Advertisement

Indian Army: ಪಂಜಾಬ್‌ ಗಡಿಯಲ್ಲಿ ಮತ್ತೆ ಗುಂಡಿನ ದಾಳಿ… ಪಾಕ್ ನುಸುಳುಕೋರನ ಹತ್ಯೆ

11:32 AM Aug 14, 2023 | Team Udayavani |

ಪಂಜಾಬ್ : ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಒಳನುಸುಳುಕೋರನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

Advertisement

ಪಠಾಣ್‌ಕೋಟ್‌ನ ಸಿಂಬಲ್ ಸಾಕೋಲ್ ಗ್ರಾಮದ ಬಳಿ ಮಧ್ಯರಾತ್ರಿ 12:30 ರ ಸುಮಾರಿಗೆ ಗಡಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಒಳನುಸುಳಲು ಯತ್ನಿಸುತ್ತಿದ್ದ ಉಗ್ರನಿಗೆ ಎಚ್ಚರಿಕೆ ನೀಡಿದ್ದಾರೆ ಆದರೆ ಎಚ್ಚರಿಕೆ ಹೊರತಾಗಿಯೂ ಒಳನುಸುಳಲು ಯತ್ನಿಸಿದ ವೇಳೆ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿ ಉಗ್ರರನ್ನು ಹೊಡೆದುರುಳಿಸಿದೆ.

ಆಗಸ್ಟ್ 11 ರಂದು, ಬಿಎಸ್ ಎಫ್ ಪಡೆಗಳು ತರ್ನ್ ತರನ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಉಗ್ರನನ್ನು ಹತ್ಯೆಗೈದಿದ್ದರು. ಇದೀಗ ಮತ್ತೆ ಒಳನುಸುಳುವ ಯತ್ನ ನಡೆದಿದೆ.

ಇದನ್ನೂ ಓದಿ: Priyanka Gandhi ಸ್ಪರ್ಧಿಸಿದರೆ ಮೋದಿ ವಾರಣಸಿಯಲ್ಲಿ ಸೋಲಲಿದ್ದಾರೆ: ಸಂಜಯ್ ರಾವತ್ ಭವಿಷ್ಯ

Advertisement

Udayavani is now on Telegram. Click here to join our channel and stay updated with the latest news.

Next