Advertisement

ಕಲೆಗೆ ಬೆಲೆ ಕಟ್ಟಲಾಗದು

02:25 PM May 10, 2019 | Suhan S |

ಗದಗ: ಚಿತ್ರ ರಚನೆ-ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಗಳಿದ್ದಂತೆ. ಕಲಾವಿದನ ಕಲೆಗೆ ಬೆಲೆ ಕಟ್ಟಲಾಗದು ಎಂದು ನಿವೃತ್ತ ಶಿಕ್ಷಕ ಶಿವಾನಂದ ಶಿಶುವಿನಹಳ್ಳಿ ಹೇಳಿದರು.

Advertisement

ನಗರದ ಪಂಚಾಕ್ಷರ ಗವಾಯಿಗಳ ಮಠದಲ್ಲಿ ನಜೀರ್‌ ಅಹ್ಮದ್‌ ಡಂಬಳ ಹಮ್ಮಿಕಕೊಂಡಿದ್ದ ಗುರು ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಲೆಗೆ ನಿರ್ಧಿಷ್ಟ ಬೆಲೆ ಕಟ್ಟಲಾಗದು. ರವಿವರ್ಮರ ಒಂದು

ಕೃತಿಗೆ 16 ಕೋಟಿ ರೂ.ಗೆ ಮಾರಾಟವಾಗಿತ್ತು. ಏರ್‌ ಇಂಡಿಯಾ ಸಂಸ್ಥೆ ಪ್ರಮುಖ ಕಲಾವಿದರ ಕೃತಿಗಳನ್ನು ಖರೀದಿಸಿದ್ದು, ಅವುಗಳ ಮೌಲ್ಯ ನೂರಾರು ಕೋಟಿ ರೂ. ಮೀರುತ್ತದೆ ಎಂದು ಹೇಳಿದರು.

ಚಿತ್ರಕಾರರಲ್ಲಿ ಎರಡು ವಿಧ. ಆತ್ಮತೃಪ್ತಿಗಾಗಿ ಕೃತಿ ರಚಿಸುವವರು, ಮತ್ತೂಬ್ಬರು ಸಮಾಜದ ಆಶಯಕ್ಕೆ ತಕ್ಕಂತೆ ಕಲಾಕೃತಿಗಳಿಗೆ ಜೀವ ತುಂಬುತ್ತಾರೆ. ಕೆಲವರು ಕಲಾಕೃತಿಗಳ ಮಾರಾಟ ಬಯಸುತ್ತಾರೆ. ಚಿತ್ರಕಲಾ ಕೃತಿಗಳಿಗೆ ದೇಶ- ವಿದೇಶಗಳಲ್ಲಿ ಸಾಕಷ್ಟು ಬೇಡಿಕೆಯಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಚಿತ್ರಕಲಾವಿದರ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟದಲ್ಲಿ ಕೋಟ್ಯಂತ ರೂ. ವ್ಯವಹಾರವಾಗುತ್ತದೆ ಎಂದು ಹೇಳಿದರು.

ಆರಂಭಿಕ ವರ್ಷಗಳಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕಲಾವಿದರು ಕೈತುಂಬ ಸಂಪಾದಿಸುತ್ತಿದ್ದರು. ಆನಂತರ ಕೃತಕ ಬೆಲೆ ಏರಿಕೆ ಯಾಗಿ ದಿಢೀರ್‌ ಕುಸಿತವಾಯಿತು. ಹೀಗಾಗಿ ಕಲಾವಿದರ ಹಣ ಸಂಪಾದಿಸುವ ಕನಸು ನುಚ್ಚು ನೂರಾಯಿತು. ಈಗ ಮತ್ತೆ ಚಿತ್ರಕಲೆಗಳ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದೆ. ಕಲಾವಿದರ ಸಂಕಷ್ಟವನ್ನರಿತ ಕರ್ನಾಟಕ ಚಿತ್ರಕಲಾ ಪರಿಷತ್‌ ಬೆಂಗಳೂರಿನಲ್ಲಿ ವರ್ಷಕ್ಕೊಂದು ದಿನ ಚಿತ್ರ ಸಂತೆ ಆಯೋಜಿಸಿ ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದರು.

Advertisement

ಪ್ರಾಥಮಿಕ ಶಾಲೆ ಶಿಕ್ಷಕರೂ ಆಗಿರುವ ಕಲಾವಿದ ಎಂ.ಬಿ. ಪರ್ವತಗೌಡರ ಮಾತನಾಡಿ, ‘ವಿಶ್ವ ಕಲಾದಿನ’ ಅಂಗವಾಗಿ ಈ ಚಿತ್ರಕಲಾ ಪ್ರದರ್ಶನವನ್ನು ಇದೇ ಮೊದಲ ಬಾರಿಗೆ ಗವಾಯಿಗಳ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು

ವೀರೇಶ್ವರ ಪುಣ್ಯಾಶ್ರಮದ ಬಸವರಾಜ ಹಿಡ್ಕಿಮಠ, ವಸಂತ ಅಕ್ಕಿ, ಅಶೋಕ ಅಕ್ಕಿ, ಕಡ್ಲಿಕೊಪ್ಪ, ಮಹೇಶ ಸಂದಿಗವಾಡ, ವಿಜಯ ಕಿರೇಸೂರ, ಬೇವಿನಮರದ, ಸಂತೋಷ ವೀರಾಪುರ, ಯುಸೂಫ್‌ ಡಂಬಳ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next