ಬೆಳ್ತಂಗಡಿ: ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಜತೆಗೆ ಕಲೆ, ಅಭ್ಯಾಸಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಗ್ರಾಮೀಣ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಇಂತಹ ಸಾಧನೆಗಳಿಗೆ ಸಂಸ್ಥೆಯಿಂದ ಸದಾ ಪ್ರೋತ್ಸಾಹ ಇದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ರವಿವಾರ ಧರ್ಮಸ್ಥಳದಲ್ಲಿ ಉಜಿರೆ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಗಿನ್ನೆಸ್ ದಾಖಲೆ ಮಾಡಿದ ವಿದ್ಯಾರ್ಥಿಗಳಿಗೆ ಗಿನ್ನೆಸ್ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಒಂದು ಬದಿ ಚಾರ್ಲಿ ಚಾಪ್ಲಿನ್, ಇನ್ನೊಂದು ಬದಿ ಮಿ| ಬೀನ್ ಚಿತ್ರ ಬರುವಂತೆ 20 ವಿದ್ಯಾರ್ಥಿಗಳು ಪೃಥೀÌಶ್ ನೇತೃತ್ವದಲ್ಲಿ ಕ್ಯೂಬ್‌ಗಳನ್ನು ಸ್ಥಳದಲ್ಲಿಯೇ ಬೇಕಾದ ಬಣ್ಣಗಳಿಗೆ ಬರುವಂತೆ ವಿನ್ಯಾಸ ಮಾಡಿ ಅನಂತರ ಚಿತ್ರ ರಚನೆ ಮಾಡಿದ್ದರು. ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ. 4,500 ಕ್ಯೂಬ್‌ಗಳನ್ನು ಬಳಸಲಾಗಿದ್ದು, ಈಗಾಗಲೇ 500 ಶಾಲಾ ವಿದ್ಯಾರ್ಥಿಗಳಿಗೆ ಒಗಟು ಬಿಡಿಸುವ ಕೌಶಲ ಹೇಳಿಕೊಟ್ಟು ಕ್ಯೂಬ್ ವಿತರಿಸಲಾಗಿದೆ. ಇನ್ನೂ 4 ಸಾವಿರ ಕ್ಯೂಬ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಬುದ್ಧಿಮತ್ತೆ ಹೆಚ್ಚಿಸುವ ಈ ಕಲೆ ಇನ್ನಷ್ಟು ಪಸರಿಸಲಿ ಎಂದರು.
ದಾಖಲೆವೀರ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಪೃಥೀÌಶ್ ಕೆ. ಭಟ್ ಮಾತನಾಡಿ, ತಲಾ 5.7 ಸೆಂ.ಮೀ. ಗಾತ್ರದ ಒಟ್ಟು 4,500 ಕ್ಯೂಬ್‌ಗಳ ಜೋಡಣೆ ಕಾರ್ಯ ಪೂರ್ಣಗೊಂಡಾಗ 4.33 ಮೀ. ಎತ್ತರ, 3.46 ಅಗಲ ಒಟ್ಟು 14.981 ಚದರ ಮೀ. ವಿಸ್ತೀರ್ಣದ ಚಿತ್ರ ರಚಿಸಲಾಗಿದೆ. ಗಿನ್ನೆಸ್‌ನಿಂದ ನಮಗೆ 13.41 ಚ.ಮೀ. ಸವಾಲಿನ ಕನಿಷ್ಠ ಮಾನದಂಡ ನೀಡಲಾಗಿತ್ತು.
ಶಿವಪ್ರಸಾದ ಅಜಿಲ, ಪ್ರೊ| ಗಣಪತಿ ಭಟ್ ಕುಳಮರ್ವ ಹಾಗೂ ವಿವೇಕ್ ಪ್ರಸಾದ್ ಮಾಡ ಅವರು ಪರಿಣತ ಸಾಕ್ಷಿಗಳಾಗಿದ್ದುದು ಪ್ರಮಾಣಪತ್ರಕ್ಕೆ ಪೂರಕವಾಯಿತು. ಕಾಲೇಜು, ಆಡಳಿತ ಮಂಡಳಿಯ ಪ್ರೋತ್ಸಾಹ ಅನನ್ಯ. ಪೃಥ್ವೀಶ್ ಜತೆಗೆ ಇದ್ದ 20 ಮಂದಿ ವಿದ್ಯಾರ್ಥಿಗಳಾದ ಪ್ರಜ್ವಲ್ ಪಾಟೀಲ್, ಶರತ್‌ಕೃಷ್ಣ, ವೀರೇಶ್ ಎಸ್.ಬಿ., ಶಾಂತಿನಾಥ, ಶಿವಕುಮಾರ್, ವಿನಯ್, ಸ್ವಪ್ನಿಲ್, ಪ್ರಹ್ಲಾದ್, ಹರಿಕೃಷ್ಣ, ಸಾತ್ವಿಕ್, ಸ್ಟೀಫನ್, ಮಧುರ್, ಕಾರ್ತಿಕ್, ಮಲ್ಲನಗೌಡ ಮೇಟಿ, ಸುಜಯ್, ಸಂಜಯ್ ಹೊಳ್ಳ, ರೋಹನ್, ಶಾಯಿಲ್ ನಾೖಕ್, ಶಿವ ದಾಖಲೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಅವರಿಗೆ ಪ್ರಮಾಣಪತ್ರವನ್ನು ಡಾ| ಹೆಗ್ಗಡೆ ವಿತರಿಸಿದರು.
ಹೇಮಾವತಿ ವೀ. ಹೆಗ್ಗಡೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಕಾಲೇಜಿನ ಪ್ರಾಚಾರ್ಯ ಡಾ| ಸುರೇಶ್, ಪ್ರಾಧ್ಯಾಪಕರಾದ ಡಾ| ಎಸ್.ಪಿ. ಹೆಗಡೆ, ಪ್ರೊ| ಸತ್ಯನಾರಾಯಣ, ಪ್ರೊ| ಮನೋಜ್ ಟಿ. ಗಡಿಯಾರ್, ಪೃಥೀÌಶ್ ಹೆತ್ತವರಾದ ಉಡುಪಿಯ ಬ್ರಹ್ಮಾವರದ ಚೇರ್ಕಾಡಿಯ ಪೇತ್ರಿಯ ಶ್ಯಾಮಪ್ರಸಾದ್-ಪ್ರಸನ್ನಾ ಹಾಗೂ ಇತರರು ಉಪಸ್ಥಿತರಿದ್ದರು.