ಅಣ್ಣಿಗೇರಿ: ಪಟ್ಟಣದಲ್ಲಿ ನಕಲಿ ವೈದ್ಯಕೀಯ ಪ್ರಮಾಣ ಪತ್ರ ಬಳಸಿಕೊಂಡು ಸುಮಾರು ವರ್ಷಗಳಿಂದ ಸಾವಿರಾರು ರೋಗಿಗಳಿಗೆಮನಸ್ಸಿಗೆ ಬಂದಂತೆ ಚಿಕಿತ್ಸೆ ನೀಡುತ್ತಿದ್ದ
ವೈದ್ಯ ಡಾ| ಹರೀಶ ನಾರಾಯಣಪುರ ಎಂಬುವರನ್ನು ಜಿಲ್ಲಾಡಳಿತದ ವಿಶೇಷ ತಂಡ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.ನಕಲಿ ವೈದ್ಯರ ಪತ್ತೆಗೆ ಜಿಲ್ಲಾಡಳಿತ ವಿಶೇಷ ತಂಡವೊಂದನ್ನು ರಚಿಸಿದ್ದು, ಜಿಲ್ಲಾ ತಂಡ ತಾಲೂಕಿನಾದ್ಯಂತ ಇರುವ ನಕಲಿ ವೈದ್ಯರಮಾಹಿತಿ ಕಲೆ ಹಾಕಲು ಮುಂದಾಗಿದೆ.
ಇಲ್ಲಿನ ನಿಜಲಿಂಗಪ್ಪ ಹುಬ್ಬಳ್ಳಿ ಮಾರ್ಗದಲ್ಲಿರುವ ಡಾ| ಹರೀಶ ನಾರಾಯಣಪುರ ದವಾಖಾನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ನಕಲಿ ವೈದ್ಯನ ರಹಸ್ಯ ಬಯಲಾಗಿದೆ.ಡಾ| ಹರೀಶ ನಾರಾಯಣಪುರ ವೈದ್ಯಕೀಯಕ್ಕೆ ಸಂಬಂಧಿಸಿದಂತೆ ಯಾವುದೇ ಪದವಿ (ಕೋರ್ಸ್) ಪಡೆಯದೇ ಪಟ್ಟಣದಲ್ಲಿ ಸುಮಾರು ವರ್ಷಗಳಿಂದ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ತೆರೆದಿದ್ದ. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಯ ನೋಂದಣಿ ಪ್ರಕಾರ ಅಸಲಿ ವೈದ್ಯರು ತಮ್ಮ ನೋಂದಣಿ ಮಾಡಿಸಿ ಆಸ್ಪತ್ರೆ ತೆರೆಯಲು ಅನುಮತಿ ಪಡೆಯುವದು ಕಡ್ಡಾಯವಾಗಿರುತ್ತದೆ. ಈಸಂಸ್ಥೆಯಲ್ಲಿ ಯಾವ ವೈದ್ಯರು ನೋಂದಣಿ ಮಾಡಿಸಿರುವುದಿಲ್ಲವೊ? ಅಂಥವರು ನಕಲಿ ವೈದ್ಯರು ಎಂದು ಪರಿಗಣಿಸಲಾಗುವುದು ಎಂದು ವಿಶೇಷ ತಂಡದ ಮುಖ್ಯಸ್ಥೆ ಶಾರದಾಕೋಲಕಾರ ತಿಳಿಸಿದರು.
ಬಂಧಿತ ನಕಲಿ ವೈದ್ಯ ಡಾ| ಹರೀಶ ನಾರಾಯಣಪುರ ಅವರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ನಕಲಿ ವೈದ್ಯರ ದಾಳಿ ವೇಳೆ ತಹಶೀಲ್ದಾರ್ ಕೋಟ್ರೇಶಗಾಳಿ, ತಾಲೂಕು ವೈದ್ಯಾ ಧಿಕಾರಿ ಎಸ್.ಎನ್.ಮಸೂತಿ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಪವಿತ್ರಾ ಪಾಟೀಲ, ಕಂದಾಯ ನಿರೀಕ್ಷಕ ಎಂ.ಎಚ್. ಸದರಬಾಯಿ, ರಿಷಿಕುಮಾರ ಸಾರಂಗಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು