Advertisement

ಒಂದು ನಿಮಿಷದಲ್ಲಿ 93 ವಿಮಾನಗಳನ್ನು ಗುರುತಿಸುತ್ತಾಳೆ ಈ ಬಾಲಕಿ!

02:43 AM Jul 12, 2021 | Team Udayavani |

ವಿವಿಧ ವಿಮಾನಗಳ ಬಾಲವನ್ನು ನೋಡಿ (ಹಿಂಬದಿಯ ಪಾರ್ಶ್ವ) ಆ ವಿಮಾನ ಯಾವ ವೈಮಾನಿಕ ಸೇವಾ ಸಂಸ್ಥೆಗೆ ಸೇರಿದ್ದು ಎಂದು ಕರಾರುವಾಕ್ಕಾಗಿ ಹೇಳುವ 6 ವರ್ಷದ ಬಾಲಕಿಯೊಬ್ಬಳ ವೀಡಿಯೋವೊಂದು ವೈರಲ್‌ ಆಗಿದೆ.

Advertisement

ಈಕೆಯ ಹೆಸರು ಅರ್ನಾ ಗುಪ್ತಾ. ಹರ್ಯಾಣದ ಪಂಚಕುಲದ ನಿವಾಸಿ. ಈಕೆಯ ಚಾತುರ್ಯವನ್ನು ಸಾಬೀತುಪಡಿಸುವ ವೀಡಿಯೋವನ್ನು ಜು. 1ರಂದು “ಇಂಟರ್‌ನ್ಯಾಷನಲ್‌ ಬುಕ್‌ ಆಫ್ ರೆಕಾರ್ಡ್ಸ್’ ಎಂಬ ಯುಟ್ಯೂಬ್‌ ಚಾನೆಲ್‌ನಲ್ಲಿ ಪ್ರಕಟಿಸಲಾಗಿದ್ದು, ಆಕೆ ಕೇವಲ ಒಂದು ನಿಮಿಷದ ಅವಧಿಯಲ್ಲಿ ಸುಮಾರು 93 ವಿಮಾನ ಕಂಪೆನಿಗಳನ್ನು ಗುರುತಿಸುತ್ತಾಳೆ.

ತನ್ನ ಈ ಅಸಾಧಾರಣ ಪ್ರತಿಭೆಯ ಮೂಲಕ ಈಕೆ ಅಂತಾರಾಷ್ಟ್ರೀಯ ಬುಕ್‌ ಆಫ್ ರೆಕಾರ್ಡ್ ಗೆ ಸೇರ್ಪಡೆಗೊಂಡಿದ್ದಾಳೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next