Advertisement
ಕುಖ್ಯಾತ ಓ.ಜಿ.ಕುಪ್ಪಂ ತಂಡದ ಇಬ್ಬರು ಸೆರೆ: ಸಬ್‌ರಿಜಿಸ್ಟಾರ್ ಕಚೇರಿ, ಎಟಿಎಂ,ಬ್ಯಾಂಕ್ ಹಾಗೂ ಇತರೆ ಹಣದ ವಹಿವಾಟು ನಡೆಯುವ ಸ್ಥಳಗಳಲ್ಲಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಹಣ ಲೂಟಿ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಓ.ಜಿ.ಕುಪ್ಪಂ ತಂಡದ ಶ್ರೀನಿವಾಸಲು, ಬಾಬು ಎಂಬವವರನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.
Related Articles
Advertisement
ಆರೋಪಿ ಬೆಳಗ್ಗೆ ಹೊತ್ತಿನಲ್ಲಿ ಶ್ರೀಮಂತರ ಮನೆಗಳು, ಭದ್ರತಾ ಸಿಬ್ಬಂದಿ ಇಲ್ಲದ ಅಪಾರ್ಟ್‌ಮೆಂಟ್‌ಗಳಿಗೆ ಬ್ಯಾಗ್ ಹಾಕಿಕೊಂಡು ನುಗ್ಗುತ್ತಿದ್ದ. ಸೂðಡ್ರೈವರ್ ಬಳಸಿ ಫ್ಲ್ಯಾಟ್‌ಗಳ ಲಾಕ್ ಮುರಿದು ಒಳ ಪ್ರವೇಶಿಸಿ ಹಣ, ಆಭರಣ ದೋಚಿ ಪರಾರಿಯಾಗುತ್ತಿದ್ದ. ಕಳ್ಳತನ ಮಾಡುವ ವೇಳೆ ತನ್ನ ಬೆರಳಚ್ಚು ಗುರುತು ಸಿಗಬಾರದೆಂದು ಕೈಗವಸ್ತ್ರ ಧರಿಸುತ್ತಿದ್ದ. ಅಲ್ಲದೇ, ಸಿಸಿಟಿವಿ ಕ್ಯಾಮರಾದಲ್ಲಿ ಮುಖಚಹರೆ ಸೆರೆಯಾಗಬಾರದು ಎಂದು ಟೋಪಿ ಧರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಗಳ್ಳರ ಬಂಧನ: ಮನೆಗಳ್ಳತನ ನಡೆಸುತ್ತಿದ್ದ ಆರೋಪಿಗಳನ್ನು ಪತ್ತೆ ಹಚ್ಚಿರುವ ಬೊಮ್ಮನಹಳ್ಳಿ ಠಾಣೆ ಪೊಲೀಸರು ಪ್ರಕಾಶ, ರಾಮು ಎಂಬುವರನ್ನು ಬಂಧಿಸಿ ಸುಮಾರು 60 ಲಕ್ಷ ರೂ. ಮೌಲ್ಯದ ವಜ್ರ, ಪ್ಲಾಟಿನಂ, ಚಿನ್ನಾಭರಣಗಳು ಹಾಗೂ ಬೆಳ್ಳಿ ಪರಿಕರಗಳನ್ನು ವಶಪಡಿಸಿಕೊಂಡು 22 ಕನ್ನ ಕಳವು ಪ್ರಕರಣಗಳನ್ನು ಪತ್ತೆ ಮಾಡಿ¨ªಾರೆ. ಈತನು ಹಳೆಯ ಮನೆಕಳವು ಆರೋಪಿಯಾಗಿದ್ದು, ಕಳೆದ ಫೆಬ್ರವರಿ 2017ರಲ್ಲಿ ಜೈಲಿನಿಂದ ಹೊರಬಂದು ಪುನಃ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುತ್ತಾನೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮನೆಗಳ್ಳತನ ಮಾಡುತ್ತಿದ್ದ ನಾಗರಾಜ್, ಇಮ್ರಾನ್ ಖಾನ್, ರಾಮಜಿನ್ ಎಂಬುವರನ್ನು ಬಂಧಿಸಿದ್ದಾರೆ. ಇವರಿಂದ 12 ಲಕ್ಷ ರೂ. ಮೌಲ್ಯದ 460 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಇನ್ನುಳಿದ್ದಂತೆ ಬೈಕ್ ಕಳವು ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಬೋರಲಿಂಗಯ್ಯ ತಿಳಿಸಿದರು.
ಗೌರಿ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ: “ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣದಲ್ಲಿ ಯಾರನ್ನು ಬಂಧಿಸಿಲ್ಲ. ವಶಕ್ಕೂ ಪಡೆದುಕೊಂಡಿಲ್ಲ. ಆದರೆ, ತನಿಖೆ ನಡೆಯುತ್ತಿದೆ,’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಶನಿವಾರ ಕೋರಮಂಗಲದಲ್ಲಿ ಆಗ್ನೇಯ ವಿಭಾಗದ ಪೊಲೀಸರು ಆಯೋಜಿಸಿದ್ದ ಕಳವು ವಸ್ತುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, “ಪ್ರೋ ಕಲಬುರಗಿ ಪ್ರಕರಣದಲ್ಲಿ ಹೆಚ್ಚಿನ ಪ್ರಗತಿ ಇಲ್ಲ. ಆದರೆ, ಗೌರಿಲಂಕೇಶ್ ಹತ್ಯೆ ತನಿಖೆಗೆ ಯಾವುದೇ ಅಡೆತಡೆ ಎದುರಾಗಿಲ್ಲ,’ ಎಂದು ತಿಳಿಸಿದರು.
