Advertisement

75 ಲಕ್ಷ ಮಂದಿಯಿಂದ ಸೂರ್ಯ ನಮಸ್ಕಾರ

11:48 PM Jan 14, 2022 | Team Udayavani |

ನವದೆಹಲಿ: ಕೇಂದ್ರ ಆಯುಷ್‌ ಸಚಿವಾಲಯವು ಶುಕ್ರ ವಾರ ಆಯೋಜಿಸಿದ್ದ “ಸೂರ್ಯನಮಸ್ಕಾರ’ ಕಾರ್ಯಕ್ರಮದಲ್ಲಿ ಜಗತ್ತಿನ ವಿವಿಧ ಭಾಗಗಳ 75 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

Advertisement

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ತಿಗೊಂಡ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆರ್ಟ್‌ ಆಫ್ ಲಿವಿಂಗ್‌ನ ಸಂಸ್ಥಾಪಕ ಶ್ರೀ ಶ್ರೀ ಶ್ರೀ ರವಿಶಂಕರ್‌ ಗುರೂಜಿ, ಯೋಗಗುರು ಬಾಬಾ ರಾಮ್‌ದೇವ್‌, ಸದ್ಗುರು ಜಗ್ಗಿ ವಾಸುದೇವ್‌ ಸೇರಿದಂತೆ ಪ್ರಮುಖರು ಆನ್‌ಲೈನ್‌ ಮೂಲಕ ಸೂರ್ಯನಮಸ್ಕಾರದಲ್ಲಿ ಭಾಗವಹಿಸಿದ್ದರು.

ಕೇಂದ್ರ ಆಯುಷ್‌ ಸಚಿವ ಸರ್ಬಾನಂದ ಸೊನೊವಾಲ್‌, ಆಯುಷ್‌ ಖಾತೆ ಸಹಾಯಕ ಸಚಿವ ಮುಂಜಾಪರ ಮಹೇಂದ್ರ ಭಾಯ್‌ ಕೂಡ ವರ್ಚುವಲ್‌ ಆಗಿಯೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸೊನೊವಾಲ್‌ “ಜನರ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿಯೇ ಸೂರ್ಯ ನಮಸ್ಕಾರ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ:ಗಗನಕ್ಕೇರಿದ ಬೆಲೆಗಳ ನಡುವೆ ಸಂಕ್ರಾಂತಿಗೆ ಅದ್ದೂರಿ  ಸ್ವಾಗತ 

Advertisement

ಇದರಿಂದಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ’ ಎಂದರು. 2021ನೇ ಸಾಲಿನ ಮಿಸ್‌ ವರ್ಲ್ಡ್ ಜಪಾನ್‌ ತಮಾಕಿ ಹೋಶಿ ಅವರು ಕೂಡ ಟೋಕಿಯೋದಿಂದ ವರ್ಚುವಲ್‌ ಆಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಭಾರತ ಸರ್ಕಾರದ ಈ ಕ್ರಮ ಜಗತ್ತಿಗೆ ಅನುಕೂಲಕರವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚೆನ್ನೈನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಕೇಂದ್ರದ ಅರೆಸೇನಾ ಪಡೆಗೆ ಹೊಸತಾಗಿ ನಿಯೋಜನೆಗೊಂಡವರು ಕೂಡ ಸೂರ್ಯ ನಮಸ್ಕಾರ ಮಾಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next