Advertisement

ವೈದ್ಯೆ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸಿ

01:03 PM Apr 03, 2022 | Team Udayavani |

ಹೊಸಪೇಟೆ: ರಾಜಸ್ಥಾನದಲ್ಲಿ ವೈದ್ಯೆ ವಿರುದ್ಧ ಸುಳ್ಳು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ವೈದ್ಯೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾಳೆ. ವೈದ್ಯೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೆಪಿಸಿದವರನ್ನು ಕೂಡಲೇ ಬಂಧಿಸಬೇಕು. ಜತೆಗೆ ವಿಜಯನಗರ ಜಿಲ್ಲೆಯಲ್ಲೂ ವೈದ್ಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಶುಕ್ರವಾರ ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ಹೊಸಪೇಟೆ ಘಟಕದ ನೇತೃತ್ವದಲ್ಲಿ ವೈದ್ಯರು ವಿಜಯನಗರ ಎಸ್ಪಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಬಳಿಕ ಎಸ್ಪಿ ಡಾ| ಅರುಣ್‌ ಕೆ. ಅವರಿಗೆ ಮನವಿ ಸಲ್ಲಿಸಿದರು.

Advertisement

ರಾಜಸ್ಥಾನದಲ್ಲಿ ರಕ್ತಸ್ರಾವದಿಂದ ರೋಗಿಯೊಬ್ಬರು ಮೃತಪಟ್ಟಿದ್ದಾರೆ. ಈ ಬಗ್ಗೆ ವೈದ್ಯೆ ಮೊದಲೇ ತಿಳಿಸಿದ್ದರೂ ಸುಳ್ಳು ಕೊಲೆ ಪ್ರಕರಣ ದಾಖಲಿಸಿ, ವೈದ್ಯೆಗೆ ಮಾನಸಿಕ ಕಿರುಕುಳ ನೀಡಲಾಗಿದೆ. ಇದರಿಂದ ಮನನೊಂದು ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂಥ ಪ್ರಕರಣಗಳು ದೇಶದಲ್ಲಿ ಮರುಕಳಿಸದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ವಿಜಯನಗರ ಜಿಲ್ಲೆಯಲ್ಲಿ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು. ವೈದ್ಯರಿಗೆ ತೊಂದರೆ ಉಂಟಾಗದಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು. ವಿಜಯನಗರ ಜಿಲ್ಲೆಯಲ್ಲಿ ವೈದ್ಯರಿಗೆ ಕಾನೂನು ಪ್ರಕಾರ ಸೂಕ್ತ ರಕ್ಷಣೆ ಒದಗಿಸಲಾಗುವುದು ಎಂದು ಎಸ್ಪಿ ಡಾ. ಅರುಣ್‌ ಕೆ. ಭರವಸೆ ನೀಡಿದರು.

ಐಎಂಎ ಅಧ್ಯಕ್ಷ ಡಾ| ವಿನಯರಾಘವೇಂದ್ರ ಎಚ್‌., ಕಾರ್ಯದರ್ಶಿ ಡಾ| ಸಂದೀಪ್‌ ಭಾರದ್ವಾಜ್‌, ಜಿಲ್ಲಾ ಸಂಯೋಜಕರಾದ ಡಾ| ನಾಜ್‌ಶೇಕ್‌, ವೈದ್ಯರಾದ ಡಾ| ಮಹಾಬಲೇಶ್ವರ ರೆಡ್ಡಿ, ಡಾ| ರಾಮದಾಸ್‌, ಡಾ| ಸಾಲಿಯಾ ಧರ್ಮಾಯತ್‌, ಡಾ| ನಾರಾಯಣಸ್ವಾಮಿ, ಡಾ| ಮೃತ್ಯುಂಜಯ ವಸ್ತ್ರದ, ಡಾ| ರಾಜೀವ್‌, ಡಾ| ಜಯಶ್ರೀ ನಾಯಕ, ಡಾ| ತನುಜಾ ಹುಬ್ಳಿ, ಡಾ| ಅಂಜನಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next