ನವದೆಹಲಿ: ಪಾಕಿಸ್ತಾನದ ಐಎಸ್‌ಐಗೆ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಬಂಧಿಸಲ್ಪಟ್ಟ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಉದ್ಯೋಗಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಈ ವ್ಯಕ್ತಿಯ ಜೊತೆ ಮಹಿಳೆಯೊಬ್ಬರು ಸ್ನೇಹ ಬೆಳೆಸಿ ಹನಿ-ಟ್ರ್ಯಾಪ್ ಗೆ ಒಳಪಡಿಸಲಾಗಿದೆ ಎಂದು ರಾಜ್ಯ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತಿಳಿಸಿದೆ.
ಈ ಕುರಿತು ಮಾಹಿತಿ ಹಂಚಿಕೊಂಡ ಮೀರತ್‌ನ ಎಟಿಎಸ್ ಇನ್ಸ್‌ಪೆಕ್ಟರ್ ರಾಜೀವ್ ತ್ಯಾಗಿ, ಹಾಪುರ್‌ನ ಶಹಮಹಿಯುದ್ದೀನ್‌ಪುರ ಗ್ರಾಮದ ನಿವಾಸಿ ಸತೇಂದ್ರ ಸಿವಾಲ್ ಅವರು ಯುದ್ಧ ವಿಮಾನಗಳು ಮತ್ತು ಜಲಾಂತರ್ಗಾಮಿ ನೌಕೆಗಳು ಸೇರಿದಂತೆ ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಯ ಶಸ್ತ್ರಾಸ್ತ್ರ ವ್ಯವಸ್ಥೆಗಳಿಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಹನಿ-ಟ್ರ್ಯಾಪ್ ಗೆ ಒಳಗಾದ ಮಹಿಳೆಯೊಂದಿಗೆ ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
“ಸಿವಾಲ್ ಕಳೆದ ವರ್ಷ ಪೂಜಾ ಮೆಹ್ರಾ ಎಂಬ ಹೆಸರಿನಲ್ಲಿ ಆನ್‌ಲೈನ್ ಪ್ರೊಫೈಲ್ ಮಾಡಿದ ಮಹಿಳೆಯೊಂದಿಗೆ ಸಂಪರ್ಕಕ್ಕೆ ಬಂದಿದ್ದು ಅವಳು ಆತನನ್ನು ಹನಿ-ಟ್ರ್ಯಾಪ್ ಮಾಡಿ ಮತ್ತು ಹಣಕ್ಕಾಗಿ ತನ್ನೊಂದಿಗೆ ರಹಸ್ಯ ದಾಖಲೆಗಳನ್ನು ಹಂಚಿಕೊಳ್ಳಲು ಅವನನ್ನು ಆಕರ್ಷಿಸಿದಳು” ಎಂದು ತ್ಯಾಗಿ ಹೇಳಿದ್ದಾರೆ.
ಮಹಿಳೆಯೊಂದಿಗೆ ಹಂಚಿಕೊಂಡ ದಾಖಲೆಗಳು ಇನ್ನೂ ತನ್ನ ಫೋನ್‌ನಲ್ಲಿವೆ ಎಂದು ಸಿವಾಲ್ ಹೇಳಿಕೊಂಡಿದ್ದಾರೆ. ಅವರ ಫೋನ್ ಮತ್ತು ಅವರು ಬಳಸಿದ ಇತರ ಗ್ಯಾಜೆಟ್‌ಗಳ ಫೋರೆನ್ಸಿಕ್ ಪರೀಕ್ಷೆಯನ್ನು ಮಾಡಲಾಗುತ್ತಿದೆ, ”ಎಂದು ಎಟಿಎಸ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ.
ಸದ್ಯ ಸಿವಾಲ್ 10 ದಿನಗಳ ಕಾಲ ಎಟಿಎಸ್ ರಿಮಾಂಡ್‌ನಲ್ಲಿದ್ದಾರೆ ಎನ್ನಲಾಗಿದ್ದು ಇನ್ನೂ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ: ಕಾಮಗಾರಿ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಿ ಹಣ ಲೂಟಿ ಮಾಡಿದ ಪಟ್ಟಣ ಪಂಚಾಯತ್: ಕನಕಪ್ಪ ಆರೋಪ