ನವದೆಹಲಿ:ಪ್ಯಾಂಗಾಂಗ್ ತ್ಸೋ ಘರ್ಷಣೆ ಉಂಟಾಗಿ 3 ವರ್ಷಗಳ ಬಳಿಕ ಈಗ ಭಾರತೀಯ ಸೇನೆಗೆ ಮತ್ತೊಂದು ಸವಾಲು ಎದುರಾಗಿದೆ.
ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ)ಯ ಪೂರ್ವ ಮತ್ತು ಪಶ್ಚಿಮ ವಲಯದಲ್ಲಿ ಚೀನ ಸೇನೆಯ ಮೂರು ಹಂತದ ನಿಯೋಜನೆಯನ್ನು ಎದುರಿಸಲು ಭಾರತೀಯ ಯೋಧರು ಸಜ್ಜಾಗಿದ್ದಾರೆ.
ಎಲ್‌ಎಸಿಯಲ್ಲಿ ಗುಪ್ತವಾಗಿ ತನ್ನ ಅಜೆಂಡಾವನ್ನು ಜಾರಿಗೊಳಿಸುತ್ತಿರುವ ಚೀನ ಪಡೆ, ಮೂರು ಹಂತಗಳಲ್ಲಿ ಸೇನಾ ನಿಯೋಜನೆ ಮಾಡಿರುವುದು ಕಣ್ಗಾವಲು ಮತ್ತು ಉಪಗ್ರಹ ಚಿತ್ರಗಳಿಂದ ಸ್ಪಷ್ಟವಾಗಿದೆ. ಮೊದಲ ಪದರದಲ್ಲಿ ಡ್ರ್ಯಾಗನ್ ರಾಷ್ಟ್ರದ ಗಡಿ ಭದ್ರತಾ ಪಡೆ, ಎರಡನೇ ಹಂತದಲ್ಲಿ ಟಿಬೆಟ್ ಮಿಲಿಟರಿ ಪಡೆ ಮತ್ತು ಮೂರನೇ ಹಂತದಲ್ಲಿ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ.
ಈ ಮೀಸಲು ಪಡೆಯ ಸೈನಿಕರು(ಸಿಎಬಿ) ಆಯಾ ಭೂಪ್ರದೇಶಕ್ಕೆ ಅನುಗುಣವಾದ ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ. ಪ್ರತಿಯೊಂದು ಸಿಎಬಿಯಲ್ಲೂ ತಲಾ 4,500 ಸೈನಿಕರಿರುತ್ತಾರೆ.
2020ರ ಏಪ್ರಿಲ್‌ನಲ್ಲೇ ವಿವಾದಿತ ಪ್ರದೇಶದಿಂದ ಉಭಯ ಸೇನೆಗಳು ಹಿಂತಿರುಗುವ ಒಪ್ಪಂದ ಏರ್ಪಟ್ಟರೂ, ಡೆಪ್ಸಂಗ್ ಪ್ಲೇನ್ಸ್ ಮತ್ತು ಚಾರ್ಡಿಂಗ್ ನುಲ್ಲಾದಲ್ಲಿ ಭಾರತೀಯ ಸೇನೆಗೆ ಗಸ್ತು ಅಧಿಕಾರವನ್ನು ಚೀನಾ ಮರಳಿಸಿಲ್ಲ.