ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣಿಕರಿಗೆ ಮಂಪರು ಬರುವಂತಹ ಪಾನೀಯ ಕುಡಿಸಿ, ನಂತರ ಚಿನ್ನಾಭರಣ ಮತ್ತು ಹಣ ದೋಚುತ್ತಿದ್ದ ಮಹಿಳೆಯನ್ನು ನಿಗಮದ ಭದ್ರತಾ ಮತ್ತು ಜಾಗೃತ ವಿಭಾಗದ ಸಿಬ್ಬಂದಿ ಪತ್ತೆಹಚ್ಚಿ, ಪೊಲೀಸರಿಗೆ ಒಪ್ಪಿಸಿದ ಘಟನೆ ಈಚೆಗೆ ನಡೆದಿದೆ.
ಇತರೆ ಪ್ರಯಾಣಿಕರಂತೆ ಕೆಎಸ್‌ಆರ್‌ಟಿಸಿ ಬಸ್ ಏರಿ ಟಿಕೆಟ್ ಪಡೆದು ಅಮಾಯಕ ಮಹಿಳಾ ಪ್ರಯಾಣಿಕರ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದ ಆರೋಪಿ, ಸಹ ಪ್ರಯಾಣಿಕರನ್ನು ಮಾತಿಗೆಳೆದು ವಿಶ್ವಾಸ ಗಳಿಸುತ್ತಿದ್ದಳು. ಸಲುಗೆ ಬೆಳೆಸಿಕೊಂಡು, ನಂತರ ಅವರಿಗೆ ಮಂಪರು ಬರುವ ಪಾನೀಯ ನೀಡಿ, ನಿದ್ರೆಗೆ ಜಾರುತ್ತಿದ್ದಂತೆ ಆಭರಣ ಮತ್ತು ನಗದು ದೋಚಿ ಹೋಗುತ್ತಿದ್ದಳು.
ಈ ಬಗ್ಗೆ ಖುದ್ದು ಕೆಎಸ್‌ಆರ್‌ಟಿಸಿಯ ಭದ್ರತಾ ಮತ್ತು ಜಾಗೃತ ವಿಭಾಗದ ಅಧಿಕಾರಿಗಳು ಪರಿಶೀಲಿಸಿದಾಗ, ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ. ಸಂಶಯ ವ್ಯಕ್ತಿಗಳ ಚಿತ್ರ ಮತ್ತು ಪೂರಕ ಮಾಹಿತಿ ನೀಡುವಂತೆ ಪೊಲೀಸರು ನಿಗಮಕ್ಕೆ ತಿಳಿಸಿದ್ದರು.
ಅದರಂತೆ ಸೋಮವಾರ ನಿಗಮದ ಮೈಸೂರು ರಸ್ತೆ ಬಸ್ ನಿಲ್ದಾಣದ ಭದ್ರತಾ ಸಿಬ್ಬಂದಿ ಅನುಮಾನಾಸ್ಪದವಾಗಿ ಅತ್ತಿತ್ತ ಸುಳಿದಾಡುತ್ತಿದ್ದ ಓರ್ವ ಮಹಿಳೆಯನ್ನು ವಿಚಾರಣೆಗೊಳಪಡಿಸಿದರು. ಆಗ ಮೈಸೂರು ಮೂಲದ ಆ ಮಹಿಳೆಯು ಈವರೆಗೂ ಎರಡು ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಳು. ಕೂಡಲೇ ಮೈಸೂರಿನ ಲಷ್ಕರ್ ಠಾಣೆಯ ಪೊಲೀಸರ ವಶಕ್ಕೆ ಒಪ್ಪಿಸಿದರು.
ಪ್ರಯಾಣಿಕರು ಬಸ್ಸಿನಲ್ಲಿ ಅಥವಾ ಬಸ್ ನಿಲ್ದಾಣದಲ್ಲಿ ಈ ರೀತಿಯ ಅನುಮಾನಸ್ಪದ ವ್ಯಕ್ತಿಗಳ ನಡೆಗಳ ಬಗ್ಗೆ ಗಮನಕ್ಕೆ ಬಂದರೆ ತಕ್ಷಣ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕ/ ನಿರ್ವಾಹಕರ ಅಥವಾ ಸ್ಥಳೀಯ ಬಸ್ ನಿಲ್ದಾಣದ ಅಧಿಕಾರಿಗಳ ಗಮನಕ್ಕೆ ತರಬೇಕು. ಪ್ರಯಾಣದ ಸಮಯದಲ್ಲಿ ಯಾವುದೇ ಅಪರಿಚಿತ ವ್ಯಕ್ತಿಗಳು ನೀಡುವ ತಿಂಡಿ-ತಿನಿಸು, ಪಾನೀಯವನ್ನು ಸ್ವೀಕರಿಸುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಕೆಎಸ್‌ಆರ್‌ಟಿಸಿಗೆ ಸ್ಕೋಚ್ ಮೊಬಿಲಿಟಿ ಪ್ರಶಸ್ತಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) (skotch mobility) ಮೂರು ಪ್ರಶಸ್ತಿಗಳು ಮತ್ತು ದೇಶದ ಉತ್ಕೃಷ್ಟ ಸಾರಿಗೆ ಉಪಕ್ರಮ ಪ್ರಶಸ್ತಿ ಲಭಿಸಿವೆ. ಸಿಕೊಂಡ ರಸ್ತೆ ಸುರಕ್ಷತೆ ಮತ್ತು ಸಿಮ್ಯುಲೇಟರ್ ಮೂಲಕ ಚಾಲನಾ ತರಬೇತಿ ಉಪಕ್ರಮಗಳಿಗೆ “ಸ್ಕೋಚ್ ಮೊಬಿಲಿಟಿ’ (ದೆಹಲಿಯಲ್ಲಿ ಈಚೆಗೆ ನಡೆದ 56ನೇ ಸ್ಕೋಚ್ ಮೊಬಿಲಿಟಿ ಸಮ್ಮೇಳನದಲ್ಲಿ ನಿವೃತ್ತ ಅಧಿಕಾರಿಗಳಾದ ಡಾ.ಎಂ. ರಾಮಚಂದ್ರನ್ ಹಾಗೂ ಡಾ.ಅರುಣಾ ಶರ್ಮ ಅವರು ಈ ಪ್ರಶಸ್ತಿ ಪ್ರದಾನ ಮಾಡಿದರು. ನಿಗಮದ ಪರವಾಗಿ ತುಮಕೂರಿನ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್ ಸ್ವೀಕರಿಸಿದರು.