ಶ್ರೀನಗರ: ಸೇನಾ ವಾಹನವು ಕಡಿದಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಮೂರು ಯೋಧರು ಹುತಾತ್ಮರಾದ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ.
ಉತ್ತರ ಕಾಶ್ಮೀರದ ಮಚ್ಚಲ್ ಸೆಕ್ಟರ್ ನಲ್ಲಿ ದೈನಂದಿನ ಕಾರ್ಯಾಚರಣೆಯ ವೇಳೆ ಈ ಘಟನೆ ನಡೆದಿದೆ. ಓರ್ವ ಜೂನಿಯರ್ ಕಮಿಷನ್ಡ್ ಅಧಿಕಾರಿ ಮತ್ತು ಇಬ್ಬರ ಇತರ ರ್ಯಾಂಕ್ ನ ಯೋಧರು ನಿಧನರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಹಿಮಭರಿತ ರಸ್ತೆಯಲ್ಲಿ ವಾಹನ ಸ್ಕಿಡ್ ಆಗಿ ಕಂದಕಕ್ಕೆ ಉರುಳಿದೆ ಎನ್ನಲಾಗಿದೆ. ಮೂವರು ಸೇನಾ ಸಿಬ್ಬಂದಿಯ ಮೃತದೇಹಗಳನ್ನು ಪಡೆಯಲಾಗಿದೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜನವರಿ 13 ರವರೆಗೆ ಉತ್ತರ ಕಾಶ್ಮೀರದ ಪರ್ವತ ಪ್ರದೇಶಗಳಲ್ಲಿ ಮಧ್ಯಮದಿಂದ ಭಾರೀ ಹಿಮಪಾತವನ್ನು ಹವಾಮಾನ ಇಲಾಖೆ ಈಗಾಗಲೇ ಊಹಿಸಿತ್ತು. ಜಮ್ಮು ಕಾಶ್ಮೀರ ಮತ್ತು ಲಡಾಖ್ ನ ಇತರ ಪ್ರದೇಶಗಳಲ್ಲಿ ಮಳೆ ಮತ್ತು ಲಘು ಹಿಮಪಾತ ಮತ್ತು ಜನರು ಜಾಗರೂಕರಾಗಿರಲು ಸೂಚಿಸಲಾಗಿದೆ.