ಮಧ್ಯ ಪ್ರವೇಶಿಸುವುದಿಲ್ಲ: ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್‌ನನ್ನು ರೌಡಿಪಟ್ಟಿಗೆ ಸೇರಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಒತ್ತಾಯಿಸಿದ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ಈ ಮೊದಲು ಬಿಜೆಪಿಯ ಕೆಲ ಕಾರ್ಯಕರ್ತರು ದಾದಾಗಿರಿ, ಗೂಂಡಾಗಿರಿ ಮಾಡಿದ್ದಾರೆ. ಅವರ ವಿರುದ್ಧ ಯಾಕೆ ರೌಡಿಪಟ್ಟಿ ತೆರೆಯಲು ಶೋಭಾ ಒತ್ತಾಯಿಸಲಿಲ್ಲ? ರೌಡಿಪಟ್ಟಿ ತೆರೆಯುವುದು ನಗರ ಪೊಲೀಸರ ವಿವೇಚನೆಗೆ ಬಿಟ್ಟಿದ್ದು, ಸರ್ಕಾರವಾಗಲಿ, ನಾನಾಗಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ವೇಳೆ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಇತರರು ಇದ್ದರು.
ಬಟ್ಟೆ ವ್ಯಾಪಾರ ಮಾಡಿದ ಪೊಲೀಸರು: ಕಳವು ಮಾಡುವ ಜತೆಗೆ ಈ ಆರೋಪಿಗಳು ಅಕ್ಕ-ಪಕ್ಕ ನಿಂತಿರುವ ಸಾರ್ವಜನಿಕರ ಚಲವಲನಗಳ ಮೇಲೂ ನಿಗಾವಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳು ವಾಸವಿದ್ದ ಅಪಾರ್ಟ್‌ಮೆಂಟ್‌ನ ಕೂಗಳತೆ ದೂರದಲ್ಲಿ ನಾಲ್ಕಾರು ಪೊಲೀಸರು ಬಟ್ಟೆ ವ್ಯಾಪಾರದಲ್ಲಿ ತೊಡಗಿದ್ದರು. ಈ ವೇಳೆ ಆರೋಪಿಗಳು ಓಜಿಕುಪ್ಪಂನಿಂದ ಬಂದು ಮತ್ತೆ ಕುಕೃತ್ಯ ಮುಂದುವರಿಸಿದ್ದರು. ಅಲ್ಲದೆ, ಒಂದೆರಡು ಬಾರಿ ವ್ಯಾಪಾರಿಗಳ ಸೋಗಿನಲ್ಲಿದ್ದ ಪೊಲೀಸರ ಜತೆ ಬಟ್ಟೆ ಖರೀದಿ ವಿಚಾರದಲ್ಲಿ ತಕರಾರು ಮಾಡಿದ್ದರು. ಕೊನೆಗೆ ಆರೋಪಿಗಳನ್ನು ಬಂಶಿಸಿದ ಮಡಿವಾಳ ಠಾಣೆ ಪೊಲೀಸರು, ಆರೋಪಿಗಳು ಓಜಿಕುಪ್ಪಂ ಮನೆಯಲ್ಲಿ ಅಡಗಿಸಿಟ್ಟಿದ್ದ 18 ಲಕ್ಷ ರೂ. ನಗದು ವಶಕ್ಕೆ ಪಡೆದಿದ್ದಾರೆ.
ಟೆಕ್ಕಿಗಳ ಸೋಗಿನಲ್ಲಿ ದರೋಡೆ: ಸಾಫ್ಟ್‌ವೇರ್ ಉದ್ಯೋಗಿಗಳು, ಅಧಿಕಾರಿಗಳ ಸೋಗಿನಲ್ಲಿ ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿ ಫ್ಲಾಟ್‌ಗಳ ಬೀಗ ಮುರಿದು ಕಳವು ಮಾಡುತ್ತಿದ್ದ ಪ್ರತಾಪ್ ಕುಮಾರ್ (37), ಸೋಹನ್ ದಾಸ್‌ರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 31.38 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿ 2016ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಪ್ರತಾಪ್, ಕೇವಲ ಒಂದು ವರ್ಷದಲ್ಲಿ ಚಂದ್ರ ಲೇಔಟ್, ಕೋರಮಂಗಲ, ಯಶವಂತಪುರ ಸೇರಿ ನಗರದ ವಿವಿಧ ಠಾಣೆ ವ್ಯಾಪ್ತಿಗಳಲ್ಲಿ 12 ಕಳ್ಳತನ ಮಾಡಿದ್ದ.