Advertisement

ಕಾಂಗ್ರೆಸ್‌ನಿಂದ ಆರೋಗ್ಯ ಹಸ್ತ ಕಾರ್ಯಕ್ರಮ

11:40 AM Aug 07, 2020 | Suhan S |

ಕೊರಟಗೆರೆ: ಕರುನಾಡಿನ 6025 ಗ್ರಾಪಂಗಳಿಗೆ ಕಾಂಗ್ರೆಸ್‌ ನಿಂದ 12050 ಜನ ಡಿಜಿಟಲ್‌ ವಾರಿಯರ್ಸ್‌ ನೇಮಕ ಮಾಡಿ ಗ್ರಾಮೀಣ ಪ್ರದೇಶದ ಜನತೆಯ ಆರೋಗ್ಯ ತಪಾಸಣೆಗಾಗಿ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಡಾ.ಜಿ. ಪರಮೇಶ್ವರ್‌ ಜನುಮ ದಿನದಂದೇ ಕೊರಟಗೆರೆ ಕ್ಷೇತ್ರ ದಿಂದ ಚಾಲನೆ ನೀಡಲಾಗಿದೆ ಎಂದು ಕರ್ನಾಟಕ ಕಾಂಗ್ರೆಸ್‌ ಪಕ್ಷದ ವಕ್ತಾರ ಮುರಳೀಧರ ಹಾಲಪ್ಪ ತಿಳಿಸಿದರು.

Advertisement

ಪಟ್ಟಣದ ಹೊರವಲಯದ ಭೈಲಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಡಾ.ಜಿ.ಪರಮೇಶ್ವರ್‌ರ 69ನೇ ಹುಟ್ಟು ಹಬ್ಬದ ಪ್ರಯುಕ್ತ ಕೊರಟಗೆರೆ ಡಾ.ಜಿ. ಪರಮೇಶ್ವರ್‌ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಲಾಗಿದ್ದ ಆಟೋಚಾಲಕ ಮತ್ತು ಪೌರಕಾರ್ಮಿಕರಿಗೆ ಆಹಾರ ಕಿಟ್‌ ವಿತರಣಾ ಕಾರಕ್ರಮದಲ್ಲಿ ಮಾತನಾಡಿದರು. ಕೊರಟಗೆರೆ ಕ್ಷೇತ್ರದ ಪ್ರತಿ ಗ್ರಾಪಂಗಳಿಗೆ ತಲಾ ಇಬ್ಬರು ಸ್ವಯಂ ಸೇವಕರ ತಂಡದಿಂದ ಪ್ರತಿಮನೆ ಆರೋಗ್ಯ ತಪಾಸಣೆ ಆ.15 ರಿಂದ ಪ್ರಾರಂಭವಾಗಲಿದೆ ಎಂದರು.ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಡಿ.ಟಿ. ವೆಂಕಟೇಶ್‌, ಕೋವಿಡ್ ದಿಂದ ವಿಶ್ವ ಮತ್ತು ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿದಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ನಿರುದ್ಯೋಗ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆ ಬಡಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಪಟ್ಟಣದ ಆಟೋ ಚಾಲಕರು, ಪಪಂ ಪೌರ ಕಾರ್ಮಿಕರು ಮತ್ತು ರೆಡ್‌ಕ್ರಾಸ್‌ ಸ್ವಯಂ ಸೇವಕರು ಸೇರಿದಂತೆ 70 ಜನರಿಗೆ ಆಹಾರ ಕಿಟ್‌ ವಿತರಿಸಲಾಯಿತು. ಪಪಂ ಸದಸ್ಯರಾದ ಓಬಳರಾಜು, ನರಸಿಂಹಪ್ಪ, ಪಪಂ ಮಾಜಿ ಸದಸ್ಯ ಲೋಕೇಶ್‌, ತುಮ ಕೂರು ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ಸಂಚಾಲಕ ವೆಂಕಟೇಶ್‌ಬಾಬು, ಮಧುಗಿರಿ ಯುಕ್ತ ಫೌಂಡೇಷನ್‌ ಅಧ್ಯಕ್ಷ ದಿಲೀಪ್‌, ಕಾಂಗ್ರೆಸ್‌ ಮುಖಂಡರಾದ ಏರ್‌ಟೆಲ್‌ ಗೋಪಿ, ಕೆಎಲ್‌ಎಂ ಮಂಜು, ರಿಜಾÌನ್‌, ಲಕ್ಷ್ಮೀಕಾಂತ, ಕೃಷ್ಣ, ಪವನ್‌, ನಟರಾಜು, ರಾಜೇಶ್‌, ದಿಪೀಕಾ, ನವೀನ್‌, ಮುರಳಿ, ನಾಗೇಶ್‌ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next