Advertisement

Thieves: ಮೂವರು ವೃತ್ತಿಪರ ಸರ ಕಳ್ಳರ ಬಂಧನ

02:29 PM Nov 01, 2023 | Team Udayavani |

ಬೆಂಗಳೂರು: ಸರ ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಮೂವರು ಆರೋಪಿಗಳನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪುಲಕೇಶಿನಗರ ನಿವಾಸಿಗಳಾದ ಜಬಿವುದ್ದೀನ್‌, ಮೊಹಮ್ಮದ್‌ ಬಂಧಿತರು.

Advertisement

ಆರೋಪಿಗಳಿಂದ 26.5 ಲಕ್ಷ ರೂ. ಮೌಲ್ಯದ 503 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಪೈಕಿ ಜಬಿವುದ್ದೀನ್‌ ಮತ್ತು ಮೊಹಮ್ಮದ್‌ ಸಂಜೆ ವೇಳೆ ವಾಯುವಿಹಾರ ಮಾಡುವ ವೃದ್ಧರನ್ನು ಗುರಿಯಾಗಿಸಿಕೊಂಡು ಸರ ಕಸಿದುಕೊಂಡು ಪರಾರಿಯಾಗುತ್ತಿದ್ದರು. ಆರೋಪಿಗಳು 12 ವರ್ಷಗಳಿಂದ ಸರ ಕಳವು ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಪೊಲೀಸರು ಹೇಳಿದರು. ಮತ್ತೂಂದು ಸರ ಕಳವು ಪ್ರಕರಣದಲ್ಲಿ ಜಗದೀಶ್‌ ಎಂಬಾತನನು ಬಂಧಿಸಲಾಗಿದೆ.

ಜಗದೀಶ್‌ ಬಂಧಿತ. ಆರೋಪಿ ಒಂಟಿಯಾಗಿ ಓಡಾಡುವ ಮಹಿಳೆಯರ ಸರ ಕಸಿದು ಪರಾರಿಯಾಗುತ್ತಿದ್ದ. ಇತ್ತೀಚೆಗೆ ಕದ್ದ ಚಿನ್ನಾಭರಣಗಳನ್ನು ಅಡಮಾನ ಇಡಲು ಚಿನ್ನಾಭರಣ ಮಳಿಗೆಗೆ ಬಂದಿದ್ದಾನೆ. ಆದರೆ, ಅನುಮಾನಗೊಂಡ ಅಂಗಡಿ ಮಾಲಿಕ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಗದೀಶ್‌ನನ್ನು ಬಂಧಿಸಲಾಗಿದೆ. ಆರೋಪಿ 2014ರಿಂದಲೂ ಸರ ಕಳವು ಕೃತ್ಯ ಎಸಗುತ್ತಿದ್ದಾನೆ. ಆತನಿಂದ 6.5 ಲಕ್ಷರೂ. ಮೌಲ್ಯದ 122 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next