ಚನ್ನಪಟ್ಟಣ: ತಾಲೂಕಿನ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ವಿರುಪಾಕ್ಷಿಪುರದ ಬಳಿಯ ಕೆ.ಜಿ. ಮಹಡಿ ಬಳಿ ಕೆಲ ದಿನಗಳ ಹಿಂದೆ ದಂಪತಿಗಳನ್ನು ಬೆದರಿಸಿ, ಚಿನ್ನಾಭರಣ ದರೋಡೆಮಾಡಿದ್ದ ಏಳು ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ.
ಮದ್ದೂರಿನ ವಡ್ಡರದೊಡ್ಡಿ ಗ್ರಾಮದ ಪ್ರಮೋದ್ ಆಲಿಯಾಸ್‌ಕರಿಯ(22),ಚನ್ನಪಟ್ಟಣದ ಲಾಳ ಘಟ್ಟ ಗ್ರಾಮದ ಪ್ರಜ್ವಲ್ (24),ವಿಜಿ ಆಲಿಯಾಸ್ ವಿಜಯ್ (23), ಸಿದ್ದರಾಜು, ಚಿತ್ರದುರ್ಗ ಜಿಲ್ಲೆಯ ಗಣೇಶ್ (21), ತಗಚಗೆರೆ ಗ್ರಾಮದ ಗೌತಮ್(21), ರಾಮನಗರದ ಕೆಂಪೇಗೌಡ ಸರ್ಕಲ್ ನವೀನ್ (19), ಹಳ್ಳಿಮರದದೊಡ್ಡಿ ಯೋಗೇಶ್ ಆಲಿಯಾಸ್ ಯೋಗಿ ಬಂಧಿತರು.
ಆರೋಪಿಗಳಿಂದ 3 ದ್ವಿಚಕ್ರವಾಹನ ಹಾಗೂ ದರೋಡೆ ಮಾಡಿದ 50 ಗ್ರಾಂ ಚನ್ನಾಭರಣ ವಶಕ್ಕೆ ಪಡೆಯಲಾಗಿದೆ. ತಾಲೂಕಿನ ಹರಿಸಂದ್ರ ಗ್ರಾಮದ ನಿರ್ಜನ ಪ್ರದೇಶದಲ್ಲಿ ಮಾರಕಾಸ್ತ್ರಗಳೊಂದಿಗೆ ಪ್ರಯಾಣಿಕ ರನ್ನು ದೋಚಲು ಹೊಂಚು ಹಾಕಿ ಕುಳಿತ್ತಿದ್ದ ತಂಡ ಮೇಲೆ ಪೊಲೀಸ್ ಪಡೆ ದಾಳಿ ಮಾಡಿ ಬಂಧಿಸಲಾಗಿದೆ. ಬಂಧಿತರನ್ನು ತೀವ್ರ ವಿಚಾರಣೆಗೊಳ ಪಡಿಸಿದಾಗ ಎಂಕೆ.ದೊಡ್ಡಿ , ಮದ್ದೂರು, ಅಕ್ಕೂರು ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣ, ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಗ್ರಾಮಾಂತರ ಠಾಣೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ.
ಡಿವೈಎಸ್ಪಿ ಕೆ.ಎನ್.ರಮೇಶ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಟಿ.ಬಿ.ಶಿವಕುಮಾರ್, ಗ್ರಾಮಾಂತರ ಠಾಣೆಯ ಪಿಎಸ್‌ಐ ಲಿಯಾಕತ್ ಉಲ್ಲಾಖಾನ್, ಅಕ್ಕೂರು ಠಾಣೆ ಪಿಎಸ್‌ಐ ಶ್ರೀಕಾಂತ್ ಹಾಗೂ ಸಿಬ್ಬಂದಿ ಶಿವಕುಮಾರ್, ಮಲ್ಲಿ ಕಾರ್ಜುನ, ಪ್ರಕಾಶ್‌ಕುಮಾರ್, ಪ್ರವೀಣ್, ಚೇತನ್, ಸಿದ್ಧಗಂಗಾ, ಹನು ಮಂತಶಟ್ಟಿ, ಖಾದಿರ್ ಪಟೇಲ್, ಪ್ರತಾಪ್, ಸೋಮನಾಥ್, ವೆಂ ಕಟಚಲಯ್ಯ, ಲೋಕೇಶ್, ಮಹೇಶ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.