Advertisement

ಸೀಲ್‌ಡೌನ್‌ ಮನೆ ದೋಚಿದ್ದವನ ಸೆರೆ

03:17 PM Sep 01, 2020 | Suhan S |

ಹಾಸನ: ಕೋವಿಡ್ ದಿಂದ ಸೀಲ್‌ಡೌನ್‌ ಆಗಿದ್ದ ಮನೆಯಲ್ಲಿ ನಗದು, ಚಿನ್ನಾಭರಣಗಳನ್ನು ಕಳವು ಮಾಡಿದ್ದ ಆರೋಪಿ ಮನೆ ಕೆಲಸದವನನ್ನು ಬಂಧಿಸಿರುವ ಅರಕಲಗೂಡು ತಾಲೂಕು ಕೊಣನೂರು ಪೊಲೀಸರು ಆತಬಿಂದ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 20 ಸಾವಿರ ರೂ. ನಗದು ವಶಪಡಿಸಿ ಕೊಂಡಿದ್ದಾರೆ.

Advertisement

ಅರಕಲಗೂಡು ತಾಲೂಕು, ದೊಡ್ಡ ಮಗ್ಗೆ ಹೋಬಳಿ ಹಾನಗಲ್‌ ಗ್ರಾಮದ ಕುಶಕುಮಾರ್‌ ಅವರ ಸಹೋದರ ಲವಕುಮಾರ್‌ ಕೋವಿಡ್ ದಿಂದ ಸಾವನ್ನಪ್ಪಿದ್ದರಿಂದ ಕುಶಕುಮಾರ್‌ ಮನೆಯನ್ನು 14 ದಿನ ಸೀಲ್‌ಡೌನ್‌ ಮಾಡಲಾಗಿತ್ತು. ಈ ಪರಿಣಾಮ ಕುಶಕುಮಾರ್‌ ಕುಟುಂಬದವರು ತಾತ್ಕಾಲಿಕವಾಗಿ ಅವರ ಹಿರಿಯ ಸಹೋದರ ನಾಗೇಂದ್ರ ಅವರ ಮನೆಯಲ್ಲಿ ವಾಸವಾಗಿದ್ದರು. ಆದರೆ ಆ.23ರ ರಾತ್ರಿ ಕುಶಕುಮಾರ್‌ ಅವರ ಮನೆಯ ಹಿಂಬಾಗಿಲ ಮುರಿದು 533 ಗ್ರಾಂ ಚಿನ್ನಾಭರಣ, ಒಂದು ಲಕ್ಷ ರೂ. ಬೆಳ್ಳಿ ಆಭರಣ, 60 ಸಾವಿರ ರೂ. ನಗದು ಕಳವು ಮಾಡಲಾಗಿತ್ತು.

ಈ ಪ್ರಕರಣದ ತನಿಖೆಗಾಗಿ ನೇಮಕವಾಗಿದ್ದ ಅರಕಲಗೂಡು ಠಾಣೆ ಇನ್‌ಸ್ಪೆಕ್ಟರ್‌ ದೀಪಕ್‌ ಮತ್ತು ಕೊಣನೂರು ಠಾಣೆ ಪಿಎಸ್‌ಐ ಸಾಗರ್‌ ನೇತೃತ್ವದ ವಿಶೇಷ ಪೊಲೀಸ್‌ ತಂಡ ಮಾಹಿತಿ ಸಂಗ್ರಹಿಸಿ ಹಾನಗಲ್‌ ಗ್ರಾಮದ ಎಚ್‌.ಆರ್‌.ವೆಂಕಟೇಶ್‌ (39) ಎಂಬಾತನನ್ನು ಬಂಧಿಸಿ ಆತ ಕುಶಕುಮಾರ್‌ ಅವರ ಮನೆಯಲ್ಲಿ ಕಳವು ಮಾಡಿದ್ದ ಆಭರಣಗಳ ಪೈಕಿ 410 ಗ್ರಾಂ ಚಿನ್ನಾಭರಣ, 3 ಕೆ.ಜಿ. ಬೆಳ್ಳಿ ಆಭರಣ ಹಾಗೂ 20 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಶ್ರೀನಿವಾಸಗೌಡ ಮಾಹಿತಿ ನೀಡಿದರು.

ಆರೋಪಿ ವೆಂಕಟೇಶ್‌ ಕುಶಕುಮಾರ್‌ ಅವರ ಮನೆಯಲ್ಲಿಯೇ ಕೆಲಸ ಮಾಡಿಕೊಂಡಿದ್ದ. ಮನೆ ಸೀಲ್‌ಡೌನ್‌ ಆಗಿದ್ದ ಸಮಯವನ್ನು ನೋಡಿ ಕೊಂಡು ಕಳ್ಳತನ ಮಾಡಿದ್ದ. ಈ ಪ್ರಕರಣದಲ್ಲಿ ಆರೋಪಿ ಬಂಧಿಸಲು ಶ್ರಮಿಸಿದ ಇನ್‌ಸ್ಪೆಕ್ಟರ್‌ ದೀಪಕ್‌, ಪಿಎಸ್‌ಐ ಸಾಗರ್‌, ಸಿಬ್ಬಂದಿ ರಾಜಶೆಟ್ಟಿ, ಪ್ರಕಾಶ, ಶಿವಕುಮಾರ್‌, ನಂದೀಶ, ಮಹೇಶ, ಶ್ರೀನಿವಾಸ, ಪುರುಷೋತ್ತಮ, ಸುರೇಶ್‌, ಸಣ್ಣೇಗೌಡ, ಎಸ್ಪಿ ಕಚೇರಿಯ ತಾಂತ್ರಿಕ ವಿಭಾಗದ ಪಿರ್‌ಸಾಬ್‌ ಅವರಿಗೆ ಬಹುಮಾನ ಘೋಷಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next