Advertisement
ಪಟ್ಟೇಗಾರ ಪಾಳ್ಯದ ನಿವಾಸಿ ಬಿಹಾರ ಮೂಲದ ಶಂಕರ್ ಬಂಧಿತ ಆರೋಪಿ. ಟೈಲ್ಸ್ ಹಾಕುವ ಕೆಲಸಮಾಡಿಕೊಂಡಿದ್ದ ಆರೋಪಿ ಶಂಕರ್ ಮಾ.7 ರಂದು ರಾತ್ರಿ 10.30ರಲ್ಲಿ ತನ್ನ ಸ್ನೇಹಿತರನ್ನು ಕರೆದುಕೊಂಡು ತನ್ನ ಮನೆ ಬಳಿ ಬಂದಿದ್ದ. ಆ ಸಂದರ್ಭದಲ್ಲಿ ಪಕ್ಕದ ಮನೆಯ ನಾಯಿ ಬೊಗಳುತ್ತಿದ್ದಾಗ, ಶಂಕರ್ ಹಾಗೂ ಸ್ನೇಹಿತರು ನಾಯಿ ಮೇಲೆ ಹಲ್ಲೆ ನಡೆಸಿ ಜಗಳ ಮಾಡುತ್ತಿದ್ದರು. ನಾಯಿ ಸಾಕಿದ್ದ ಮನೆ ಮಾಲೀಕರು ಹೊರಗೆ ಬಂದು ಈ ಬಗ್ಗೆ ಪ್ರಶ್ನಿಸಿದಾಗ, ಆರೋಪಿಗಳು ಮಾಲೀಕರ ಮೇಲೆಯೇ ಹಲ್ಲೆ ನಡೆಸಿದ್ದಾರೆ. 2ನೇ ವರ್ಷದ ಬಿ.ಕಾಂ ಓದುತ್ತಿರುವ 20 ವರ್ಷದ ಮನೆ ಮಾಲೀಕರ ಮಗಳು ಅಪ್ಪನ ರಕ್ಷಣೆಗೆ ಬಂದಾಗ, ಆರೋಪಿಗಳ ಗುಂಪು ಆಕೆಯನ್ನೂ ಹಿಡಿದು ಎಳೆದಾಡಿದೆ.
Advertisement
Arrested: ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ ನಡೆಸಿದವ ಬಂಧನ
09:39 AM Mar 13, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.