Advertisement

ಪೊಲೀಸರಿಂದ ಅರೆಸ್ಟ್‌ ಕೋವಿಡ್ 19 ಜಾಗೃತಿ

11:28 AM Mar 20, 2020 | Team Udayavani |

ಬೆಂಗಳೂರು: ನಗರದಲ್ಲಿ ಕೋವಿಡ್ 19 ವೈರಸ್‌ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸರು ಸಾರ್ವಜನಿಕ ಜಾಗೃತಿಗೆ ಮುಂದಾಗಿದ್ದು, ಸಿಬ್ಬಂದಿ/ಅಧಿಕಾರಿಗಳು ಆರೋಗ್ಯದ ಕಡೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ “ಅರೆಸ್ಟ್‌ ಕೋವಿಡ್ 19 ‘ ಅಭಿಯಾನ ನಡೆಸುತ್ತಿದ್ದಾರೆ.

Advertisement

ನಿತ್ಯ ನೂರಾರು ಮಂದಿ ಠಾಣೆಗೆ ಭೇಟಿ ನೀಡುತ್ತಾರೆ. ಕರ್ತವ್ಯದ ವೇಳೆ ಆಸ್ಪತ್ರೆ ಸೇರಿ ಎಲ್ಲೆಡೆ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಆ ಸಂದರ್ಭದಲ್ಲಿ ಸೋಂಕು ತಗಲುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಗ್ಯದ ಕಡೆ ಹೆಚ್ಚು ಎಚ್ಚರಿಕೆವಹಿಸಬೇಕು. ಅಲ್ಲದೆ, ಜನರಲ್ಲಿಯೂ ಕೋವಿಡ್ 19  ಭೀತಿ ಹೆಚ್ಚಾಗುತ್ತಿದ್ದು, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ನಗರ ಪೊಲೀಸರ ಫೇಸ್‌ಬುಕ್‌, ಟ್ವಿಟರ್‌, ಟಿಕ್‌-ಟಾಕ್‌, ಇನ್‌ಸ್ಟ್ರಾಗ್ರಾಂ ಖಾತೆ ಸೇರಿ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಜಾಗೃತಿ ಪೋಸ್ಟ್‌ಗಳನ್ನು ಹರಿಯಬಿಡಲಾಗುತ್ತಿದೆ. ಎಲ್ಲ ಪೊಲೀಸ್‌ ಠಾಣೆಗಳಲ್ಲಿ ಕರೊನಾ ಜಾಗೃತಿ ಹಾಗೂ ಅದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ವಹಿಸಬೇಕು.

ಪ್ರತಿ ಅರ್ಧ ಗಂಟೆಗೆ ಒಮ್ಮೆಯಾದರೂ ಸ್ಯಾನಿಟೈಸರ್‌ನಿಂದ ಕೈ ತೊಳೆಯಬೇಕು. ಅಲ್ಲದೆ, ಮಾಸ್ಕ್ ಧರಿಸುವುದು ಕಡ್ಡಾಯ. ಠಾಣೆಗೆ ಭೇಟಿ ನೀಡುವರಿಗೂ ಸ್ಯಾನಿಟೈಸರ್‌ ಮೂಲಕ ಕೈತೊಳೆಸುವುದು ಹಾಗೂ ಅವರಿಗೂ ಮಾಸ್ಕ್ ಧರಿಸುವಂತೆ ಸಲಹೆ ನೀಡಬೇಕು. (ಈ ನಿಟ್ಟಿನಲ್ಲಿ ಪ್ರತಿ ಠಾಣೆ ಆವರಣದಲ್ಲಿ ಕೈತೊಳೆಯಲು ನೀರು ಮತ್ತು ಹ್ಯಾಂಡ್‌ ಸ್ಯಾನಿಟೈಸರ್ಸ್‌ ಇಡವಾಗಿದೆ). ಸಾಧ್ಯವಾದ ಮಟ್ಟಿಗೆ ದೂರದಿಂದಲೇ ಮಾತಾಡಿಸಿ, ಈ ವೇಳೆ ಯಾವುದೇ ಕಾರಣಕ್ಕೂ ಅನ್ಯರ ಜತೆ ಕೈ ಕುಲಕದಂತೆ ಸೂಚಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next