Advertisement

ಇಬ್ಬರು ಕಾನ್‌ಸ್ಟೇಬಲ್‌ ಅಭ್ಯರ್ಥಿಗಳ ಬಂಧನ

11:24 AM Mar 27, 2021 | Team Udayavani |

ಬೆಂಗಳೂರು: ಸಿವಿಲ್‌ ಕಾನ್‌ಸ್ಟೇಬಲ್‌ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು, ಇಬ್ಬರು ಕಾನ್‌ ಸ್ಟೇಬಲ್‌(ಪೇದೆ ಅಭ್ಯರ್ಥಿ) ಹಲಸೂರು ಗೇಟ್‌ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜೆಲ್ಲೆಯ ಗೋಕಾಕ್‌ನ ಬಾಡಿಗವಾಡ ಗ್ರಾಮದ ನಿವಾಸಿ ಬಸವರಾಜ ಹೊನಕುಪ್ಪಿ(22) ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಿವಾಸಿ ಕಾಸಪ್ಪ(25) ಬಂಧಿತ ಪೇದೆ ಅಭ್ಯರ್ಥಿಗಳು. ಆರೋಪಿತ ಅಭ್ಯರ್ಥಿಗಳ ಬದಲು ದೈಹಿಕ ಮತ್ತು ಲಿಖೀತ ಪರೀಕ್ಷೆಯನ್ನು ಬರೆದಿದ್ದ ಸೌರಭ್‌ ಮತ್ತು ಕಾಶಿನಾರ್ಥ ತೆಲಸಿಂಗ್‌ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ದೈಹಿಕ ಮತ್ತು ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಇಬ್ಬರು ಪೇದೆ ಅಭ್ಯರ್ಥಿಗಳು ಮತ್ತುಅವರಿಗೆ ಸಹಾಯ ಮಾಡಿದ ಇಬ್ಬರು ಆರೋಪಿಗಳ ವಿರುದ್ಧ ಹಲಸೂರು ಗೇಟ್‌ ಠಾಣೆಯಲ್ಲಿ ಸಿಎಆರ್‌ ಕೇಂದ್ರ ಎಸಿಪಿ ಎಚ್‌.ಎಂ.ಹರೀಶ್‌ ದೂರು ನೀಡಿದ್ದಾರೆ. ಅದರಂತೆ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್‌ ಪ್ರಕರಣದಾಖಲಾಗಿವೆ. ಅಭ್ಯರ್ಥಿಗಳಿಗೆ ಸಹಾಯ ಮಾಡಿ ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳ ಬಂಧನಕ್ಕೆ ತನಿಖೆ ಮುಂದುವರಿಸಲಾಗಿದೆ ಎಂದು ಹೇಳಿದ್ದಾರೆ.

2020-21ರಲ್ಲಿ ಕಾನ್‌ಸ್ಟೇಬಲ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆಲಿಖೀತ ಮತ್ತು ದೈಹಿಕ ಪರೀಕ್ಷೆ ನಡೆಸಲಾಗಿತ್ತು. ಈಪ್ರಕ್ರಿಯೆಯಲ್ಲಿ ನಗರ ಪೊಲೀಸ್‌ ಆಯುಕ್ತರ ವಿಭಾಗಕ್ಕೆಆಯ್ಕೆಯಾದ 76 ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಲಾಗಿತ್ತು. ಮಾ.20 ಮತ್ತು 22ರಂದುಅಭ್ಯರ್ಥಿಗಳ ದಾಖಲೆ ಪರಿಶೀಲಿಸುವಾಗ ಈ ಇಬ್ಬರುಆರೋಪಿಗಳು ಗೈರು ಹಾಜರಾಗಿದ್ದರು. ಬಳಿಕ, ಕರೆ ಮಾಡಿ ವಿಚಾರಿಸಿದಾಗ ಅಭ್ಯರ್ಥಿಗಳು ಕ್ರಮ ಎಸಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next