Advertisement

ಪೊಲೀಸರ ಭರ್ಜರಿ ಬೇಟೆ: ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರ ಬಂಧನ;456 ಕೆಜಿ ಗಾಂಜಾ ವಶ

09:24 PM Dec 15, 2021 | Team Udayavani |

ಹುಮನಾಬಾದ: ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬೀದರ ಸೇನ್ ಪೊಲೀಸರು ದಾಳಿ ನಡೆಸಿ 456 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಆರೋಪಿಗಳನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸಿರುವುದಾಗಿ ತಿಳಿಸಿದ್ದಾರೆ.

ತೆಲಂಗಾಣದ ವಿಶಾಖಪಟ್ಟಣಂದಿಂದ ಮಹಾರಾಷ್ಟ್ರದ ಸೋಲಾಪೂರಕ್ಕೆ ಮೂರು ಕಾರುಗಳಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ನಡೆದಿದೆ ಎಂದು ಖಚಿತ ಮಾಹಿತಿ ಪಡೆದ ಬೀದರ ಸೇನ್ ಪೊಲೀಸ್ ಅಧಿಕಾರಿ ಸುಶೀಲಕುಮಾರ ಅವರು, ಬೀದರ ಎಸ್.ಪಿ ಡಿ.ಎಲ್ ನಾಗೇಶ ಅವರ ಮಾರ್ಗದರ್ಶನದಲ್ಲಿ ಹುಮನಾಬಾದ ಸಿಪಿಐ ಮಲ್ಲಿಕಾರ್ಜುನ ಯಾತನೂರ ಹಾಗೂ ಪಿಎಸ್‌ಐ ರವಿಕುಮಾರ ನಾಯ್ಕೋಡಿ ಅವರ ಸಹಯೋಗದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾಳಿ ನಡೆಸಿ 456 ಕೆಜಿ ಗಾಂಜಾ 22.80 ಲಕ್ಷ ಮೌಲ್ಯ. 9 ಲಕ್ಷದ ಮೂರು ಕಾರುಗಳು, 10,250 ನಗದು ಹಣ ಜಪ್ತಿಮಾಡಿದ್ದಾರೆ.

ಘಟನೆಯ ಕುರಿತು ಹುಮನಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐಜಿಪಿ, ಎಸ್‌ಪಿ ಭೇಟಿ: ಭಾರಿ ಪ್ರಮಾಣದಲ್ಲಿ ಗಾಂಜಾ ಪತ್ತೆಯಾದ ಮಾಹಿತಿ ಪಡೆದ ಕಲಬುರಗಿ ಐಜಿಪಿ ಮುನೀಶ್ ಖರ್ಬಿಕರ್ ಹುಮನಾಬಾದ ಪೊಲೀಸ್ ಠಾಣೆಗೆ ಭೇಟಿನೀಡಿ ಪರಿಶೀಲನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಸೇನ್ ಪಿಐ ಸುಶೀಲಕುಮಾರ ಪ್ರಕರಣದ ಕುರಿತು ಮಾಹಿತಿ ನೀಡಿದರು. ಹೇಗೆ ಗಾಂಜಾ ಸಾಗಟ ಮಾಡಿದರು. ಕಾರುಗಳ ಬಳಕೆ ಹೇಗೆ ಮಾಡಿದ್ದು ಎಂಬುವುದು ಕುರಿತು ವಿವರಣೆ ಪಡೆದ ಅವರು, ಅಕ್ರಮ ಚಟುವಟಿಕೆಗಳಿಗೆ ಮಟ್ಟ ಹಾಕುವಂತೆ ಅಧಿಕಾರಿಗಳಿಗೆ ಸೂಚಿನೆ ನೀಡಿದರು.

ನಂತರ ಬೀದರ್ ಎಸ್.ಪಿ ಡಿ.ಎಲ್ ನಾಗೇಶ ಭೇಟಿನೀಡಿ ಪ್ರಕಣದ ಕುರಿತು ಮಾಹಿತಿ ಪಡೆದುಕೊಂಡರು. ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿಐ ಸುಶೀಲಕುಮಾರ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಇವರಿಗೆ ಸಿಪಿಐ ಯಾತನೂರ್, ಪಿಎಸ್‌ಐ ರವಿಕುಮಾರ ಉತ್ತಮ ಸಾಥ್ ನೀಡಿ ಸಹಕಾರ ನೀಡಿದ್ದಾರೆ ಎಂದ ಅವರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ಮಾಹಿತಿಗಳು ಬರುತ್ತಿವೆ. ಆದರೆ, ಹೆದ್ದಾರಿಯಲ್ಲಿ ಸಾಗುವ ಎಲ್ಲಾ ವಾಹನಗಳನ್ನು ತಡೆದು ಪರಿಶೀಲನೆ ನಡೆಸಲು ಸಾಧ್ಯವಿಲ್ಲ. ಖಚಿತ ಮಾಹಿತಿ ಬಂದ ಕೆಲವು ಘಟನೆಗಳಲ್ಲಿ ತಪ್ಪಾಗಿರುವುದು ಕೂಡ ಕಂಡು ಬಂದಿದ್ದು, ಖಚಿತ ಮಾಹಿತಿ ಇರುವ ಕಡೆಗಳಲ್ಲಿ ಯಾವುದೇ ಮುಲಾಜು ಇಲ್ಲದೆ ದಾಳಿ ನಡೆಸಲಾಗುತ್ತಿದೆ. ದೊಡ್ಡ ಮೊತ್ತದ ಗಾಂಜಾ ಪತ್ತೆಯಾದ ಹಿನ್ನೆಲೆ ಕುರಿತು ಪೊಲೀಸ್ ಅಧಿಕಾರಿಗಳು ಸಮಗ್ರ ಮಾಹಿತಿ ಪಡೆದುಕೊಂಡು ಉನ್ನತ ತನಿಖೆ ನಡೆಸಲ್ಲಿದ್ದಾರೆ ಎಂದು ಎಸ್‌ಪಿ ಡಿ.ಎಲ್ ನಾಗೇಶ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸೇನ್ ಸಿಬ್ಬಂದಿಗಳಾದ ಶಿವಕುಮಾರ, ಅರುಣಕುಮಾರ, ಭಾರತ್, ದಶರತ್, ಸುನೀಲಕುಮಾರ, ಹುಮನಾಬಾದ ಸಿಬ್ಬಂದಿಗಳಾದ ಸಂಜೀವಕುಮಾರ, ಭಗವಾನ್, ಮಲ್ಲಪ್ಪಾ ಮಳ್ಳಿ, ಶೀವಾನಂದ, ಸಂತೋಷ್, ಅಂಬರೀಶ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next