Advertisement

ಮೇಲ್ಸೇತುವೆಗೆ ಸೇನೆ ಸಾಥ್‌, ಸಚಿವೆ ಸೀತಾರಾಮನ್‌ ನಿರ್ಧಾರಕ್ಕೆ ಆಕ್ಷೇಪ

06:25 AM Nov 01, 2017 | Harsha Rao |

ಮುಂಬೈ: ಕಳೆದ ತಿಂಗಳು ಕಾಲು¤ಳಿತದಲ್ಲಿ 23 ಮಂದಿಯ ಬಲಿತೆಗೆದುಕೊಂಡ ಮುಂಬೈನ ಎಲ್ಫಿನ್‌ಸ್ಟೋನ್‌ ರೋಡ್‌ ಮೇಲ್ಸೇತುವೆಯನ್ನು ಹೊಸದಾಗಿ ನಿರ್ಮಿಸುವ ಕಾರ್ಯಕ್ಕೆ ಭಾರತೀಯ ಸೇನೆ ಕೈಜೋಡಿಸಲಿದ್ದು, ಇದೀಗ ವಿವಾದವಾಗಿ ಮಾರ್ಪಟ್ಟಿದೆ.

Advertisement

ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸೇನೆಯ ನೆರವು ನೀಡುವ ಕುರಿತು ಭರವಸೆ ನೀಡಿದ್ದಾರೆ. ಇದಾದ ಬಳಿಕ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಯೋಧರು ಸಾಥ್‌ ನೀಡಲಿದ್ದಾರೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫ‌ಡ್ನವೀಸ್‌ ಘೋಷಿಸಿದ್ದಾರೆ. ಜತೆಗೆ, ಮುಂಬೈನ ಇನ್ನೆ ರಡು ರೈಲು ನಿಲ್ದಾಣಗಳ ಮೇಲ್ಸೇತುವೆಯ ನಿರ್ಮಾಣದಲ್ಲೂ ಯೋಧರು ಕೈಜೋಡಿಸಲಿ ದ್ದಾರೆ ಎಂದೂ ತಿಳಿಸಿದ್ದಾರೆ. ಸೇನೆಯ ನೆರವು ಕೋರಿ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಮಾಡಿದ್ದ ಮನವಿಗೆ ಸ್ಪಂದಿಸಿದ್ದ ಸಚಿವೆ ನಿರ್ಮಲಾ, “ಇದೇ ಮೊದಲ ಬಾರಿಗೆ ಸೇನೆ ಯನ್ನು ನಾಗರಿಕ ಕಾರ್ಯಕ್ಕೆ ಬಳಸುತ್ತಿದ್ದೇವೆ. ಮುಂದೆಂದೂ ಇಂತಹ ಅವಘಡ ಸಂಭವಿಸ ದಿರಲಿ ಎಂಬ ಕಾರಣಕ್ಕಾಗಿ ಈ ಕ್ರಮಕ್ಕೆ ಮುಂದಾಗಿದ್ದೇವೆ’ ಎಂದಿದ್ದಾರೆ.

ಒಳ್ಳೆಯ ಬೆಳವಣಿಗೆಯಲ್ಲ: ಆದರೆ, ಈ ನಿರ್ಧಾರವು ವಿವಾದಕ್ಕೆ ಕಾರಣವಾಗಿದ್ದು, ಈ ಕುರಿತು ಪ್ರತಿಪಕ್ಷಗಳು, ನಿವೃತ್ತ ಯೋಧರು ಹಾಗೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ ದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಪಂಜಾಬ್‌ ಸಿಎಂ ಅಮರೀಂದರ್‌ ಸಿಂಗ್‌, “ಸೇನೆಯ ಕೆಲಸ ಯುದ್ಧದ ತರಬೇತಿ ಮತ್ತು ಗಡಿಗಳನ್ನು ರಕ್ಷಿಸುವುದೇ ಹೊರತು, ರಸ್ತೆ ಸ್ವತ್ಛ ಗೊಳಿಸುವುದು, ಸೇತುವೆ ನಿರ್ಮಿಸುವುದಲ್ಲ. ದಯವಿಟ್ಟು ಸೇನಾ ಸಂಪನ್ಮೂಲವನ್ನು ನಾಗರಿಕ ಕೆಲಸಕ್ಕೆ ಬಳಸಬೇಡಿ. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next