ಮೈಸೂರು: ನಗರದ ಕೆ.ಆರ್.ಕ್ಷೇತ್ರದ ಬಿಜೆಪಿಯಿಂದ ಸೇವಾ ಸಿಂಧು, ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಅಭಿಯಾನಕ್ಕೆ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಂಸ್ಥಾಪಕ ಡಾ. ಬಾಲಸುಬ್ರಹ್ಮಣ್ಯ ಚಾಲನೆ ನೀಡಿದರು.
ನಗರದ ಅಗ್ರಹಾರದ ವೃತ್ತದಲ್ಲಿ ನಡೆದ ಆ್ಯಪ್ ಡೌನ್‌ಲೋಡ್ ಅಭಿ ಯಾನ ಹಾಗೂ ಪಿಎಂ, ಸಿಎಂ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಕಡಿಮೆ ಬೆಲೆಗೆ ಸಿಗುವ ವಿದೇಶದ ಉತ್ಪನ್ನ ಖರೀದಿಸುವುದು ರಾಷ್ಟ್ರೀಯತೆಯಲ್ಲ.
ಬದ ಲಿಗೆ ದೇಶದ ವಸ್ತುಗಳನ್ನು ಖರೀದಿಸಿ ರಾಷ್ಟ್ರೀಯತೆಯನ್ನು ಮೆರೆಯಬೇಕು. ಆ್ಯಪ್‌ನ ಸದ್ಭಳಕೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿರುವ ಶಾಸಕ ರಾಮ ದಾಸ್ ಕಾರ್ಯ ಶ್ಲಾಘನೀಯ ಎಂದರು. ಶಾಸಕ ಎಸ್.ಎ.ರಾಮದಾಸ್ ಮಾತ ನಾಡಿ,
ಮುಂದಿನ ದಿನಗಳಲ್ಲಿ ಕೊರೊನಾ ದಿಗೆ ಹೋರಾಟ ಮತ್ತಷ್ಟು ಹೆಚ್ಚಲಿದೆ. ಸಾರ್ವಜನಿಕರ ಮತ್ತಷ್ಟು ಜವಾ ಬ್ದಾರಿ ವಹಿಸಬೇಕು. ಹೀಗಾಗಿ ಪ್ರತಿಯೊ ಬ್ಬರು ಆ್ಯಪ್ ಡೌನ್‌ಲೋಡ್ ಮಾಡಿ ಕೊಂಡು ಜಾಗ್ರತ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾಜೀವ್, ಸಿಐಐ ಮಾಜಿ ಅಧ್ಯಕ್ಷ ಭಾಸ್ಕರ್ ಕಳಲೆ, ಸೇಫ್ ವೀಲ್ಸ್ ಅಧ್ಯಕ್ಷ ಶ್ರೀಹರಿ, ಟ್ರಾವೆಲ್ಸ್ ಅಸೋಸಿ ಯೇಷನ್ ಬಿ.ಎಸ್.ಪ್ರಶಾಂತ್, ವಾಸು ದೇವಾ ಭಟ್, ನಗರಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಸೌಮ್ಯ ಉಮೇಶ್, ಬಿಜೆಪಿ ಕೆ.ಆರ್.ಕ್ಷೇತ್ರ ಘಟಕ ಅಧ್ಯಕ್ಷ ವೆಡಿವೇಲು ಇದ್ದರು.