Advertisement

ವಿಜಯಪುರ: ಭೀಮಾ ತೀರದ ಹೆಸರಿನಲ್ಲಿ ಸುಲಿಗೆ ನಡೆಸಿದ ಮೂವರ ಬಂಧನ

02:39 PM Oct 24, 2020 | keerthan |

ವಿಜಯಪುರ: ಹತ್ಯೆಯಾಗಿರುವ ಭೀಮಾ ತೀರದ ಧರ್ಮರಾಜ ಚಡಚಣ ಹೆಸರಿನಲ್ಲಿ ಔಷಧಿ ಸಸ್ಯ ಉದ್ಯಮಿಯಿಂದ 1.37 ಲಕ್ಷ ರೂ. ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಬಂಧಿತ ಸುಲಿಗೆಕೋರ ಆರೋಪಿಗಳನ್ನು ಕನ್ನೂರು ಗ್ರಾಮದ ಮುರಿಗೆಪ್ಪ ಉರುಫ್ ಅಪ್ಪು ನಾಗಪ್ಪ ಬೆಳ್ಳುಂಡಗಿ, ಬಸವರಾಜ ಸಿದ್ಧಲಿಂಗಪ್ಪ ಬೆಳ್ಳುಂಡಗಿ, ಮಕಣಾಪುರ ಗ್ರಾಮದ ದೇವೇಂದ್ರ ಮಹಾದೇವ ಒಡೆಯರ ಎಂದು ಗುರುತಿಸಲಾಗಿದೆ ಎಂದು ಎಸ್ಪಿ ಅನುಪಮ್ ಅಗರವಾಲ್ ವಿವರ ನೀಡಿದ್ದಾರೆ.

ಔಷಧಿ ಸಸ್ಯ ಉದ್ಯಮಿಯಾಗಿರುವ ನಗರದ ಗಚ್ಚಿಕಟ್ಟಿ ನಿವಾಸಿ ದೇವೇಂದ್ರ ಅಪ್ಪಾಸಾಹೇಬ ಒಡೆಯರ ಎಂಬವರಿಗೆ ಆ.15 ರಂದು ಕರೆ ಮಾಡಿ ಸಸಿಗಳನ್ನು ಖರೀದಿ ಮಾಡುವುದಿದೆ ಎಂದು ಆರೋಪಿಗಳು ಮೊಬೈಲ್ ಕರೆ ಮಾಡಿದ್ದಾರೆ. ಔಷಧಿ ಸಸ್ಯಗಳ ಖರೀದಿ ಕುರಿತು ಮಾತನಾಡಲು ಶಿರನಾಳ-ಬಬಲಾದ ಮಧ್ಯದ ಸ್ಥಳಕ್ಕೆ ಬರುವಂತೆ ಕರೆಸಿಕೊಂಡು ತಗಾದೆ ಆರಂಭಿಸಿದ್ದಾರೆ.

ನಾವು ಧರ್ಮರಾಜ ಚಡಚಣ ಕಡೆಯವರಿದ್ದು, ನೀನು ಮಹಿಳೆಯರಿಗೆ ಮೋಸ ಮಾಡಿದ್ದೀಯಾ ಹಾಗೂ ನಿನ್ನ ಕಛೇರಿಯಲ್ಲಿರುವ ಮಹಿಳೆಯನ್ನು ಇರಿಸಿಕೊಂಡಿದ್ದಿ. ನಿನ್ನನ್ನು ಹತ್ಯೆ ಮಾಡಿ ಹೊಳೆಗೆ ಎಸೆಯುತ್ತೇವೆ, ಹತ್ಯೆಯಿಂಧ ತಪ್ಪಿಸಿಕೊಳ್ಳಲು 1.20 ಲಕ್ಷ ರೂ. ಕೊಡುವಂತೆ ಬೆದರಿಕೆ ಹಾಕಿ ಹಣ ತರಿಸಿಕೊಂಡು, ಆತನ ಬಳಿ ಇದ್ದ ಮೊಬೈಲ್ ಕೂಡ ಕಿತ್ತುಕೊಂಡಿದ್ದರು.

ಇದನ್ನೂ ಓದಿ:ಭಾರತದಲ್ಲಿ ಟ್ರಂಪ್ ಕಾರ್ಯಕ್ರಮ ಮಾಡದಿದ್ದರೆ ಕೋವಿಡ್ ಹರಡುತ್ತಿರಲಿಲ್ಲ: ರಾಮಲಿಂಗಾ ರೆಡ್ಡಿ

Advertisement

ಘಟನೆಯ ಕುರಿತು ಮೋಸಕ್ಕೆ ಸಿಕ್ಕಿ ಸುಲಿಗೆಗೆ ಗುರಿಯಾಗದ ದೇವೇಂದ್ರ ಒಡೆಯರ, ವಿಜಯಪುರ ಗ್ರಾಮೀಣ ಠಾಣೆ ಪೊಲೀಸರಿಗೆ ದೂರು ನೀಡಿದ್ದ. ಎಸ್ ಪಿ ಅನುಮಮ ಅಗರವಾಲ್, ಎಎಸ್ ಪಿ ರಾಮ ಅರಸಿದ್ಧಿ ಮಾರ್ಗದರ್ಶನದಲ್ಲಿ ತನಿಖೆಗೆ ಇಳಿದ ವಿಜಯಪುರ ಗ್ರಾಮೀಣ ಸಿಪಿಐ ಮಹಾಂತೇಶ ದಾಮಣ್ಣವರ ನೇತೃತ್ವದ ಪೊಲೀಸರ ತಂಡ ಚಾಣಾಕ್ಷತನದಿಂದ ಆರೋಪಿಗಳನ್ನು ಬಂಧಿಸಿ, ಜೈಲಿಗೆ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ಬಂಧಿಸುವಲ್ಲಿ ನೆರವಾದ ತನಿಖಾ ತಂಡದಲ್ಲಿದ್ದ ಎಸ್ ಐಗಳಾದ ಆನಂದ ಠಕ್ಕಣ್ಣವರ, ಆರ್.ಎ.ದಿನ್ನಿ, ಸಿಬ್ಬಂದಿಗಳಾದ ಎಂ.ಎಸ್.ಮುಜಾವರ, ಗುರು ಹಡಪದ, ಎಲ್.ಎಸ್.ಹಿರೇಗೌಡರ, ಆರ್.ಜಿ.ಅಂಜುಟಗಿ, ಪರಶುರಾಮ ವಲೀಕಾರ, ರವಿ ನಾಟೀಕರ, ಐ.ವೈ.ದಳವಾಯಿ, ಎಸ್.ಎಚ್.ಡೊಣಗಿ, ಎಸ್.ಆರ್.ಪೂಜಾರಿ ಇತರರಿಗೆ ಎಸ್ ಪಿ ಬಹುಮಾನ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next