Advertisement
ದೂರದ ಚೀನಾದಿಂದ ಹಡಗಿನಲ್ಲಿ ಚೆನ್ನೈನ ಕೃಷ್ಣಗಿರಿಗೆ ಫೆ.6ರಂದೇ ಆಗಮಿಸಿದ್ದ ಆರು ಬೋಗಿಯ ಈ ಮೆಟ್ರೋ ರೈಲು, ಬುಧವಾರ ಬೆಳಗಿನಜಾವ 3.30ಕ್ಕೆ ನಗರದ ಹೆಬ್ಬಗೋಡಿ ಬಿಎಂಆರ್‌ಸಿಎಲ್ ಡಿಪೋ ಪ್ರವೇಶಿಸಿತು. ಮುಂದಿನ ಎರಡು ಮೂರು ದಿನಗಳಲ್ಲಿ ಕಸ್ಟಮ್ಸ್‌ನಿಂದ ಅಂತಿಮ ಪರವಾನಗಿ ಪಡೆದು, ಅನ್‌ಲೋಡ್ ಮಾಡಲಾಗುತ್ತದೆ. ನಂತರ ಹಲವು ಪರಿಶೀಲನಾ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತದೆ. “ಮಾರ್ಚ್‌ನಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ.
Related Articles
Advertisement
ಚಾಲಕ ಸಹಿತ, ರಹಿತ ರೈಲಿಗಿರುವ ವ್ಯತ್ಯಾಸ?: ಈಗಿನ ನೇರಳೆ, ಹಸಿರು ಮಾರ್ಗದಲ್ಲಿ ಓಡುವ ರೈಲುಗಳು ಡಿಟಿಜಿ (ಡಿಸ್ಟೆನ್ಸ್ ಟು ಗೋ) ಸಿಗ್ನಲ್ ಸಿಸ್ಟಂ ಮೂಲಕ ಸಂಚರಿಸುತ್ತಿವೆ. ಆದರೆ, ಹೊಸ ಬೋಗಿಗಳು ಭಿನ್ನವಾಗಿದ್ದು ಸ್ವಯಂಪ್ರೇರಿತವಾಗಿ ಅಂದರೆ ಸಿಬಿಟಿಸಿ (ಕಮ್ಯೂನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್) ಸಿಗ್ನಲ್ ಸಿಸ್ಟಮ್ ಹೊಂದಿದೆ. ಚಾಲಕರಹಿತವಾಗಿ ಹಳದಿ ಮಾರ್ಗದಲ್ಲಿ ಸಂಚರಿಸಬೇಕಿವೆ. ಹೊಸ ಮಾದರಿಯ ಈ ಬೋಗಿಗಳು ತೀವ್ರ ತಪಾಸಣೆಗೆ ಒಳಗಾಗಬೇಕಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಡಬಲ್ ಡೆಕರ್ ( ರಸ್ತೆ-ಮೆಟ್ರೋ ಮಾರ್ಗ) ಹೊಂದಿರುವ ಹಳದಿ ಮಾರ್ಗದಲ್ಲಿ ದೇಶದ ಅತ್ಯಂತ ಎತ್ತರದ ಜಯದೇವ ಮೆಟ್ರೋ ನಿಲ್ದಾಣ ಸೇರಿ 16 ನಿಲ್ದಾಣಗಳಿವೆ. ಈ ಮೆಟ್ರೋ ಮಾರ್ಗ ಮುಖ್ಯವಾಗಿ ಎಲೆಕ್ಟ್ರಾನಿಕ್ ಸಿಟಿಯ ಟೆಕಿಗಳಿಗೆ ಹಾಗೂ ಜಯನಗರ, ಬಿಟಿಎಂ ಲೇಔಟ್, ಎಚ್‌ಎಸ್‌ಆರ್ ಲೇಔಟ್, ಬೊಮ್ಮಸಂದ್ರ ಇಂಡಸ್ಟ್ರಿಯಲ್ ಏರಿಯಾ ಮಾರ್ಗದಲ್ಲಿ ಸಂಚರಿಸುವವರಿಗೆ ಅನುಕೂಲವಾಗಲಿದೆ.
ಮೆಟ್ರೋ ಮಾರ್ಗ ನಿರ್ಮಾಣದಲ್ಲಿ ಮಾತ್ರವಲ್ಲ; ರೈಲು ಬೋಗಿಗಳಲ್ಲೂ ವಿಳಂಬ ಮುಂದುವರಿದಿದೆ: 2019ರ ಡಿಸೆಂಬರ್‌ನಲ್ಲಿ ಸಿಆರ್‌ಆರ್‌ಸಿ ಜತೆಗೆ ಬೆಂಗಳೂರು ಮೆಟ್ರೋ ರೈಲು ನಿಗಮವು ಒಟ್ಟಾರೆ 216 ಬೋಗಿಗಳನ್ನು (36 ರೈಲು) ಪೂರೈಸುವಂತೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ 173 ವಾರ ಅಂದರೆ 2022ರೊಳಗೆ ಎಲ್ಲ ಬೋಗಿಗಳು ತಲುಬೇಕಿತ್ತು. ಆದರೆ, ಸಿಆರ್‌ಆರ್‌ಸಿ ಕಂಪನಿಗೆ ಮೇಕ್ ಇನ್ ಇಂಡಿಯಾ ಅಡಿ ಭಾರತೀಯ ಕಂಪನಿಯ ಸಹಯೋಗದಲ್ಲಿ ಶೇ.75 ಬೋಗಿಗಳನ್ನು ದೇಶದಲ್ಲಿಯೇ ನಿರ್ಮಿಸುವ ನಿಬಂಧನೆಯಿತ್ತು. ಭಾರತದಲ್ಲಿ ಸಹ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ವಿಳಂಬವಾಯಿತು. ಇದಾದ ಬಳಿಕ ಕೋವಿಡ್-19, ವಿದೇಶಿ ನೇರ ಬಂಡವಾಳ (ಎಫ್ಡಿಐ) ಹಾಗೂ ಚೀನಾ ಜತೆಗಿನ ವಾಣಿಜ್ಯ ಸಂಬಂಧದಲ್ಲಿ ಉಂಟಾದ ವೈಮನಸ್ಸು ಸೇರಿ ಬೋಗಿಗಳ ನಿರ್ಮಾಣ ವಿಳಂಬವಾಯಿತು. ಸಿಆರ್‌ಆರ್‌ಸಿ ಕೊಲ್ಕತ್ತ ಮೂಲದ ತಿತಾಘರ್ ರೈಲ್ ಮ್ಯಾನುಫ್ಯಾಕ್ಚರ್ ಕಂಪನಿ ಜತೆ ನಮ್ಮ ಮೆಟ್ರೋಗೆ ಬೋಗಿ ಒದಗಿಸುವ ಒಪ್ಪಂದ ಮಾಡಿಕೊಂಡಿತು. ಇದರ ಪ್ರಕಾರ ಎರಡು ಸೆಟ್ ರೈಲನ್ನು ಸಿಆರ್‌ಆರ್‌ಸಿ, ತೀತಾಘರ್ ಕಂಪನಿ 204 ಬೋಗಿಗಳನ್ನು (34 ರೈಲು) ನಿರ್ಮಿಸಿಕೊಡಲಿದೆ.