ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಮಹಿಳೆಯ ಚಿನ್ನದ ಮಾಂಗಲ್ಯ ಸರ ಕಳ್ಳತನ ಮಾಡಿದ್ದ ಇಬ್ಬರನ್ನು ಮಾಲು ಸಮೇತ ಬಂಧಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಆ.3 ರಂದು ಬಸವನಬಾಗೇವಾಡಿ ಪಟ್ಟಣದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಕಮಲಾ ಶಿವಪ್ಪ ರತ್ನಳ್ಳಿ ಎಂಬವರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಕಳ್ಳರು 34.47 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಳ್ಳತನ ಮಾಡಿದ್ದರು.
ಎಸ್ಪಿ ಅನುಪಮ ಅಗರವಾಲ ಹಾಗೂ ಎಎಸ್ಪಿ ರಾಮ ಅರಸಿದ್ಧಿ ಇವರ ಮಾರ್ಗದರ್ಶನದಲ್ಲಿ ಸಿಪಿಐ ಸೋಮಶೇಖರ ಜುಟ್ಟಲ, ಎಸ್ಐ ಚಂದ್ರಶೇಖರ ಹೆರಕಲ್ ಇವರ ನೇತೃತ್ವದಲ್ಲಿನ ಪೊಲೀಸ ತಂಡ ಇಬ್ಬರು ಆರೋಪಗಳನ್ನು ಬಂಧಿಸಿ, ಕಳ್ಳತನ ಮಾಡಿದ್ದ ಚಿನ್ನದ ಮಾಂಗಲ್ಯ ಸರ ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳಾದ ಸಿಂದಗಿ ತಾಲ್ಲೂಕಿನ ಕಲಕೇರಿ ಗ್ರಾಮದ ಶರಣಪ್ಪ ಸಿದ್ದಪ್ಪ ಕತ್ತಿ, ನಾಶೀರ ಅಹ್ಮದ್ ಪೀರಸಾಬ ಪಟೇಲ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಮೇಲ್ಮನೆ ಚುನಾವಣೆ; ಉಪನ್ಯಾಸಕರ ಸಂಘಗಳಿಂದ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ
ಸದರಿ ಪ್ರಕರಣ ಪತ್ತೆಹಚ್ಚುವಲ್ಲಿ ಯಶಸ್ವಿಯಾದ ತನಿಖಾ ತಂಡದಲ್ಲಿದ್ದ ಎಸ್.ವೈ.ಮೊಕಾಸಿ, ಆರ್.ಎಂ.ಕಳಸಗೊಂಡ, ಆರ್.ಪಿ.ಜಾಧವ್, ಪಿ.ವೀರೇಶ, ಎ.ಎಸ್.ಬಿರಾದಾರ, ಪಿ.ಎಸ್.ಕುಂಬಾರ, ಎಚ್.ಎಸ್. ದಣಬೆಂಕಿ, ಎ.ಸಿ.ದಿಂಡಿ, ಡಿ.ಸಿ. ಪೂಜಾರ ಅವರಿದ್ದ ಪೊಲೀಸ್ ತಂಡಕ್ಕೆ ಎಸ್ಪಿ ಅನುಪಮ ಅಗರವಾಲ ಬಹುಮಾನ ಘೋಷಿಸಿದ್ದಾರೆ.