Advertisement

ಮಾಂಗಲ್ಯ ಕದ್ದ ಆರೋಪಿ ಸೆರೆ

12:58 PM Sep 04, 2020 | Suhan S |

ಕನಕಪುರ: ಸರಗಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದು, ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಮದ್ದೂರು ತಾಲೂಕು ಆತಗೂರು ಹೋಬಳಿಯ ವಡ್ಡರ ದೊಡ್ಡಿಗ್ರಾಮದ ಪ್ರಮೋದ್‌ ಅಲಿಯಾಸ್‌ ಕರಿಯಪ್ಪ (23) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.

Advertisement

ತಾಲೂಕಿನ ಕಸಬಾ ಹೋಬಳಿಯ ತಿಗಳರ ಹೊಸಹಳ್ಳಿ ಗ್ರಾಮದ ರತ್ನಮ್ಮ ಕಲ್ಲಹಳ್ಳಿ ಮಾರ್ಗವಾಗಿ ಕನಕಪುರಕ್ಕೆ ಒಂಟಿಯಾಗಿ ನಡೆದುಕೊಂಡು ಬರುತ್ತಿದ್ದ ವೇಳೆ ಕೊರಳಿನಲ್ಲಿದ್ದ 40 ಗ್ರಾಂ ತೂಕದ 2 ಲಕ್ಷ ರೂ. ಮೌಲ್ಯದ ಮಾಂಗಲ್ಯದ ಸರವನ್ನು ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಖದೀಮರು ಕಿತ್ತುಕೊಂಡು ಪರಾರಿಯಾಗಿದ್ದರು.

ರತ್ನಮ್ಮ ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ತನಿಖೆ ಕೈಗೊಂಡಿದ್ದ ಪೊಲೀಸರು ಮರಳವಾಡಿ ಹೋಬಳಿಯ ಪಿಚ್ಚನಕೆರೆ ಗ್ರಾಮದಲ್ಲಿ ವೃತ್ತ ನೀರಿಕ್ಷಕ ಅಶೋಕ್‌ ಕುಮಾರ್‌ ಅವರು ವಾಹನಗಳ ತಪಾಸಣೆ ವೇಳೆ ಅದೇ ಮಾರ್ಗವಾಗಿ ಬಂದ ಪ್ರಮೋದ್‌ ಪೊಲೀ ಸರನ್ನು ಕಂಡು ಅನುಮಾನಾಸ್ಪದವಾಗಿ ವರ್ತಿಸಿದ್ದಾನೆ. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವ ಮಾಂಗಲ್ಯ ಸರ ಮಾರಾಟ ಮಾಡಲು ಹೋಗುತ್ತಿರುವುದಾಗಿ ಒಪ್ಪಿಕೊಂಡಿದ್ದ. 2017ರಲ್ಲಿ ಮದ್ದೂರಿನ ಪ್ರಕರಣದಲ್ಲಿ ಭಾಗಿಯಾಗಿರುವುದು ಸೇರಿದಂತೆ ಕಳ್ಳತನಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಜು.29 ರಂದು ಬೆಂಗಳೂರಿನ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ವಾಹನದ ನಂಬರ್‌ ಬದಲಾವಣೆ ಮಾಡಿಕೊಂಡು ಕಳ್ಳತನ ಮಾಡಲು ಬಳಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next