ಪಕ್ಷಗಳ ನಡುವಿನ ರಾಜಕೀಯ ವೈಷಮ್ಯಗಳಿಂದ ನಗರ ಸಭೆ ಕಚೇರಿ ಒಳಗೆ ಮತ್ತು ಹೊರಗೆ ಪ್ರತಿನಿತ್ಯ ನಾಗರಿಕರ ಕೆಲಸಗಳಿಗೆ ತೊಂದರೆಗಳು ಉಂಟಾಗುತ್ತಿದೆ.
Advertisement
ನಗರಸಭೆ ಆಡಳಿತದಲ್ಲಿ ಬಹುಮತ ವಿಲ್ಲದಿದ್ದರೂ ಮೀಸಲಾತಿ ಆಧಾರದ ಮೇಲೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದರೆ, ಸದಸ್ಯರ ಸಂಖ್ಯಾಬಲ ಕೊರತೆಯಿಂದಾಗಿ ದಿನದಿಂದ ದಿನಕ್ಕೆ ನಗರಸಭೆ ಆಡಳಿತದ ಕಾರ್ಯವೈಖರಿಯನ್ನು ಹಳಿ ತಪ್ಪುತಿದ್ದು, ಅದನ್ನು ಸರಿದಾರಿಗೆ ತರಲು ಯಾರು ಕೂಡ ಮುಂದಾಗುತ್ತಿಲ. ಜೆಡಿಎಸ್ ಪಕ್ಷದ ಸದಸ್ಯರು ಸ್ಪಷ್ಟ ಬಹುಮತವಿದ್ದರೂ ಮೀಸಲಾತಿ ಹೆಸರಿನಲ್ಲಿ ಅಧಿಕಾರಿ ಕೈತಪ್ಪಿರುವುದರಿಂದ ಆಕ್ರೋಶಗೊಂಡು ನಗರದ ಅಭಿವೃದ್ಧಿ ಕಾರ್ಯಗಳನ್ನು ಮರೆತವರಂತೆ ವರ್ತಿಸುತ್ತಿರುವುದು ಮೇಲ್ನೋಟಕ್ಕೆಕಂಡು ಬರುತ್ತಿದೆ. ಅಂತೆಯೇ ಬಿಜೆಪಿ ಸದಸ್ಯರು ತಮ್ಮ ಕೈ ವಶವಾಗಿರುವ ಅಧಿಕಾರವನ್ನು ಸರಿಯಾದ ಸನ್ಮಾರ್ಗದಲ್ಲಿ ನಡೆಸುವ ಪ್ರಾಮಾಣಿಕ ಪ್ರಯತ್ನವನ್ನು ಇದುವರೆಗೂ ಮಾಡದಿರುವುದು ಆಶ್ವರ್ಯ ಕರ ಸಂಗತಿಯೂ ಆಗಿದೆ. ಒಟ್ಟಿನಲ್ಲಿ ಜನರಿಂದ ಚುನಾಯಿತರಾದ ಜನ ಪ್ರತಿನಿಧಿಗಳು ತಮ್ಮಲ್ಲಿನ ರಾಜಕೀಯ ವೈಷಮ್ಯವನ್ನು ಮರೆತು ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪರಸ್ಪರ ಅನ್ಯೊನತೆಯಿಂದ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸುವದನ್ನು ಬಿಟ್ಟು ತಮ್ಮ, ತಮ್ಮ ಪ್ರತಿಷ್ಠೆಗೆ ಶರಣಾಗಿ ನಗರಸಭೆಆಡಳಿತದಲ್ಲಿಯಾವುದೇ ಕೆಲಸಕಾರ್ಯಗಳು ನಡೆದಂತೆ ಮಾಡಿದ್ದಾರೆ.
ಹೆಂಜುಗೊಂಡನಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನೀರು ಹರಿಯುತ್ತಿರುವ ಪರಿಣಾಮ ಕೆಸರು ಗದ್ದೆಯಾಗಿದ್ದು ವಾಹನ ಸಾಗುವುದಿರಲಿ ಈ ಭಾಗದ ಜನತೆ ನಡೆದಾಡಲೂ ಸಹ ಸಾಧ್ಯವಾಗದಂತಾಗಿದೆ. ನಗರಸಭೆ ಅಧಿಕಾರಿಗಳಾಗಲಿ, ಚುನಾಯಿತ ಜನಪ್ರತಿನಿಧಿಗಳಾಗಲಿ ಇತ್ತ ತಿರುಗಿ ನೋಡುತ್ತಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿವರ್ಷ ತಪ್ಪದೇ ಕರ ವಸೂಲಿ ಮಾಡುವ ನಗರಸಭೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ. ಅಲ್ಪಸ್ವಲ್ಪ ಮಳೆಯಾದರೂ ಮನೆಯ ಮುಂದಿನ ರಸ್ತೆಗಳು ಕೆಸರುಗದ್ದೆಯಾಗಿ ಮಾರ್ಪಡುತ್ತದೆ ಮಹಿಳೆಯರು ಮಕ್ಕಳು ಮನೆಯಿಂದ ಹೊರಬರಲುಬೇಸರಿಸಿಕೊಳ್ಳುವಸ್ಥಿತಿನಿರ್ಮಾಣವಾಗಿದೆ ಎಂದು ಹಿರಿಯ ನಾಗರಿಕ ಜಗದೀಶ್ ತಿಳಿಸಿದರು.
