Advertisement

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಗ್ರೆನೇಡ್‌ ಒಯ್ಯುತ್ತಿದ್ದ ಸೈನಿಕ ಸೆರೆ

12:18 PM Apr 03, 2017 | Team Udayavani |

ಶ್ರೀನಗರ : ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಂದು ಜಮ್ಮು ಕಾಶ್ಮೀರ ಪೊಲೀಸರು ಸೈನಿಕನೊಬ್ಬನನ್ನು ಬಂಧಿಸಿದ್ದಾರೆ. ಎಕ್ಸ್‌ರೇ ತಪಾಸಣೆ ವೇಲೆ ಆತನ ಲಗ್ಗೇಜ್‌ ಒಳಗೆ ಎರಡು ಗ್ರೆನೇಡ್‌ಗಳು ಪತ್ತೆಯಾಗಿರುವುದೇ ಆತನ ಬಂಧನಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಸೈನಿಕನನ್ನು ಭೋಪಾಲ್‌ ಮುಖೀಯಾ ಎಂದು ಗುರುತಿಸಲಾಗಿದೆ. ಜಮ್ಮು ಕಾಶ್ಮೀರ ರೈಫ‌ಲ್ಸ್‌ ಪಡೆಗೆ ಸೇರಿರುವ ಈತನನ್ನು ಉರಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆತ ವಿಮಾನ ಮೂಲಕ ದಿಲ್ಲಿಗೆ ಹೊರಟಿದ್ದ ವೇಳೆ ನಡೆದ ತಪಾಸಣೆಯಲ್ಲಿ ಆತನ ಬ್ಯಾಗ್‌ ಒಳಗೆ ಎರಡು ಗ್ರೆನೇಡ್‌ಗಳು ಪತ್ತೆಯಾದವು. ಬಂಧಿಸಲ್ಪಟ್ಟಿಟರುವ ಆತನನ್ನು ಈಗ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಶ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

17 ಜಮ್ಮು ಕಾಶ್ಮೀರ ರೈಫ‌ಲ್ಸ್‌ಗೆ ಸೇರಿರುವ ಈ ಸೈನಿಕನು ಮೂಲತಃ ಡಾರ್ಜಿಲಿಂಗ್‌ನವನು. ಹೊಳೆಯಲ್ಲಿ  ಸ್ಫೋಟ ನಡೆಸಿ ಮೀನು ಹಿಡಿಯುವುದಕ್ಕಾಗಿ ತಾನು ಗ್ರೆನೇಡ್‌ಗಳನ್ನು ಒಯ್ಯುತ್ತಿದ್ದೆ ಎಂದಾತ ಹೇಳಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next