Advertisement

Art of Living ಸಾಂಸ್ಕೃತಿಕ ಉತ್ಸವಕ್ಕೆ ಭಾವೈಕ್ಯದ ಸಮಾರೋಪ

12:24 AM Oct 03, 2023 | Team Udayavani |

ವಾಷಿಂಗ್ಟನ್‌: ಶ್ರೀ ರವಿಶಂಕರ್‌ ಗುರೂಜಿ ಅವರ ಆರ್ಟ್‌ ಆಫ್ ಲಿವಿಂಗ್‌ ಸಂಸ್ಥೆ ವತಿಯಿಂದ ಅಮೆ ರಿಕದ ವಾಷಿಂಗ್ಟನ್‌ನಲ್ಲಿ ಆಯೋಜಿ ಸಲಾಗಿದ್ದ “ವಿಶ್ವ ಸಾಂಸ್ಕೃತಿಕ ಉತ್ಸವ’ ಸೋಮವಾರ ಸಮಾರೋಪ ಗೊಂಡಿದೆ. 180 ದೇಶಗಳ ಪ್ರತಿನಿಧಿ ಗಳು, 10 ಸಾವಿರ ಕಲಾವಿದರು, 51 ಸಾಂಸ್ಕೃತಿಕ ಪ್ರದರ್ಶನಗಳ ಜತೆಗೆ ವಿಶ್ವದ ಹಲವು ಗಣ್ಯರ ಸಮ್ಮುಖದಲ್ಲಿ ಸಂಸ್ಕೃತಿಯ ಮೂಲಕ ಭ್ರಾತೃತ್ವ, ಭಾವೈಕ್ಯ, ಏಕತೆ, ಮಾನವೀ ಯತೆಯ ಸಂದೇಶವನ್ನು ಜಗತ್ತಿಗೆ ಸಾರಿದ ಹೆಗ್ಗಳಿಕೆ ಈ ವೇದಿಕೆಯದ್ದು.

Advertisement

3 ದಿನಗಳ ಅವಧಿಯ ಕಾರ್ಯ ಕ್ರಮದ ಕೊನೆಯ ದಿನವಾದ ಸೋಮ ವಾರ ದಕ್ಷಿಣ ಏಷ್ಯಾ, ಲ್ಯಾಟಿನ್‌ ಅಮೆರಿಕ, ಕೆರಬಿಯನ್‌ ದ್ವೀಪಗಳ ವೈಭವೋಪೇತ ಸಾಂಸ್ಕೃ ತಿಕ ಪ್ರದರ್ಶನಗಳನ್ನು ನೀಡಲಾಗಿದೆ. ನೃತ್ಯ, ಸಂಗೀತ, ಧ್ಯಾನ, ಯೋಗ ವನ್ನು ಮೇಳೈಸಿದ್ದ ಈ ಮೂರು ದಿನದ ಈ ಸಮಾರಂಭಕ್ಕೆ ಜಗತ್ತಿನ ಮೂಲೆ-ಮೂಲೆಗಳಿಂದ ಆಗಮಿಸಿ ಸಾಕ್ಷಿಯಾಗಿದ್ದು ಬರೋಬ್ಬರಿ 10 ಲಕ್ಷ ಮಂದಿ.

ಭಾರತದ ಪಾರಂಪರಿಕ ಶಾಸ್ತ್ರೀಯ ನೃತ್ಯಗಳಾದ ಭರತನಾಟ್ಯ, ಕಥಕ್‌, ಒಡಿಸ್ಸಿ, ಕುಚುಪುಡಿ ಮತ್ತು ಮೋಹಿನಿ ಆಟ್ಟಂ ಸೇರಿದ “ಪಂಚ ಭೂತಂ’ ಪ್ರದರ್ಶನದ ಮೂಲಕ ಮೊದಲ ದಿನದ ಆರಂಭಕಂಡ ಉತ್ಸ ವ ದಲ್ಲಿ 10 ಸಾವಿರ ಕಲಾ ವಿದರನ್ನೊಳಗೊಂಡ ಗರ್ಭನೃತ್ಯ, 200 ಕಲಾವಿದರಿದ್ದ ಭಾಂಗ್ರಾ ನೃತ್ಯ, ಚೆಂಡೆ ಮೇಳದ ವಾದಕರನ್ನೊಳ ಗೊಂಡ ವಿವಿಧ ಸಂಗೀತ ಪ್ರದರ್ಶನ ವನ್ನು ಭಾರತದಿಂದ ಪ್ರದರ್ಶಿಸಲಾಗಿದೆ.

ಪಾಕಿಸ್ಥಾನ, ನೇಪಾಲ, ಚೀನ ಸೇರಿದಂತೆ ವಿವಿಧ ದೇಶಗಳ ನೃತ್ಯ, ಗಾಯನಗಳೂ ಪ್ರದರ್ಶನಕಂಡಿವೆ. ಕಾರ್ಯಕ್ರಮದಲ್ಲಿ ಭಾರತದ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ವಿಶ್ವಸಂಸ್ಥೆ 8ನೇ ಪ್ರಧಾನ ಕಾರ್ಯದರ್ಶಿ ಬಾನ್‌ ಕೀ ಮೂನ್‌ ಸೇರಿದಂತೆ ವಿವಿಧ ದೇಶ ಗಳ ಒಟ್ಟು 47 ಮಂದಿ ಗಣ್ಯರು ಪಾಲ್ಗೊಂಡಿದ್ದರು. ಇವರೆಲ್ಲರ ಸಮ್ಮುಖದಲ್ಲಿ ರವಿಶಂಕರ್‌ ಗುರೂಜಿ ನೇತೃತ್ವದಲ್ಲಿ ಉಕ್ರೇನ್‌ನ ಶಾಂತಿಗೆ ನೀಡದ ಕರೆ ವಿಶ್ವಕ್ಕೆ ನೀಡಿದ ಸಂದೇಶವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next