Related Articles
ನಗರಸಭೆಯಲ್ಲಿ ಅಧಿಕಾರದ ಮೇಲೈಗೆ ಸಾಧಿಸಲು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ತಾವುಗಳು ಮುಂದು ಎನ್ನುವ ಮನೋಭಾವನೆಯಲ್ಲಿ ಅಧಿಕಾರಿಗಳ ಮೇಲೆ ಏರುತ್ತಿರುವ ಒತ್ತಡದಿಂದಾಗಿ ಸುಲಭವಾಗಿ ಕಚೇರಿಯಲ್ಲಿ ಕೆಲಸ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಳಲು ಇಲ್ಲಿನ ಕೆಲವು ಅಧಿಕಾರಿಗಳಿಂದ ಕೇಳಿ ಬರುತ್ತಿದ್ದು, ಇದರ ಪರಿಣಾಮ ಪದೇ ಪದೇ ಪೌರಾಯುಕ್ತರು ಬದಲಾವಣೆ ಆಗುತ್ತಿದ್ದಾರೆ. ಬಂದವರೂ ಇಲ್ಲಿನ ರಾಜಕೀಯ ಬೆಳೆವಣಿಗೆ ನೋಡಿಕೊಂಡು ಬೇರೆಡೆಗೆ ವರ್ಗಾ ಆಗುತ್ತಿರುವುದು ನಗರಸಭೆ ಕೆಲಸ ಕಾರ್ಯಗಳಿಗೆ ತೊಡಕಾಗಿದೆ ಎಂದು ಸಾರ್ವಜನಿಕರ ದೂರಾಗಿದೆ
Advertisement
ನಗರಸಭೆ ಅಧ್ಯಕ್ಷರು ತಮ್ಮ ಇಚ್ಛೆಯಿಂದ ಪಕ್ಷಾತೀತವಾಗಿ ಎಲ್ಲಾ ಸದಸ್ಯರ ಸಲಹೆ ಸೂಚನೆಗಳನ್ನು ಪಡೆದುಕೊಂಡು ಅಧಿಕಾರ ನಡೆಸದೆ ಪ್ರತಿಯೊಂದು ವಿಷಯಕ್ಕೂ ಕ್ಷೇತ್ರದ ಶಾಸಕರನ್ನು ಹಾಗೂ ಜೆಡಿಎಸ್ ಪಕ್ಷದ ನಾಯಕರ ಹೆಸರನ್ನು ದುರುದ್ದೇಶ ಪೂರ್ವಕ ಎಳೆದುತರುತ್ತಾರೆ. ಅಭಿವೃದ್ಧಿ ದೃಷ್ಟಿಯಿಂದ ಪಕ್ಷ ಭೇದ ಮರೆತುಕಾರ್ಯ ನಿರ್ವಹಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಒಂದು ಪಕ್ಷದ ಅಧ್ಯಕ್ಷರಂತೆ ವರ್ತಿಸಿದರೆ ಎಲ್ಲರಿಗೂ ಸಂಕಷ್ಟ.-ಕಾಂತೇಶ್, ನಗರಸಭೆ ಉಪಾಧ್ಯಕ್ಷ(ಜೆಡಿಎಸ್) ಸಂವಿಧಾನದ ಬದ್ಧವಾಗಿ ಮೀಸಲಾತಿಯ ಆಧಾರದಲ್ಲಿ ತಾವು ಅಧ್ಯಕ್ಷನಾಗಿದ್ದೇನೆ. ಇದನ್ನು ಅರಿತು ನಗರದ ಅಭಿವೃದ್ಧಿ ದೃಷ್ಟಿಯಿಂದ ಜೆಡಿಎಸ್ ಸದಸ್ಯರು ಸಹಕಾರ ನೀಡಿದರೆ ನಾವೆಲ್ಲ ಸೇರಿ ಅರಸೀಕೆರೆ ನಗರವನ್ನು ಮಾದರಿ ನಗರವನ್ನಾಗಿ ಮಾಡಲು ಸಾಧ್ಯ. ಎಲ್ಲಕ್ಕೂ ರಾಜಕೀಯ ಮಾಡುವುದುಯಾರಿಗೂ ಶೋಭೆ ತರುವುದಿಲ್ಲ.
-ಗಿರೀಶ್, ನಗರಸಭೆ ಅಧ್ಯಕ್ಷ(ಬಿಜೆಪಿ)