Advertisement
ದೊಡ್ಡಬೊಮ್ಮಸಂದ್ರದ ಪ್ರಕಾಶ್ ಹಾಗೂ ಮಧು ಬಂಧಿತ ದಂಪತಿ. ಬಂಧಿತರಿಂದ 2 ಲಕ್ಷ ರೂ. ನಗದು, ವಿವಿಧ ಕಂಪನಿಯ 4 ಮೊಬೈಲ್, ಬೈಕ್, 6 ಬ್ಯಾಂಕ್ ಖಾತೆಗಳಿಗೆ ಸೇರಿದ 15 ಕ್ರೆಡಿಟ್, ಡೆಬಿಟ್ ಹಾಗೂ ಚೆಕ್ ಬುಕ್‌ಗಳು, 11 ವಿವಿಧ ಕಂಪನಿಯ ಕೈಗಡಿಯಾರ, ಸಿಮ್ ಕಾರ್ಡ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವಕರಿಂದ 6 ಲಕ್ಷ ರೂ. ಪಡೆದುಕೊಂಡಿದ್ದರು. ಕೆಲಸವನ್ನೂ ಕೊಡಿಸಿದೆ, ಹಣ ವಾಪಸ್ ನೀಡದೆ ವಂಚಿಸಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು. ಅದನ್ನು ಆಧರಿಸಿ ವಿಶೇಷ ತಂಡ ರಚಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಮೂರು ಪ್ರಕರಣಗಳು ಪತ್ತೆಯಾಗಿವೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು. Advertisement
Arrested: ಕೆಲಸ ಕೊಡಿಸುತ್ತೇವೆಂದು ವಂಚಿಸಿದ ದಂಪತಿ ಬಂಧನ
12:10 PM Feb 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.