Advertisement
ನಗರದ ಖಾಸಗಿ ಸಭಾಭವನವೊಂದರಲ್ಲಿ ಹಮ್ಮಿಕೊಂಡ ಮಾಹಿತಿ ಮತ್ತು ತರಬೇತಿ ಶಿಬಿರ ಸೇನಾ ವತಿಯಿಂದಲೇ ನಡೆಸಲ್ಪಡುತ್ತಿದೆ ಎಂದು ಭಾವಿಸಿ 700ಕ್ಕೂ ಅಧಿಕ ಮಂದಿ ರವಿವಾರ ಬೆಳಗ್ಗೆ ಆಗಮಿಸಿದ್ದರು. ಆದರೆ ಸಂಘಟಕರು ಮಿಲಿಟರಿಯವರು ಅಲ್ಲ ಅನ್ನುವ ಮಾಹಿತಿ ದೊರೆತು, ಪರಿಚಿತರಿಗೆ ವಿಷಯ ನೀಡಿದರು. ಜತೆಗೆ ಶುಲ್ಕದಬಗ್ಗೆಯು ಸಂಘಟಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಿರತ 200 ಕ್ಕೂ ಅಧಿಕ ಮಂದಿಯನ್ನು ಹಾಗೂ ಉಳಿದವರು ಸ್ಥಳದಿಂದ ಮರಳಿ ಕಳುಹಿಸಿದರು. ಸ್ಥಳೀಯಾಡಳಿತದ ಅನುಮತಿ ಇಲ್ಲದೆ, ಪೊಲೀಸ್ ಇಲಾಖೆಗೆ ಮಾಹಿತಿ ನೀಡದೆ ಶಿಬಿರ ಆಯೋಜಿಸಿದ ಸಂಘಟಕರನ್ನು ಪೊಲೀಸರು ತರಾಟೆಗೆ ತೆಗೆದುಕೊಂಡರು. ಬಳಿಕ ಠಾಣೆಗೆ ಕರೆಯಿಸಿ ಮುಚ್ಚಳಿಕೆ ಪಡೆದು, ಅನುಮತಿ ಇಲ್ಲದೆ ಶಿಬಿರ ಹಮ್ಮಿಕೊಳ್ಳಬಾರದು ಎಂದು ಸೂಚನೆ ನೀಡಿರುವುದಾಗಿ ಮಾಹಿತಿ ದೊರೆತಿದೆ.