Advertisement

ಭೂಸೇನೆ ಸುಭೇದಾರ್‌ ರವಿಚಂದ್ರ ಕೆ. ಮಾರ್ಕಾಜೆ ಇಂದು ಸೇವಾ ನಿವೃತ್ತಿ

08:00 AM Jul 31, 2017 | Team Udayavani |

ಮಾರ್ಕಾಜೆ : ಭಾರತೀಯ ಭೂಸೇನೆಯಲ್ಲಿ  ಕಳೆದ 28 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾçಮಣ ಗ್ರಾಮದ ಮಾರ್ಕಾಜೆ ನಿವಾಸಿ ರವಿಚಂದ್ರ ಕೆ. ಅವರು ಜು. 31ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ.

Advertisement

1989ರ ಜುಲೈ ತಿಂಗಳಿನಲ್ಲಿ  ಭಾರತೀಯ ಭೂಸೇನೆಗೆ ಸೇರ್ಪಡೆಗೊಂಡ ಅವರು ಆರಂಭದಲ್ಲಿ  ಭೂಸೇನೆಯ 10ನೇ ಮದ್ರಾಸ್‌ ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಅರುಣಾಚಲ ಪ್ರದೇಶ, ಜೈಪುರ, ಪಂಜಾಬ್‌, ಜಮ್ಮು ಕಾಶ್ಮಿರ, ನವದೆಹಲಿ, ಹೆದರಾಬಾದ್‌ ಸೇರಿದಂತೆ ದೇಶದ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದರು. ಕಾರ್ಗಿಲ್‌ ಯುದ್ಧದಲ್ಲಿ ಭಾಗವಹಿಸಿ ದೇಶದ ರಕ್ಷಣೆಗೆ ಸಲ್ಲಿಸಿದ ಸೇವೆ ಅವರ ಸೇವಾವಧಿಯಲ್ಲಿ ಅತ್ಯಂತ ಮಹತ್ವದ ಘಟನೆಯಾಗಿದೆ. ಭೂ ಸೇನೆಯಲ್ಲಿ  ಮಾತ್ರವಲ್ಲದೇ ಸುಮಾರು 4 ವರ್ಷ ಸ್ಪೆಷಲ್‌ ಆ್ಯಕ್ಷನ್‌ ಗ್ರೂಪ್‌ (ಕ್ಷಿಪ್ರ ಕಾರ್ಯಪಡೆ)ನ ಬ್ಲಾÂಕ್‌ ಕ್ಯಾಟ್‌ ಕಾಮಾಂಡೋದಲ್ಲಿ ಅಸಿಸ್ಟಂಟ್‌ ಕಮಾಂಡೋ ಆಗಿ ತುಂಬಾ ಕ್ಲಿಷ್ಟಕರ ಕರ್ತವ್ಯವನ್ನೂ  ನಿರ್ವಹಿಸಿದ ಹೆಗ್ಗಳಿಕೆ ಅವರದು. 

ಭೂಸೇನೆಯಲ್ಲಿ  ಸುಭೇದಾರ್‌ ಆಗಿ ಪದೋನ್ನತಿ ಪಡೆದು ಅರುಣಾಚಲಪ್ರದೇಶದಿಂದ ವರ್ಗಾವಣೆಗೊಂಡು ಪ್ರಸ್ತುತ ಊಟಿಯಲ್ಲಿ ಕಥವ್ಯ ನಿರ್ವಹಿಸುತ್ತಿರುವ ರವಿಚಂದ್ರ ಅವರು ಬೆಳಂದೂರು ಸರಕಾರಿ ಶಾಲೆಯಲ್ಲಿ  ಪ್ರಾಥಮಿಕ ಶಿಕ್ಷಣ, ಕಾಣಿಯೂರು ಪ.ಪೂ. ಕಾಲೇಜಿನಲ್ಲಿ  ಪ್ರೌಢ ಹಾಗೂ ಪ.ಪೂ. ಶಿಕ್ಷಣವನ್ನು ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next