Advertisement

ತ.ನಾಡಿನ 9 ಮೀನುಗಾರರ ಬಂಧನ

01:00 AM Jul 26, 2023 | Team Udayavani |

ಚೆನ್ನೈ: ಕಡಲ ಗಡಿ ನಿಯಮ ಉಲ್ಲಂಘಿಸಿ ಮೀನುಗಾರಿಕೆ ನಡೆಸಿರುವ ಆರೋಪದ ಮೇರೆಗೆ ಶ್ರೀಲಂಕಾ ನೌಕಾಪಡೆಯು ತಮಿಳುನಾಡಿನ 9 ಮೀನುಗಾರರನ್ನು ಬಂಧಿಸಿದ್ದು, ಈ ಬಗ್ಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇಂಥ ಘಟನೆಗಳು ಪದೇ ಪದೆ ಮರುಕಳಿಸುತ್ತಿರುವುದನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರ ಗಮನಕ್ಕೆ ತಂದಿರುವುದಾಗಿ ತಿಳಿಸಿದ್ದಾರೆ.

Advertisement

ರಾಮನಾಥಪುರ ಜಿಲ್ಲೆಯ ಮೀನುಗಾರರು ಸೋಮವಾರ ಮೀನುಗಾರಿಕೆಗೆ ತೆರಳಿದ್ದಾರೆ. ಅವರನ್ನು ಕಚ್ಚತೀವು ಪ್ರದೇಶದ ಸಮೀಪದಲ್ಲಿ ಬಂಧಸಲಾಗಿದೆ ಜತೆಗೆ 2 ಯಂತ್ರಚಾಲಿತ ಹಡಗುಗಳನ್ನು ಲಂಕಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆ ಜೈಶಂಕರ್‌ ಅವರಿಗೆ ಸಿಎಂ ಸ್ಟಾಲಿನ್‌ ಪತ್ರ ಬರೆದಿದ್ದಾರೆ.

ಅದರಲ್ಲಿ “ಪದೇಪದೆ ಇಂಥ ಘಟನೆಗಳು ಮರುಕಳಿಸುತ್ತಿರುವುದು ತೀವ್ರ ಆತಂಕ ತಂದಿದೆ. ತಮಿಳುನಾಡಿನ ಮೀನುಗಾರರು ಇದರಿಂದ ಸಮಸ್ಯೆಗೆ ಸಿಲಕುತ್ತಿದ್ದಾರೆ. ಲಂಕಾದ ಇಂಥ ನಡವಳಿಕೆಗಳು ದ್ವಿಪಕ್ಷೀಯ ಸಂಬಂಧವನ್ನೂ ಹಾಳುಗೆಡಹುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಮಧ್ಯಪ್ರವೇಶಿಸಿ, ಈ ಸಮಸ್ಯೆ ಬಗೆಹರಿಸಬೇಕು, ವಿದೇಶಾಂಗ ಸಚಿವಾಲಯ ಈ ಕುರಿತು ತ್ವರಿತ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next