬಸ್ತಿಗಳಿರುವುದರಿಂದ ಪಿತ್ತ ಕಫದೋಷಗಳಿಗೂ ಶ್ರೇಷ್ಠ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಯಿಂದ ವಿಕೃತ ವಾತದೋಷ ಶಮನವಾಗಿ ಎಲುಬುಗಳಿಗೆ ಒಳ್ಳೆಯ ಪೋಷಣೆ ಸಿಗುತ್ತದೆ ಹಾಗೂ ಅವುಗಳ ಸವಕಳಿಕೆಯನ್ನು ತಡೆಗಟ್ಟಿ ನೋವು ಹಾಗೂ ಸ್ತಬ್ಧತೆಯ ನಿವಾರಣೆ ಆಗುತ್ತದೆ. ಈ ಚಿಕಿತ್ಸೆಯನ್ನು 8 ದಿನ, 16 ದಿನ, 30 ದಿನಗಳವರೆಗೆ ಕೊಡಬಹುದು. ಈ ಚಿಕಿತ್ಸೆಯಲ್ಲಿ ಔಷಧಯುಕ್ತ ಕಷಾಯವನ್ನು ಅಥವಾ ತೈಲ, ಘೃತವನ್ನು ಗುದದ್ವಾರದ ಮುಖಾಂತರ ಕೊಡಲಾಗುತ್ತದೆ ಹಾಗೂ ಗುದದ್ವಾರದ ಮುಖಾಂತರವೇ ದೇಹದಲ್ಲಿರುವ ದೂಷಿತ ಅಂಶ ಹೊರಹಾಕಲ್ಪಡುತ್ತದೆ. ಈ ಚಿಕಿತ್ಸೆ ಅನೇಕ ಪ್ರಕಾರದ ವಾತವ್ಯಾಧಿಗಳನ್ನು ತಡೆಗಟ್ಟುವಲ್ಲಿ ಸಹಾಯಕವಾಗಿದೆ. ಈ ರೀತಿ ಸಂಧಿವಾತ ರೋಗಕ್ಕೆ ಅನೇಕ ಬಾಹ್ಯ ಉಪಕ್ರಮಗಳು ಹಾಗೂ ಪಂಚಕರ್ಮ ಚಿಕಿತ್ಸೆಗಳಲ್ಲದೆ ಅನೇಕ ತರಹದ ಮಾತ್ರೆ, ಕಷಾಯ, ಅರಿಷ್ಠಗಳು, ಲೇಹ, ಚೂರ್ಣ ಇತ್ಯಾದಿಗಳಿಂದಲೂ ಅನೇಕ ಲಾಭಗಳಿವೆ.
Related Articles
Advertisement