Advertisement
ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ ಆಯುಕ್ತರು ಇತ್ತೀಚೆಗೆ ಸುತ್ತೋಲೆ ಹೊರಡಿಸಿದ್ದಾರೆ. ಕರ್ಫ್ಯೂ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ನಗರಗಳಿಂದ ವಲಸೆ ಬಂದವರು ನರೇಗಾ ಯೋಜನೆಯಡಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಪ್ರಸ್ತುತ ಬೇಸಗೆಯಾಗಿದ್ದು, ಕೂಲಿಕಾರರು ಬಿಸಿಲಿನ ತಾಪದಿಂದ ಹೃದಯಾಘಾತಕ್ಕೆ ಒಳಗಾಗಿರುವುದೂ ವರದಿಯಾಗಿದೆ. ಬಿಸಿಲಿನ ತಾಪ ಮತ್ತು ಕೊರೊನಾದಿಂದ ಸುರಕ್ಷೆಗಾಗಿ ಮೂಲಸೌಲಭ್ಯಗಳನ್ನು ಕೆಲಸ ಮಾಡುವ ಸ್ಥಳದಲ್ಲಿ ಕಲ್ಪಿಸಬೇಕು ಎಂದು ಸೂಚಿಸಿದ್ದಾರೆ.
– ಕೂಲಿಕಾರರ ತ್ವರಿತ ಆರೋಗ್ಯ ತಪಾಸಣೆ .
– ಪಲ್ಸ್ ಆಕ್ಸಿಮೀಟರ್, ಡಿಜಿಟಲ್ ಇನ್‌ಫ್ರಾರೆಡ್ ಥರ್ಮಾಮೀಟರ್ ಇರಬೇಕು.
– ಸೋಂಕಿನ ಲಕ್ಷಣಗಳು ಕಂಡರೆ ಸ್ಥಳೀಯ ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿಗಳಿಗೆ ತಿಳಿಸಬೇಕು.
– ಕಾರ್ಮಿ ಕರು ಗುಂಪಾಗಿ ಕೆಲಸ ನಿರ್ವಹಿಸಲು ಅವಕಾಶ ನೀಡಬಾರದು.
– ಲಕ್ಷಣ ಇರುವವರನ್ನು ಪರೀಕ್ಷೆಗೊಳಪಡಿಸಿ, ಐಸೊಲೇಶನ್‌ನಲ್ಲಿ ಇರಿಸಬೇಕು.
– ಕಾಮಗಾರಿ ಸ್ಥಳದಲ್ಲಿ ನೆರಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
– ಪ್ರತಿಯೊಬ್ಬ ಕಾಯಕ ಬಂಧುವಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಒದಗಿಸಬೇಕು.
– ಒಆರ್‌ಎಸ್, ಆಸ್ಪಿರಿನ್ ಮಾತ್ರೆಯನ್ನು ಪ್ರಥಮ ಚಿಕಿತ್ಸೆ ಪೆಟ್ಟಿಗೆಯಲ್ಲಿ ಇಟ್ಟಿರಬೇಕು.
– ಕೂಲಿ ಕಾರ್ಮಿಕರ ಚಿಕಿತ್ಸಾ ವೆಚ್ಚವನ್ನು ನರೇಗಾದ ಆಡಳಿತಾತ್ಮಕ ವೆಚ್ಚದಿಂದ ಭರಿಸಬೇಕು.