ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗಡಿನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿದಾಗ ನಡೆಸಿದ ಭಾರತೀಯ ಸೇನಾಪಡೆಯ ಪ್ರತೀಕಾರದ ದಾಳಿ ಹಾಗೂ ವ್ಯೂಹಾತ್ಮಕ ಕಾರ್ಯಾಚರಣೆಯಲ್ಲಿ 138 ಪಾಕಿಸ್ತಾನಿ ಸೈನಿಕರು ಹತ್ಯೆಯಾಗಿರುವುದಾಗಿ ಗುಪ್ತಚರ ಮೂಲಗಳು ತಿಳಿಸಿರುವುದಾಗಿ ಮಾಧ್ಯಮದ ವರದಿ ಹೇಳಿದೆ.
2017ನೇ ಸಾಲಿನಲ್ಲಿ ಭಾರತೀಯ ಸೇನಾಪಡೆಯ ಪ್ರತೀಕಾರಕ್ಕೆ 138 ಪಾಕ್ ಸೈನಿಕರು ಜೀವ ಕಳೆದುಕೊಂಡಿದ್ದರೆ, 28 ಮಂದಿ ಭಾರತೀಯ ಯೋಧರು ಹುತಾತ್ಮರಾಗಿರುವುದಾಗಿ ತಿಳಿಸಿದೆ.
ಮೂಲಗಳ ಪ್ರಕಾರ, ಪಾಕಿಸ್ತಾನ ಸೇನಾಪಡೆಗೆ ತಮ್ಮ ಸೈನಿಕರ ಸಾವಿನ ನಿಖರ ಅಂಕಿಸಂಖ್ಯೆಯ ಬಗ್ಗೆ ಮಾಹಿತಿ ಇಲ್ಲ, ಇಂತಹ ಪ್ರಕರಣಗಳಲ್ಲಿ ನಾಗರಿಕರ ಸಾವಿನ ಲೆಕ್ಕ ತೋರಿಸುತ್ತದೆ ಎಂದು ಹೇಳಿದೆ.
ಕಳೆದ ಒಂದು ವರ್ಷದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆ ಹಾಗೂ ಕದನ ವಿರಾಮ ಉಲ್ಲಂಘನೆ ಪ್ರಕರಣಗಳ್ಲಲಿ ಭಾರತೀಯ ಸೇನಾ ಪಡೆ ತಕ್ಕ ಪ್ರತೀಕಾರದ ದಾಳಿ ನಡೆಸಿದೆ.
2017ರಲ್ಲಿ ಪಾಕಿಸ್ತಾನದ 138 ಸೈನಿಕರು ಹಾಗೂ 155 ಸೈನಿಕೇತರರು ವ್ಯೂಹಾತ್ಮಕ ಕಾರ್ಯಾಚರಣೆಯಲ್ಲಿ ಪ್ರಾಣ ತ್ಯಜಿಸಿರುವುದಾಗಿ ಗುಪ್ತಚರ ಮೂಲಗಳು ಪಿಟಿಐಗೆ ತಿಳಿಸಿದೆ.