Advertisement

Art of Living: ಕಲಾರಾಧನೆಗೆ ಆರ್ಟ್‌ ಆಫ್ ಲಿವಿಂಗ್‌ ಸಾಮರಸ್ಯದ ವೇದಿಕೆ

12:49 AM Oct 01, 2023 | Team Udayavani |

ವಾಷಿಂಗ್ಟನ್‌: 180 ದೇಶಗಳ ಜನರು, ಸಾವಿರಾರು ಕಲಾವಿದರು, ನೂರಾರು ನೃತ್ಯ ಪ್ರಕಾರಗಳ ಪ್ರದರ್ಶನ ಮತ್ತು ಮನಸ್ಸಿಗೆ ತಂಪೆರೆವ ಗಾಯನಗಳ ಸಂಗಮ! ಇದು ಶ್ರೀ ರವಿಶಂಕರ್‌ ಗುರೂಜಿ ಅವರ ಸಾರಥ್ಯದಲ್ಲಿ, “ವಸುಧೈವ ಕುಟುಂಬಕಂ’ ಧ್ಯೇಯದಲ್ಲಿ ನಡೆದ ಆರ್ಟ್‌ ಆಫ್ ಲಿವಿಂಗ್‌ನ “ಸಾಂಸ್ಕೃತಿಕ ಉತ್ಸವದ’ ವೈಭೋಗ.

Advertisement

ಅಮೆರಿಕದ ರಾಜಧಾನಿ ವಾಷಿಂಗ್ಟನ್‌ ಡಿಸಿಯ ಪ್ರತಿಷ್ಠಿತ ನ್ಯಾಶನಲ್‌ ಮಾಲ್‌ನಲ್ಲಿ ಆರ್ಟ್‌ ಆಫ್ ಲಿವಿಂಗ್‌ ಸಂಸ್ಥೆ 4ನೇ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಿತ್ತು, ಮೊದಲ ದಿನದ ಕಾರ್ಯಕ್ರಮ ಯಶಸ್ವಿಯಾಗಿ ಜರಗಿದ್ದು, 180 ದೇಶಗಳಿಂದ ಬಂದಿದ್ದ 10 ಲಕ್ಷಕ್ಕೂ ಅಧಿಕ ಜನರು ಸಮಾರಂಭಕ್ಕೆ ಸಾಕ್ಷಿಯಾದರು.

ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಚಂದ್ರಿಕಾ ಟಂಡನ್‌ ಅವರ ನೇತೃತ್ವದ 200 ಸದಸ್ಯರ ತಂಡವು ವಂದೇ ಮಾತರಂ ಗಾಯನ ಪ್ರಸ್ತುತ ಪಡಿಸುವ ಮೂಲಕ, ವಿಶ್ವ ಕಲಾ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಮಾರಂಭಕ್ಕೆ ಶುಭಾರಂಭ ನೀಡಿತು. ಬಳಿಕ ಭಾರತೀಯ ಶಾಸ್ತ್ರೀಯ ನೃತ್ಯ, ಸಂಗೀತ ಕಛೇರಿಯನ್ನು ಸಾವಿರ ಕಲಾವಿದರು ಒಗ್ಗೂಡಿ ಪಂಚಭೂತಂ ಹೆಸರಿನಲ್ಲಿ ಪ್ರದರ್ಶನ ನೀಡಿ, ನೋಡುಗರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಇದರೊಂದಿಗೆ ಗ್ರ್ಯಾಮಿ ವಿಜೇತ ಮಿಕ್ಕಿ ಫ್ರೀ ನೇತೃತ್ವದಲ್ಲಿ ಸಾವಿರ ಕಲಾವಿದರು ನುಡಿಸಿದ ಗಿಟಾರ್‌ ವಾದ್ಯವು ಜನರನ್ನ ಬೆರಗುಗೊಳಿಸಿದ್ದು, ಆಫ್ರಿಕಾ, ಜಪಾನ್‌ ಜತೆಗೆ ಹಲವಾರು ಮಧ್ಯಪ್ರಾಚ್ಯ ದೇಶಗಳ ಕಲಾವಿದರೂ ತಮ್ಮ ಸಂಸ್ಕೃತಿಗೆ ಬೆಸೆದುಕೊಂಡ ನೂರಾರು ಪ್ರದರ್ಶನಗಳನ್ನು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next