Advertisement

ಗೋವಾ ಪೊಲೀಸರ ಭರ್ಜರಿ ಬೇಟಿ: ಕಾರ್ ಸ್ಟೀರಿಯೋ ಕಳ್ಳರ ಬಂಧನ

06:25 PM Aug 23, 2021 | Team Udayavani |

ಪಣಜಿ: ಕಾರುಗಳ ಸ್ಟೀರಿಯೊ ಕಳ್ಳತನ ಮಾಡುತ್ತಿದ್ದ ಮೂವರನ್ನು ಗೋವಾ ಪೊಲೀಸರು ಬೆಳಗಾವಿ ಪೊಲೀಸರ ಸಹಕಾರದೊಂದಿಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಬಂಧಿತ ಆರೋಪಿಗಳಿಂದ ಸುಮಾರು 15 ಲಕ್ಷ ರೂ ಮೌಲ್ಯದ ವಿವಿಧ ವಸ್ತುಗಳನ್ನು ಪೊಲೀಸರು ವಷಪಡಿಸಿಕೊಂಡಿದ್ದಾರೆ.

ಮುಂಬೈ ಮೂಲದ ಜುಬೇರ್ ರಹೀಂ ಅಹಮ್ಮದ್ ( 31), ಜಗನ್ನಾಥ್ ರಾಮನಾಥ ಸರೋಜ್ (46) ಹಾಗೂ ಕೊಲ್ಲಾಪುರದ ಪ್ರದೀಪ ರವಳನಾಥ ಗುರವ್ (27)ಬಂಧಿತ ಖದೀಮರು.

ಬಂಧಿತ ಆರೋಪಿಗಳಿಂದ 16 ವಿವಿಧ ಕಂಪನಿಗಳ ಸ್ಟೀರಿಯೊ, ರೆಡಿಮೇಡ್ ಬಟ್ಟೆ, ಒಂದು ಕಾರು, ಮೊಬೈಲ್ ಜಪ್ತಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಣಜಿ ಪೊಲೀಸರು ಹೆಚ್ಚಿನ ತನಿಖೆ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next