Advertisement

ಮತ್ತೆ ಉಗ್ರರ ಅಟ್ಟಹಾಸ : ಕಾಶ್ಮೀರದಲ್ಲಿ ಯೋಧನ ಅಪಹರಣ 

05:37 PM Mar 08, 2019 | |

ಬದ್‌ಗಾಮ್‌: ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮುಂದುವರಿಸಿದ್ದು, ಚಡೂರಾ ಪ್ರದೇಶದಲ್ಲಿ  ಶುಕ್ರವಾರ ರಾತ್ರಿ ಭಾರತೀಯ ಸೇನಾ ಪಡೆಯ ಯೋಧನೊಬ್ಬನನ್ನು ಅಪಹರಣಗೈದಿದ್ದಾರೆ. 

Advertisement

ಯೋಧ ಮೊಹಮದ್‌ ಯಾಸೀನ್‌ ಎನ್ನುವವರನ್ನು ಖಾಜಿಪೋರಾ ಪ್ರದೇಶದ ನಿವಾಸದಿಂದ ಶಸ್ತ್ರಧಾರಿ ಉಗ್ರರು ಅಪಹರಿಸಿದ್ದಾರೆ ಎಂದು ವರದಿಯಾಗಿದೆ.

ಯೋಧನ ನಿವಾಸದ ಬಳಿ ಪೊಲೀಸರು ಮತ್ತು ಸೇನಾ ಪಡೆಗಳು ದೌಡಾಯಿಸಿದ್ದು , ಅರಣ್ಯವೊಂದಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದ್ದು ಸೇನಾ ಪಡೆಗಳು ಕಾರ್ಯಾಚರಣೆಗಿಳಿದಿವೆ. 

ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದ್ದು, ಎಲ್ಲೆಡೆ ಹೈ ಅಲರ್ಟ್‌ ಘೋಷಿಸಿ ತಪಾಸಣೆ ನಡೆಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next